ಪುತ್ತೂರು: ಮಂಗಳೂರು ನವೋದಯ ಗ್ರಾಮ ವಿಕಾಸ ಚಾರಿಟೇಬಲ್ ಟ್ರಸ್ಟ್, ಕಾವು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಸಹಭಾಗಿತ್ವದಲ್ಲಿ ಕಾವು ನವೋದಯ ಒಕ್ಕೂಟದ ವತಿಯಿಂದ ಮಂಗಳೂರು ಎಂಐಒ ಆಸ್ಪತ್ರೆಯವರಿಂದ ಕ್ಯಾನ್ಸರ್ ಬಗ್ಗೆ ಜಾಗೃತಿ ಕಾರ್ಯಕ್ರಮ ಕಾವು ಸೊಸೈಟಿ ಸಭಾಂಗಣದಲ್ಲಿ ನಡೆಯಿತು.
ಕಾವು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಅಚ್ಚುತ ಮೂಡತ್ತಾಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮುಂದೆ ಬರಬಹುದಾದ ಅನಾರೋಗ್ಯದ ಬಗ್ಗೆ ಅರಿವು-ತಿಳುವಳಿಕೆ ಇರಬೇಕಾದದ್ದು ಅತೀ ಅಗತ್ಯ. ಅದಕ್ಕಾಗಿ ಆರೋಗ್ಯ ಜಾಗೃತಿ ಕಾರ್ಯಕ್ರಮಗಳಲ್ಲಿ ಪ್ರತಿಯೊಬ್ಬರೂ ಭಾಗವಹಿಸಬೇಕು ಎಂದರು
ಮಂಗಳೂರು ಎಂಐಒ ಕ್ಯಾನ್ಸರ್ ಆಸ್ಪತ್ರೆ ವೈದ್ಯ ಡಾ.ವೆಂಕಟ್ರಮಣ ಕಿಣಿ ಮಾತನಾಡಿ, ಕ್ಯಾನ್ಸರ್ ಮಾರಕ ರೋಗವಾದರೂ ಅದನ್ನು ಸೂಕ್ತ ಚಿಕಿತ್ಸೆ ನೀಡುವ ಮೂಲಕ ಹತೋಟಿಯಲ್ಲಿಡಬಹುದು. ನಮ್ಮ ದೇಹದ ವಿವಿಧ ಭಾಗಗಳಿಗೆ ತಗಲುವ ರೋಗದ ಬಗ್ಗೆ ವಿವರಿಸಿ, ಯಾವುದೇ ಈ ರೀತಿಯ ಕಾಯಿಲೆ ಬಗ್ಗೆ ನಮ್ಮ ಗಮನಕ್ಕೆ ತಂದರೆ ಪರಿಹಾರೋಪಾಯಗಳನ್ನು ತಿಳಿಸುತ್ತೇವೆ. ಆದಾಗ್ಯೂ ಮಾರಕ ರೋಗ ಬಾರದಂತೆ ಮುನ್ನೆಚ್ಚರಿಕೆ ವಹಿಸುವುದು ಸೂಕ್ತ ಎಂದರು.
ಆಸ್ಪತ್ರೆಯ ಕೌನ್ಸಿಲರ್ ಗಳಾದ ರಾಜೇಶ್ ಶೆಟ್ಟಿ. ಶ್ರೀ ರಾಘವೇಂದ್ರ, ಕಾವು ಪ್ರಾ.ಕೃ.ಪ.ಸ.ಸಂಘದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಕೇಶವಮೂರ್ತಿ, ಕಾವು ನವೋದಯ ಟ್ರಸ್ಟ್ ನ ವಲಯ ಪ್ರೇರಕಿ ಮಾಧವಿ, ಕಾವು ನವೋದಯ ಒಕ್ಕೂಟದ ಅಧ್ಯಕ್ಷ ಸುಬ್ರಾಯ ಗೌಡ ಉಪಸ್ಥಿತರಿದ್ದರು.
ನವೀನಾ ಬಿ ಡಿ ಪ್ರಾರ್ಥಿಸಿದರು. ಸುಬ್ರಾಯ ಗೌಡ ಸ್ವಾಗತಿಸಿದರು.ಪ್ರೇರಕಿ ಮಾಧವಿ ವಮದಿಸಿದರು. ಒಕ್ಕೂಟದ ಕಾರ್ಯದರ್ಶಿ ನಿರ್ಮಲಾ ಪೂವಂದೂರು ಕಾರ್ಯಕ್ರಮ ನಿರ್ವಹಿಸಿದರು.