ಗಣರಾಜ್ಯೋತ್ಸವ ಪ್ರಯುಕ್ತ ವಿದ್ಯಾರ್ಥಿಗಳಿಗೆ ತಾಲೂಕು ಮಟ್ಟದ ಭಾಷಣ, ಪ್ರಬಂಧ, ಚಿತ್ರಕಲಾ ಸ್ಪರ್ಧೆ

ಪುತ್ತೂರು: ಗಣರಾಜ್ಯೋತ್ಸವ ಪ್ರಯುಕ್ತ ಭಾಷಣ ಸ್ಪರ್ಧೆ, ಚಿತ್ರಕಲಾ ಸ್ಪರ್ಧೆ ಹಾಗೂ ಪ್ರಬಂಧ ಸ್ಪರ್ಧೆ ಏರ್ಪಡಿಸಲಾಗಿದೆ.

ಪುತ್ತೂರು ಸಹಾಯಕರ ಮಾರ್ಗದರ್ಶನದಲ್ಲಿ ಗಣರಾಜ್ಯೋತ್ಸವದ ಮಹತ್ವ ಯುವ ಜನತೆಗೆ ತಿಳಿಯಪಡಿಸುವ ನಿಟ್ಟಿನಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ನೇತೃತ್ವದಲ್ಲಿ ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಸಂಚಾಲಕತ್ವದಲ್ಲಿ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ.

ಪುತ್ತೂರು ತಾಲೂಕಿನ ಪ್ರಾಥಮಿಕ, ಪ್ರೌಢಶಾಲಾ ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ಸ್ಪರ್ಧೆ ಏರ್ಪಡಿಸಲಾಗಿದೆ. ಮೂರು  ಸ್ಪರ್ಧೆಗಳ ವಿಷಯ ಪ್ರಜಾಪ್ರಭುತ್ವ ದಿನಾಚರಣೆ ಹಾಗೂ ಅದರ  ಮಹತ್ವ. ಪ್ರಬಂಧ 400ರಿಂದ 600 ಪದಗಳ ಮಿತಿಯಲ್ಲಿರಬೇಕು. ಚಿತ್ರವನ್ನು ಕಪ್ಪು ಬಿಳುಪು ಅಥವಾ ಬಣ್ಣದ ಪೆನ್ಸಿಲ್/ ವಾಟರ್ ಕಲರ್ / ಇತ್ಯಾದಿ  ಉಪಯೋಗಿಸಬಹುದು. ಭಾಷಣಕ್ಕೆ ಮೂರು ನಿಮಿಷದ ಕಾಲಾವಕಾಶವಿದೆ.































 
 

ಸ್ಪರ್ಧೆಯನ್ನು ಆಯಾ ಶಾಲಾ  ಮಟ್ಟದಲ್ಲಿ ಆಯಾ ಕ್ಷೇತ್ರದಲ್ಲಿ ಆಸಕ್ತಿ ಇರುವ ವಿದ್ಯಾರ್ಥಿಗಳಿಗೆ ಆಯೋಜಿಸಿ ಪ್ರಥಮ, ದ್ವಿತೀಯ ಹಾಗೂ  ತೃತೀಯ ವಿಜೇತರನ್ನು ಆಯ್ಕೆ ಮಾಡಿ ಜ. 23ರ ಸಂಜೆ 5 ಗಂಟೆಯ ಒಳಗಾಗಿ ಶಾಲೆ, ವಿಜೇತರು ಹಾಗೂ ಶಾಲಾ ಮುಖ್ಯಸ್ಥರ ಹೆಸರು, ದೂರವಾಣಿ ಸಂಪರ್ಕ ಬರೆದು ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪುತ್ತೂರು ಉಮೇಶ್ ನಾಯಕ್ ಅವರ 9844401295ಗೆ ಕಳುಹಿಸಿಕೊಡಬೇಕು. ನಂತರ ಬಂದ  ಪಟ್ಟಿಯನ್ನು ಪರಿಗಣಿಸಲಾಗುವುದಿಲ್ಲ. ವಿಜೇತ ವಿದ್ಯಾರ್ಥಿಗಳಿಗೆ ಜ. 26ರಂದು ಕೊಂಬೆಟ್ಟು ತಾಲೂಕು ಕ್ರೀಡಾಂಗಣದಲ್ಲಿ ನಡೆಯುವ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಬಹುಮಾನ ನೀಡಿ ಗೌರವಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top