ಭಾರತದಲ್ಲಿ ಏಕೆ ಜಾತಿಗಣತಿ ಅಪಾಯಕಾರಿ – ಅಶ್ವಿನ್ ಎಲ್. ಶೆಟ್ಟಿ

ಭಾರತವು ಪ್ರಾಚೀನ ನಾಗರಿಕತೆಯ ತೊಟ್ಟಿಲುಗಳಲ್ಲಿ ಒಂದು ಎಂದೆಣಿಸಲ್ಪಟ್ಟಿರುವ ರಾಷ್ಟ್ರ. ಸನಾತನ ಸಂಸ್ಕೃತಿಯ ತಳಹದಿಯ ಮೇಲೆ ನೆಲೆ ನಿಂತ ಭಾರತ ಮುಂದಿನ ದಿನಗಳಲ್ಲಿ ಪ್ರಪಂಚದ  ಬೇರೆ ಬೇರೆ ಖಂಡಗಳಿಂದ ಬಂದ ಜನರಿಗೆ ಆಶ್ರಯವನ್ನು ನೀಡಿ ವಿವಿಧ ಧರ್ಮದ ಬೀಡಾಗಿದೆ. ಭಾರತವು ಇಂದು ಪ್ರತಿಯೊಂದು ವಿಷಯದಲ್ಲೂ ವಿವಿಧತೆಯಲ್ಲಿ ಏಕತೆಯನ್ನು ತೋರುವ ರಾಷ್ಟ್ರವಾಗಿದೆ.

ನಮ್ಮ ದೇಶದಲ್ಲಿ ಇಂದು ಆಡಳಿತದ ಅನುಕೂಲಕ್ಕೋಸ್ಕರ 28 ರಾಜ್ಯಗಳು ಹಾಗೂ  8 ಕೇಂದ್ರಾಡಳಿತ ಪ್ರದೇಶಗಳನ್ನು ರೂಪಿಸಲಾಗಿದೆ. ಅದರಲ್ಲಿ ಬಿಹಾರವು ಭಾರತದ ಅತ್ಯಂತ ಹಿಂದುಳಿದ ರಾಜ್ಯವಾಗಿದ್ದು, ಶಿಕ್ಷಣ, ಉದ್ಯೋಗ, ಉದ್ಯಮ, ಆರ್ಥಿಕತೆ ಹೀಗೆ ಎಲ್ಲಾ ವಿಷಯದಲ್ಲೂ ಕಡಿಮೆ ಗುಣಮಟ್ಟವನ್ನು ಹೊಂದಿದೆ. ಹೀಗಾಗಿ ಬಿಹಾರದ ರಾಜಕೀಯ ನಾಯಕರು ಅಲ್ಲಿಯ ಅಭಿವೃದ್ಧಿಗಾಗಿ ಆಸಕ್ತಿದಾಯಕ ಯೋಜನೆಗಳನ್ನು ರೂಪಿಸುತ್ತಿದ್ದಾರೆ. ಐ.ಎನ್.ಡಿ.ಐ ಮೈತ್ರಿಯನ್ನು ನಾವು ಡಾಟ್ ಅಲಯನ್ಸ್ ಎಂದು ಕರೆಯುತ್ತೇವೆ. ರಾಹುಲ್ ಬಾಬಾರವರು ಬಿಹಾರದಲ್ಲಿ ಜಾತಿ ಸಮೀಕ್ಷೆಯನ್ನು ಮಾಡಿರುವುದಾಗಿ ಘೋಷಿಸಿದ್ದಾರೆ ಮತ್ತು ಇಡೀ ಭಾರತದಲ್ಲಿ ಜಾತಿ  ಸಮೀಕ್ಷೆಯನ್ನು ಮಾಡುವ ಇಚ್ಛೆಯನ್ನು ಅವರು ಹೊಂದಿದ್ದಾರೆ. ಅವರ ಈ ಜಾತಿ ಸಮೀಕ್ಷೆ ಮುಂಬರುವ ಚುನಾವಣಾ ಮಂತ್ರವಾಗಿದೆ. ಇದು ಏನನ್ನು ಹೇಳುತ್ತದೆಯೆಂದರೆ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ.

ಇದರಿಂದ ಭಾರತದ ಜನತೆಗೆ ನ್ಯಾಯ ಸಿಗುತ್ತದೆಯೆಂದು ಅವರು ಭಾವಿಸಿದರೆ ದೊಡ್ಡ ವಿಪರ್ಯಾಸ ಬೇರೊಂದಿಲ್ಲ. ಚಿತ್ರವೊಂದರಲ್ಲಿ ಅಭಿಷೇಕ್ ಬಚ್ಚನ್ ದ್ರೋಣನ ಪಾತ್ರವನ್ನು ಮಾಡಿದ ನಂತರ ತಾನು ಭಾರತದ ಉಕ್ಕಿನ ಮನುಷ್ಯ ಎಂದು ಭಾವಿಸಿರುವ ಪರಿಸ್ಥಿತಿ ನಿರ್ಮಾಣಗೊಳ್ಳಬಹುದು. ಡಾಟ್ ಅಲಯನ್ಸ್ ಅದೇ ತಪ್ಪು ತಿಳುವಳಿಕೆಯನ್ನು ಹೊಂದಿದೆ. ಈ ನೀತಿಯು ಭಾರತದ ಮೇಲೆ ಭಾರೀ  ಋಣಾತ್ಮಕ ಪರಿಣಾಮ ಬೀರಲಿದೆ. ಭಾರತದಲ್ಲಿ ಮಗದೊಮ್ಮೆ ಒಡೆದು ಆಳುವ ನೀತಿಯು ಮರಳಿ ಮರುಕಳಿಸಬಹುದು.































 
 

ಬಿಹಾರದ ಜನಸಂಖ್ಯೆಯ ಜನಗಣತಿಯ ವರದಿಯನ್ನು ಅಕ್ಟೋಬರ್೨, ೨೦೨೩ರಂದು ಬಿಡುಗಡೆ ಮಾಡಲಾಗಿದೆ. ಈ ಸಮೀಕ್ಷೆಯನ್ನು ಅಜೇಯ ರಾಹುಲ್ ಗಾಂಧಿ ಹಾಗೂ ನಿತೀಶ್ ಕುಮಾರ್ ಅವರ ವಿನಂತಿಯ ಮೇರೆಗೆ ಮಾಡಲಾಗಿದೆ. ಯಾವಾಗ ರಾಜ್ಯದ ಅಭಿವೃದ್ಧಿಯ ಬದಲು ಜಾತಿಗಣತಿಯೇ  ಸರಕಾರದ ಆದ್ಯ ಕರ್ತವ್ಯವೆಂದು ಭಾವಿಸಲಾಗುತ್ತದೆಯೋ ಆಗ ರಾಜ್ಯದ ಜಿಎಸ್ಟಿ ಬೆಳವಣಿಗೆಯು ಋಣಾತ್ಮಕವಾಗುತ್ತದೆ. ದೇಶದ  ಪ್ರಮುಖ ಅಂಗವೆಂದು ಭಾವಿಸಲಾಗಿರುವ ಪತ್ರಕರ್ತರು ಸಾಮಾನ್ಯವಾಗಿ ಜಾತಿ ರಾಜಕಾರಣವನ್ನು ದ್ವೇಷಿಸುತ್ತಾರೆ. ಆದರೆ ಇಂದು ಅವರು ಜಾತಿ ರಾಜಕಾರಣವನ್ನು ತುಂಬಾ ಇಷ್ಟಪಡುತಿದ್ದಾರೆ. ಇದನ್ನು ಗೇಮ್ ಚೇಂಜರ್ ಎಂದು ಕರೆಯಲಾಗುತ್ತದೆ.

ಜಾತಿಗಣತಿ ಎಂಬ ಪರಿಕಲ್ಪನೆ ಹೇಗೆ ಪ್ರಾರಂಭವಾಯಿತು ಎನ್ನುವ ವಿಚಾರವನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸೋಣ. 1872 ರಲ್ಲಿ ಮೊದಲ ಬಾರಿಗೆ ಜಾತಿಗಣತಿಯನ್ನು ಮಾಡಲಾಯಿತು. ಮುಂದೆ 1941 ರ ವರೆಗೆ ಪ್ರತಿ 10 ವರ್ಷಕ್ಕೊಮ್ಮೆ ಮಾಡಲಾಯಿತು. 1951 ರಿಂದ 2011 ರ ವರೆಗೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಜನಸಂಖ್ಯೆಯ ಅಂಕಿ ಅಂಶಗಳನ್ನು ಮಾತ್ರ ಪ್ರಕಟಿಸಲಾಯಿತು. ಜಾತಿಗಣತಿಯನ್ನು 2011 ರಲ್ಲಿ ಒಮ್ಮೆ ನಡೆಸಲಾಯಿತು. ಆದರೆ ಅಂಕಿ ಅಂಶವನ್ನು ಕಾಂಗ್ರೆಸ್ ಪಕ್ಷ ಅಥವಾ ಯುಪಿಎ ಸರ್ಕಾರವು ನೀಡಲಿಲ್ಲ

ಕುತೂಹಲಕಾರಿ ಸಂಗತಿಯೆಂದರೆ ರಾಹುಲ್ ಗಾಂಧಿಯವರು ಜಾತಿಗಣತಿ  ಮತ್ತು ಜನಸಂಖ್ಯೆಗೆ ಅನುಗುಣವಾಗಿ ಸಮಾನ ಹಕ್ಕುಗಳನ್ನು ನೀಡಬೇಕು ಎಂದು ಹೇಳುತ್ತಿದ್ದಾರೆ. ಕಾಂಗ್ರೆಸ್ ನ ಪ್ರಮುಖ ಸದಸ್ಯರು ಜಾತಿಗಣತಿಯನ್ನು ವಿರೋಧಿಸಿದ ಸಮಯ ಒಂದಿತ್ತು. ಪ್ರಧಾನಿ ನೆಹರೂ ಜಾತಿಗಣತಿಗೆ ವಿರುದ್ಧವಾಗಿದ್ದರು. ಇಂದಿರಾ ಗಾಂಧಿ ಮತ್ತು ರಾಜೀವಗಾಂಧಿ ಇಬ್ಬರೂ ಮಂಡಲ್ ಆಯೋಗದ ವರದಿಯನ್ನು ಅನುಸರಿಸಲಿಲ್ಲ. ವಾಸ್ತವವಾಗಿ ಸೆಪ್ಟೆಂಬರ 06 1990 ರಂದು ಒಬ್ಬ ವ್ಯಕ್ತಿ ಸಂಸತ್ತಿನಲ್ಲಿ ಎದ್ದು ನಿಂತು ಇದು ನನ್ನ ರಾಷ್ಟ್ರವನ್ನು ಒಡೆಯಲಿದೆ ಎಂದು ಹೇಳಿದರು. ರಾಜೀವ್ ಗಾಂಧಿಯವರು ರಾಹುಲ್ಗಾಂಧಿಯವರ ತಂದೆ. ಆದರೆ ರಾಹುಲ್ ಗಾಂಧಿಯವರು ಜನರಿಗೆ ನೀಡುವ ಹಕ್ಕು ಜನರ ಸಂಖ್ಯೆಗೆ ಸಮಾನರಾಗಿರಬೇಕು ಎಂದು ಹೇಳುತ್ತಿದ್ದಾರೆ. 80 ಮತ್ತು 90ರ ದಶಕದಲ್ಲಿ ಒಬಿಸಿ ಗುಂಪುಗಳಿಂದ ಜಾತಿ ಗಣತಿಗೆ ಸಾಕಷ್ಟು ಬೇಡಿಕೆ ಮತ್ತು ಒತ್ತಡವಿತ್ತು. ಹಾಗಾಗಿ ಮಂಡಲ್ ಆಯೋಗವನ್ನು ಸ್ಥಾಪಿಸಲಾಯಿತು. ಇದು ಒಬಿಸಿ (ಹಿಂದುಳಿದ ವರ್ಗ) ಗಳ ಸಂಖ್ಯೆಯನ್ನು ಲೆಕ್ಕಹಾಕಿತು  ಮತ್ತು ಆ ಸಂಖ್ಯೆಯ ಆಧಾರದ ಮೇಲೆ ಮೀಸಲಾತಿಯನ್ನು ಶಿಫಾರಸ್ಸು ಮಾಡಿತು. ಆಯೋಗವು ನಡೆಸಿದ ಸಮೀಕ್ಷೆಯಂತೆ ದೇಶದಲ್ಲಿ 52% ಒಬಿಸಿ ವರ್ಗ ಅವರಿಗೆ 27% ನಷ್ಟು ಮೀಸಲಾತಿಯನ್ನು ನೀಡಲಾಗಿದೆ. ಈ ಘೋಷಣೆಯ ನಂತರ ಭಾರಿ ಪ್ರತಿಭಟನೆಗಳು ನಡೆದಿದ್ದವು.

ಹಿಂದುಳಿದ ವರ್ಗಗಳಿಗೆ ಮೀಸಲಾತಿಯನ್ನು ನಿರ್ಧರಿಸಿದ ನಂತರ ಮತ್ತೆ ಈಗ ಈ ವಿಷಯವನ್ನು ಏಕೆ ಎತ್ತಲಾಗುತ್ತಿದೆ. ರಾಹುಲ್ ಗಾಂಧಿಯವರು ಈ ವಿಷಯವನ್ನು ಮತ್ತೆ ಮತೆ ಏಕೆ ಪ್ರಸ್ತಾಪಿಸುತ್ತಿದ್ದಾರೆ? ಕಾಂಗ್ರೆಸ ಪಕ್ಷವು ಈಗಿರುವ ಪಟ್ಟಿಯನ್ನು ಮತ್ತೆ ತಿರುಗಿಸುವ ಕೆಲಸವನ್ನು ಏಕೆ ಮಾಡುತ್ತಿದೆ? ಮುಖ್ಯವಾಗಿ ಎರಡು ದೊಡ್ಡ ಕಾರಣಗಳನ್ನು ಗುರುತಿಸಬಹುದು. ಮೊದಲ ಕಾರಣವೆಂದರೆ ಡಾಟ ಅಯನ್ಸ್ ಒಬಿಸಿ ವರ್ಗದವರ ಮತಗಳನ್ನು ಲಘುವಾಗಿ ತೆಗೆದುಕೊಂಡಿರುವುದು ಹಾಗೂ ಹೆಸರಿಗೆ ಮಾತ್ರ ಬೆಂಬಲವನ್ನು ನೀಡುತ್ತಾ ನ್ಯಾಯದ ಬಗ್ಗೆ ಮಾತನಾಡುತ್ತಿರುವುದು. ಆದರೆ ಬಿಜೆಪಿ ಒಬಿಸಿ ವರ್ಗಗಳಿಗೆ ನಿಜವಾದ ಪ್ರಾತಿನಿಧ್ಯ, ನಿಜವಾದ ಅಧಿಕಾರ ಮತ್ತು ನಿಜವಾದ ಭಾಗವಹಿಸುವಿಕೆಯನ್ನು ನೀಡಿದೆ ಮತ್ತು ಒಬಿಸಿಗಳ ಮತವನ್ನು ತನ್ನತ್ತ ಆಕರ್ಷಿಸಿದೆ. ನಳಿನ್ ಮೆಹ್ತಾ   ದಿ ನ್ಯೂ ಬಿಜೆಪಿ ಎಂಬ ಕುತೂಹಲಕಾರಿ ಪುಸ್ತಕದಲ್ಲಿ ಬಿಜೆಪಿಯು ಕೇವಲ ಮೇಲ್ಜಾತಿಯವರ ಪಕ್ಷ ಅಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ.

•           ಇಂಜಿನಿಯರ್ ಅಶ್ವಿನ್ ಎಲ್ ಶೆಟ್ಟಿ, BE, ME, DPT, MBA, LLB

ಆಡಳಿತಾಧಿಕಾರಿಗಳು, ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳು ಸವಣೂರು

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top