ಬೆಂಗಳೂರು: ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ರಾಜ್ಯದ ಜಿಲ್ಲಾ ಘಟಕಗಳಿಗೆ ಅಧ್ಯಕ್ಷರುಗಳನ್ನು ನೇಮಿಸಿ ಆದೇಶ ಹೊರಡಿಸಿದ್ದಾರೆ.
ದಕ್ಷಿಣ ಕನ್ನಡ ಬಿಜೆಪಿ ಜಿಲ್ಲಾಧ್ಯಕ್ಷರಾಗಿ ಸತೀಶ್ ಕುಂಪಲ ಹಾಗೂ ಉಡುಪಿ ಜಿಲ್ಲಾಧ್ಯಕ್ಷರಾಗಿ ಕಿಶೋರ್ ಕುಂದಾಪುರ ಅವರನ್ನು ನೇಮಿಸಲಾಗಿದೆ. ಹೀಗೆ ಪ್ರತಿ ಜಿಲ್ಲೆಗಳಿಗೂ ಅಧ್ಯಕ್ಷರನ್ನು ನೇಮಿಸಿ ಆದೇಶ ಹೊರಡಿಸಲಾಗಿದೆ.

ಇದರೊಂದಿಗೆ ಪ್ರಕೋಷ್ಠಗಳ ರಾಜ್ಯ ಸಂಯೋಜಕರಾಗಿ ಎಸ್. ದತ್ತಾತ್ರಿ ಶಿವಮೊಗ್ಗ, ರಾಜ್ಯ ಕಾರ್ಯಾಲಯ ಕಾರ್ಯದರ್ಶಿಯಾಗಿ ಲೊಕೇಶ್ ಅಂಬೆಕಲ್ಲು ಬೆಂಗಳೂರು ಉತ್ತ,ರ, ರಾಜ್ಯ ಕಾರ್ಯಾಲಯ ಸಹ ಕಾರ್ಯದರ್ಶಿಯಾಗಿ ಬಿ.ಎಚ್. ವಿಶ್ವನಾಥ್ ದಾವಣಗೆರೆ ಅವರನ್ನು ನೇಮಿಸಲಾಗಿದೆ ಎಂದು ಬಿಜೆಪಿಯ ಪ್ರಕಟಣೆ ತಿಳಿಸಿದೆ.