ಪುತ್ತೂರು: ಇಲ್ಲಿಯ ಮನಿಷಾ ಸಭಾಂಗಣದಲ್ಲಿ ನಡೆದ ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘದ ಪುತ್ತೂರು ಉಪಸಮಿತಿಯ 2022-23ನೇ ಸಾಲಿನ ಸರ್ವಸದಸ್ಯರ ವಾರ್ಷಿಕ ಸಭೆಯಲ್ಲಿ ಭಗವತಿ ಇಲೆಕ್ಟ್ರಿಕಲ್ಸ್ ನ ಮಾಲಕ ಲೋಕೇಂದ್ರ ಸಿಂಗ್ ಅವರನ್ನು ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘದ ಪುತ್ತೂರು ಉಪಸಮಿತಿ ಅಧ್ಯಕ್ಷ ಸೂರ್ಯನಾಥ ಆಳ್ವ, ಜಿಲ್ಲಾ ಸಮಿತಿ ಅಧ್ಯಕ್ಷ ಕುಶಲ ಪೂಜಾರಿ, ರಾಜ್ಯ ಸಮಿತಿ ಉಪಾಧ್ಯಕ್ಷ ಉರ್ಬನ್ ಪಿಂಟೋ, ದ.ಕ.ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯರಾದ ಸುಬ್ರಾಯ ಗೌಡ, ವಾಸುದೇವ ಗೌಡ, ಪುತ್ತೂರು ಉಪಸಮಿತಿ ಕಾರ್ಯದರ್ಶಿ ಅಶೋಕ್ ಗೌಡ ಕೆ., ಉಪಾಧ್ಯಕ್ಷರಾದ ಕೃಷ್ಣಪ್ರಶಾಂತ್ ಕೆ., ಕೇಶವ ಪೂಜಾರಿ ಬಿ., ಕೋಶಾಧಿಕಾರಿ ಸುಜಿತ್ ಕುಮಾರ್ ರೈ ಎನ್.ಜಿ., ಸಂಘಟನಾ ಕಾರ್ಯದರ್ಶಿ ಮಹಮ್ಮದ್ ನಿಸಾರ್, ಜೊತೆ ಕಾರ್ಯದರ್ಶಿ ಬಾಬು ನಾಯ್ಕ ಎಸ್. ಉಪಸ್ಥಿತರಿದ್ದರು.
ಸಭೆಯಲ್ಲಿ ತಾಲೂಕು ಉಪಸಮಿತಿಯ ಸದಸ್ಯರು, ಗುತ್ತಿಗೆದಾರರು ಉಪಸ್ಥಿತರಿದ್ದರು.
























