20 ಕೆ.ಜಿ.ಪಾರ್ಲೆ-ಜಿ ಬಿಸ್ಕೆಟ್ ಬಳಸಿ ಅಯೋಧ್ಯೆ ರಾಮ ಮಂದಿರದ ಪ್ರತಿಕೃತಿ ನಿರ್ಮಿಸುವ ಮೂಲಕ ವ್ಯಕ್ತಿಯೊಬ್ಬರು ರಾಮಭಕ್ತಿ ತೋರಿಸಿದ್ದಾರೆ.
ಪಶ್ಚಿಮ ಬಂಗಾಳದ ದುರ್ಗಾಪುರ ಜಿಲ್ಲೆಯ ಛೋಟಾನ್ ಘೋಷ್ ಎಂಬವರು ಪಾರ್ಲೆ- ಜಿ ಬಿಸ್ಕೆಟ್ ಬಳಸಿ ನಾಲ್ಕು ಅಡಿ ಎತ್ತರದ ರಾಮಮಂದಿರ ಪ್ರತಿಕೃತಿ ರಚಿಸಿದ್ದಾರೆ.
ಐದು ದಿನಗಳಲ್ಲಿ ಈ ಕೆಲಸ ಪೂರ್ಣಗೊಳಿಸಿದ್ದು, ನಿರ್ಮಾಣಕ್ಕೆ ಪ್ಲೈವುಡ್, ಅಂಟು ಬಳಸಲಾಗಿದೆ. ಸ್ನೇಹಿತರು ಸಹಾಯ ಮಾಡಿದ್ದಾರೆ ಎಂದಿದ್ದಾರೆ ಛೋಟಾನ್ ಘೋಷ್