ಪುತ್ತೂರು: ಬಲ್ನಾಡು ಗ್ರಾಮದ ಬುಳೇರಿಕಟ್ಟೆ ಸಾಜ ಬಶೀರ್ತಡಿ ಎಂಬಲ್ಲಿ ವ್ಯಕ್ತಿಯೊಬ್ಬರು ಮಂಗಳವಾರ ತಡರಾತ್ರಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ಬುಳೇರಿಕಟ್ಟೆ ಬಶೀರ್ತಡಿ ನಿವಾಸಿ ಕುಂಞ ನಾಯ್ಕ (70) ಆತ್ಮಹತ್ಯೆ ಮಾಡಿಕೊಂಡವರು. ಮೃತರು ಬಲ್ನಾಡು ಗ್ರಾಪಂ ಉಪಾಧ್ಯಕ್ಷ ರವಿಚಂದ್ರ ಸಹಿತ ಇಬ್ಬರು ಪುತ್ರರನ್ನು ಅಗಲಿದ್ದಾರೆ.
ಸ್ಥಳಕ್ಕೆ ಗ್ರಾಮಾಂತರ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.