ನಾಳೆ ವಿಟ್ಲ ಜಾತ್ರೋತ್ಸವದಲ್ಲಿ ಸಮರ್ಪಣ್ ವಿಟ್ಲ ಅರ್ಪಿಸುವ ತುಳು ಹಾಸ್ಯಮಯ ನಾಟಕ ‘ಶಾಂಭವಿ’ ಪ್ರದರ್ಶನ

ವಿಟ್ಲ: ವಿಟ್ಲ ಮಹತೋಭಾರ ಶ್ರೀ ಪಂಚಲಿಂಗೇಶ್ವರ ದೇವರ ಕಾಲಾವಧಿ ಜಾತ್ರೋತ್ಸವದ ಅಂಗವಾಗಿ ಸಮರ್ಪಣ್ ವಿಟ್ಲ ಅರ್ಪಿಸುವ ಕುತೂಹಲಭರಿತ ತುಳು ಹಾಸ್ಯಮಮ ಸಾಮಾಜಿಕ ನಾಟಕ ‘ಶಾಂಭವಿ’ ಜ.15 ಸೋಮವಾರ ಸಂಜೆ 7 ಗಂಟೆಯ ಬಳಿಕ ಪ್ರದರ್ಶನಗೊಳ್ಳಲಿದೆ.

ಉಡುಪಿ ಅಭಿನಯ ಕಲಾವಿದರು ಅಭಿನಯಿಸುವ ಶಾಂಭವಿ ಸಾಮಾಜಿಕ ನಾಟಕದ ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆ ಅದ್ದೂರಿ ರಂಗ ವಿನ್ಯಾಸದೊಂದಿಗೆ ಬಾಲಕೃಷ್ಣ ಶೆಟ್ಟಿ ನಿಟ್ಟೂರು ಸಾರಥ್ಯದಲ್ಲಿ, ಯತೀಶ್ ಕುಮಾರ್ ಅಲೆವೂರು ಸಲಹೆಯೊಂದಿಗೆ, ಉಮೇಶ್ ಅಲೆವೂರು ಅಧ್ಯಕ್ಷತೆಯಲ್ಲಿ ನಡೆಯಲಿದೆ. ತುಳುನಾಡ ರತ್ನ ದಿನೇಶ್ ಅತ್ತಾವರ ನಿರ್ದೇಶನದ, ಕಾರ್ತಿಕ್ ಕಡೆಕಾರ್ ಸಂಗೀತ ಹಾಗೂ ಸಮಗ್ರ ನಿರ್ವಹಣೆಯ, ವಿಕ್ರಮ ಮಂಚಿ ರಚನೆಯ ನಾಟಕ ಇದಾಗಿದೆ.

ಈ ಸಂದರ್ಭದಲ್ಲಿ ಸಾಧಕರಿಗೆ ಗೌರವಾರ್ಪಣೆ ಕಾರ್ಯಕ್ರಮ ನಡೆಯಲಿದ್ದು, ಮುಖ್ಯ ಅತಿಥಿಗಳಾಗಿ ಪುತ್ತೂರು ಸರಕಾರಿ ಆಸ್ಪತ್ರೆಯ ಡಾ.ಅಜಯ್, ಪುತ್ತೂರು ಸಮರ್ಪಣಾ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ರಾಜೇಂದ್ರ ಪ್ರಸಾದ್ ಶೆಟ್ಟಿ, ವಿಟ್ಲ ಜೆಸಿಐ ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ, ವಿಟ್ಲದ ಉದ್ಯಮಿ ರಾಜೇಶ್ ತೋಡ್ಲ ಪಾಲ್ಗೊಳ್ಳಲಿದ್ದಾರೆ ಎಂದು ದೇವಸ್ಥಾನದ ಗೌರವಾಧ್ಯಕ್ಷ ಕೃಷ್ಣಯ್ಯ ಕೆ.ವಿಟ್ಲ ಅರಮನೆ ಹಾಗೂ ಅಧ್ಯಕ್ಷ ಯಶವಂತ್ ಎನ್. ತಿಳಿಸಿದ್ದಾರೆ.































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top