ಪುಣಚ ವ್ಯವಸಾಯ ಸೇವಾ ಸಹಕಾರಿ ಸಂಘದ ಚುನಾವಣೆ | ಎಲ್ಲಾ 13 ಸ್ಥಾನಗಳು ಸಹಕಾರ ಭಾರತಿ ತೆಕ್ಕೆಗೆ

ಪುಣಚ: ಪುಣಚ ವ್ಯವಸಾಯ ಸೇವಾ ಸಹಕಾರಿ ಸಂಘದ ಮುಂದಿನ ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ ಸಹಕಾರ ಭಾರತಿ ಅಭ್ಯರ್ಥಿಗಳು ಭರ್ಜರಿ ಜಯಗಳಿಸಿದ್ದಾರೆ.

ಶನಿವಾರ ನಡೆದ ಚುನಾವಣೆಯಲ್ಲಿ ಸಹಕಾರಿ ಸಂಘದ ಎಲ್ಲಾ 13 ಸ್ಥಾನಗಳಲ್ಲೂ ಸಹಕಾರ ಭಾರತಿ ಅಭ್ಯರ್ಥಿಗಳು ಜಯಗಳಿಸಿದ್ದಾರೆ.

1998 ರ ಬಳಿಕ ಮೊದಲು ಚುನಾವಣೆ ನಡೆದಿದ್ದು, ಸಹಕಾರ ಭಾರತಿ, ಬಿಜೆಪಿ ಬಂಡಾಯ, ಸ್ವತಂತ್ರ ಅಭ್ಯರ್ಥಿಗಳ ನಡುವೆ ಸ್ಪರ್ಧೆ ಏರ್ಪಟ್ಟಿತ್ತು. ಸಾಮಾನ್ಯ 7, ಎಸ್‍ಸಿ, ಎಸ್‍ಟಿ, ಹಿಂದುಳಿದ ವರ್ಗ ಎ, ಬಿ.ಯಿಂದ ತಲಾ ಒಂದು ಸ್ಥಾನ, ಮಹಿಳೆ 2 ಸ್ಥಾನ ಸೇರಿದತೆ ಒಟ್ಟು 13 ಸ್ಥಾನಗಳಿಂದ 32 ಸ್ಪರ್ಧಿಗಳು ಕಣದಲ್ಲಿದ್ದರು.































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top