ಜ. 21ರಂದು ಓವರ್ ಆರ್ಮ್ ಕ್ರಿಕೆಟ್ ಪಂದ್ಯಾಟ ಬಾಂಧವ್ಯ ಟ್ರೋಫಿ 2024 | 16 ತಂಡಗಳ ಭಾಗವಹಿಸುವಿಕೆ

ಪುತ್ತೂರು: ಕ್ರಿಕೆಟ್ ಪಂದ್ಯದ ಇತಿಹಾಸದಲ್ಲಿ ಹೊಸ ದಾಖಲೆ ಬರೆದಿರುವ ಬಾಂಧವ್ಯ ಟ್ರೋಫಿ ಜ. 21ರಂದು ನೆಹರೂನಗರ ವಿವೇಕಾನಂದ ಕಾಲೇಜು ಮೈದಾನದಲ್ಲಿ ನಡೆಯಲಿದೆ.

ಬಾಂಧವ್ಯ ಫ್ರೆಂಡ್ಸ್ ಪುತ್ತೂರು ಹಾಗೂ ವಿವಿಧ ಇಲಾಖೆಗಳ ಸಹಭಾಗಿತ್ವದಲ್ಲಿ 7ನೇ ವರ್ಷದ ನಾಕೌಟ್ ಮಾದರಿಯ 16 ತಂಡಗಳ ಓವರ್ ಆರ್ಮ್ ಕ್ರಿಕೆಟ್ ಪಂದ್ಯಾಟ ಇದಾಗಿದೆ.

ಜ. 21ರಂದು ಬೆಳಿಗ್ಗೆ 9ಕ್ಕೆ ಶಾಸಕ ಅಶೋಕ್ ಕುಮಾರ್ ರೈ ಪಂದ್ಯಾಟ ಉದ್ಘಾಟಿಸಲಿದ್ದಾರೆ. ಡಿವೈಎಸ್ಪಿ ಅರುಣ್ ನಾಗೇಗೌಡ ಅಧ್ಯಕ್ಷತೆ ವಹಿಸುವರು. ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ನಗರಸಭೆ ನಿಕಟಪೂರ್ವ ಅಧ್ಯಕ್ಷ ಜೀವಂಧರ್ ಜೈನ್, ನಗರಸಭೆ ಪೌರಾಯುಕ್ತ ಮಧು ಎಸ್. ಮನೋಹರ್, ಪೊಲೀಸ್ ನಿರೀಕ್ಷಕ ಸುನಿಲ್ ಕುಮಾರ್, ವೃತ್ತ ನಿರೀಕ್ಷಕ ರವಿ ಬಿ.ಎಸ್., ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ. ಕೃಷ್ಣ ಭಟ್, ಪೊಲೀಸ್ ಉಪನಿರೀಕ್ಷಕರಾದ ಸೇಸಮ್ಮ, ಭವಾನಿ, ಸುದ್ದಿ ಸಮೂಹ ಸಂಸ್ಥೆಗಳ ಸಿಇಓ ಸೃಜನ್ ಊರುಬೈಲ್, ಮೆಸ್ಕಾಂ ಇಂಜಿನಿಯರ್ ರಾಮಚಂದ್ರ, ಉದ್ಯಮಿಗಳಾದ ಸಹಜ್ ರೈ ಬಳಜ್ಜ, ಶಿವರಾಮ ಆಳ್ವ ಮುಖ್ಯ ಅತಿಥಿಗಳಾಗಿರುವರು.































 
 

ಸಂಜೆ 5ಕ್ಕೆ ಸಮಾರೋಪ ನಡೆಯಲಿದ್ದು, ಸುದ್ದಿ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ಡಾ. ಯು.ಪಿ. ಶಿವಾನಂದ್ ಅಧ್ಯಕ್ಷತೆ ವಹಿಸಲಿದ್ದಾರೆ. ಮಾಜಿ ಶಾಸಕ ಸಂಜೀವ ಮಠಂದೂರು, ಪೊಲೀಸ್ ಉಪನಿರೀಕ್ಷಕರಾದ ಆಂಜನೇಯ ರೆಡ್ಡಿ, ಜಂಬೂರಾಜ್ ಮಹಾಜನ್, ರಾಜೇಶ್, ಉದಯ ರವಿ, ಕುಟ್ಟಿ ಎಂ.ಕೆ., ಸುದಾನ ವಸತಿಯುತ ಶಾಲಾ ಸಂಚಾಲಕ ರೆ. ವಿಜಯ ಹಾರ್ವಿನ್, ಪುತ್ತೂರು ಪದ್ಮಾ ಸೋಲಾರ್ ಮಾಲಕ ಸೀತಾರಾಮ ರೈ, ಪ್ರೇಮ ಬೇಕರಿ ಮಾಲಕ ವಿನೋದ್, ಬಿಕೆ ಬಿಲ್ಡ್ ಮಾರ್ಟ್ ಮಾಲಕ ಮೊಯ್ದೀನ್, ಉದ್ಯಮಿ ಸುರೇಶ್ ನಾಡಾಜೆ, ಪಾಪ್ಯುಲರ್ ಸ್ವೀಟ್ ಮಾಲಕ ನರೇಂದ್ರ ಕಾಮತ್, ಮಾನಕ ಜ್ಯುವೆಲ್ಲರ್ಸ್ ಮಾಲಕ ಸಿದ್ದನಾಥ, ಕೃಷಿಕ ಶರತ್ ಚಂದ್ರ ಬೈಪಡಿತ್ತಾಯ ನರಿಮೊಗರು, ಪಿಡಬ್ಲ್ಯೂಡಿ ಕಾಂಟ್ರಾಕ್ಟರ್ ಯೋಗೀಶ್, ಮಂಗಳೂರು ಕಟೀಲ್ ಲಾಜಿಸ್ಟಿಕಿನ ಜನಾರ್ದನ ಪೂಜಾರಿ ಅತಿಥಿಯಾಗಿರುವರು.

ಈ ಸಂದರ್ಭದಲ್ಲಿ  400 ಮೀಟರ್ ಹರ್ಡಲ್ಸ್ ನ ರಾಷ್ಟ್ರೀಯ ಕ್ರೀಡಾಪಟು ಅನಘ ಕೆ.ಎ., ರಾಷ್ಟ್ರಮಟ್ಟದ ಕಬಡ್ಡಿ ಆಟಗಾರ ಜುವೆನ್ನಾ ಡ್ಯಾಝಲ್ ಕುಟಿನ್ಹಾ, ರಾಷ್ಟ್ರಮಟ್ಟದ ತ್ರೋಬಾಲ್ ಆಟಗಾರ ಮಹಮ್ಮದ್ ಶಾನ್ ಅವರನ್ನು ಸನ್ಮಾನಿಸಿ, ಗೌರವಿಸಲಾಗುವುದು.

ಪಂದ್ಯದಲ್ಲಿ ಭಾಗವಹಿಸುವ ತಂಡಗಳು:

ಪೊಲೀಸ್ ಇಲೆವೆನ್ 1, ಪೊಲೀಸ್ ಇಲೆವೆನ್ 2, ಸುದ್ದಿ ಇಲೆವೆನ್, ಹೋಂ ಗಾರ್ಡ್ ಇಲೆವೆನ್, ಮೆಸ್ಕಾಂ ಇಲೆವೆನ್, ನಗರಸಭೆ ಇಲೆವೆನ್, ದೈಹಿ ಶಿಕ್ಷಕ ಶಿಕ್ಷಣ ಇಲಾಖೆ, ಡಾಕ್ಟರ್ಸ್ ಇಲೆವೆನ್, ಲಾಯರ್ಸ್ ಇಲೆವೆನ್, ಅಸೋಸಿಯೇಷನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರ್ಸ್ ಪುತ್ತೂರು,

 ಕೆ.ಎಸ್.ಆರ್.ಟಿ.ಸಿ. ಇಲೆವೆನ್, ವಿವೇಕಾನಂದ ವಿದ್ಯಾವರ್ಧಕ ಸಂಘ, ವರ್ತಕರ ಸಂಘ, ಕ್ಯಾಂಪ್ಕೋ ಇಲೆವೆನ್, ಸೊಸೈಟಿ ಟೀಮ್, ಪುತ್ತೂರು ಪ್ರೆಸ್ ಕ್ಲಬ್ ಇಲೆವೆನ್ ತಂಡಗಳು ಪಂದ್ಯದಲ್ಲಿ ಭಾಗವಹಿಸಲಿವೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top