ಪುತ್ತೂರು: ಸಾಮೆತ್ತಡ್ಕ ಯುವಕ ಮಂಡಲ ಹಾಗೂ ಸಾಮೆತ್ತಡ್ಕ ಸಿಝ್ಲರ್ ಸಾಫ್ಟ್ ಡ್ರಿಂಕ್ಸ್ ಜಂಟಿ ಆಶ್ರಯದಲ್ಲಿ ದಿ.ಶ್ರೀನಾಥ ಆಚಾರ್ಯ ಸ್ಮರಣಾರ್ಥ ರಾಷ್ಟ್ರಮಟ್ಟದ ಹೊನಲು ಬೆಳಕಿನ ಓವರ್ ಆರ್ಮ್‍ಕ್ರಿಕೆಟ್ ಪಂದ್ಯಾಟ ‘ಸಿಝ್ಲರ್ ಟ್ರೋಪಿ-2024’ ಜ.20 ಹಾಗೂ 21 ರಂದು ಪುತ್ತೂರಿನ ಸಂತ ಫಿಲೋಮಿನಾ ಕಾಲೇಜಿನ ಕ್ರೀಡಾಂಗಣದಲ್ಲಿ ನಡೆಯಲಿದೆ ಎಂದು ಸಾಮೆತ್ತಡ್ಕ ಯುವಕ ಮಂಡಲದ ಅಧ್ಯಕ್ಷ ರೋಶನ್ ರೆಬೆಲ್ಲೋ ತಿಳಿಸಿದ್ದಾರೆ.
ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಕಾರ್ಯಕ್ರಮದ ವಿವರ ನೀಡಿ, ಪಂದ್ಯಾಟದಲ್ಲಿ ಒಟ್ಟು ಎಂಟು ತಂಡಗಳು ಪಾಲ್ಗೊಳ್ಳಲಿದ್ದು ದಕ್ಷಿಣ ಕನ್ನಡ ಜಿಲ್ಲೆಯ ನಂ.1 ಈವೆಂಟ್ ಇದಾಗಿದೆ. ಪಂದ್ಯಾಟದಲ್ಲಿ ಪ್ರಥಮ ಬಹುಮಾನವಾಗಿ 2 ಲಕ್ಷ ರೂ. ನಗದು, ಸಿಝ್ಲರ್ ಟ್ರೋಫಿ, ದ್ವಿತೀಯ 1 ಲಕ್ಷ ರೂ. ನಗದು ಹಾಗೂ ಸಿಝ್ಲರ್ ಟ್ರೋಫಿ, ಮ್ಯಾನ್ ಆಫ್‍ದ ಮ್ಯಾಚ್ ಗೆ ಬೈಕ್ ಬಹುಮಾನ ನೀಡಲಾಗುವುದು. ವಿಶೇಷವೆಂದರೆ ನೊಂದಾವಣಿ ಶುಲ್ಕ ಸಂಪೂರ್ಣ ಉಚಿತವಾಗಿರುತ್ತದೆ ಎಂದು ಅವರು ತಿಳಿಸಿದರು.
ಜ.20 ರಂದು ಬೆಳಿಗ್ಗೆ 6.30 ಕ್ಕೆ ಪಂದ್ಯಾಟವನ್ನು ಪುತ್ತೂರು ಸಹಾಯಕ ಆಯುಕ್ತ ಜುಪಿನ್ ಮಹಾಪಾತ್ರ ಉದ್ಘಾಟಿಸಲಿದ್ದು, ಮಾಯಿದೆ ದೇವುಸ್ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ರೆ.ಫಾ.ಲಾರೆನ್ಸ್ ಮಸ್ಕರೇನಸ್ ಸಮಾರಂಭದ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ತಹಶೀಲ್ದಾರ್ ಶಿವಶಂಕರ್, ನಗರಸಭೆ ಪೌರಾಯುಕ್ತ ಮಧು ಎಸ್.ಮನೋಹರ್, ತಾಪಂ ಕಾರ್ಯನಿರ್ವಹಣಾಧಿಕಾರಿ ನವೀನ್‍ಕುಮಾರ್ ಭಂಡಾರಿ, ನಗರಸಭೆ ನಿಕಟಪೂರ್ವ ಅಧ್ಯಕ್ಷ ಜೀವಂಧರ್ ಜೈನ್, ಸವಣೂರು ವಿದ್ಯಾರಶ್ಮಿ ಶಿಕ್ಷಣ ಸಂಸ್ಥೆಗಳ ಸಂಚಾಲಕ ಸವಣೂರು ಸೀತಾರಾಮ ರೈ ಸೇರಿದಂತೆ ಹಲವಾರು ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.
ಜ.21 ರಂದು ರಾತ್ರಿ 7 ಗಂಟೆಗೆ ನಡೆಯುವ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಸಂಸದ ನಳಿನ್ ಕುಮಾರ್ ಕಟೀಲ್, ಸಭಾಪತಿ ಯು.ಟಿ.ಖಾದರ್, ಶಾಸಕಿ ಭಾಗೀರಥಿ ಮುರುಳ್ಯ, ಮಾಜಿ ಸಚಿವರಾದ ರಮಾನಾಥ ರೈ, ಮಾಜಿ ಶಾಸಕರಾದ ಸಂಜೀವ ಮಠಂದೂರು, ಶಕುಂತಳಾ ಟಿ. ಶೆಟ್ಟಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ ಎನ್. ಪಾಳ್ಗೊಳ್ಳಲಿದ್ದಾರೆ. ಬಹುಮಾನ ವಿತರಣೆಯನ್ನು ಸಿಝ್ಲರ್ ಗ್ರೂಪ್ ಮಾಲಕ ಪ್ರಸನ್ನ ಕುಮಾರ್ ಶೆಟ್ಟಿ ನೆರವೇರಿಸಲಿದ್ದಾರೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸಾಮೆತ್ತಡ್ಕ ಯುವಕ ಮಂಡಲದ ಉಪಾಧ್ಯಕ್ಷ ಪ್ರಸಾದ್ ಪಿ., ಖಜಾಂಚಿ ಕವನ್ ನಾಯ್ಕ್ ದರ್ಬೆ, ಜತೆ ಕಾರ್ಯದರ್ಶಿ ಇಂದಿವರ್ ಭಟ್ ಸಾಮೆತ್ತಡ್ಕ, ಸದಸ್ಯರಾದ ಮಹಮ್ಮದ್ ತಾಹ ಉಪಸ್ಥಿತರಿದ್ದರು.