ಚಾರ್ಮಾಡಿ: ಚಾಲಕನ ನಿಯಂತ್ರಣ ತಪ್ಪಿ ಟಿಪ್ಪರ್ ಲಾರಿಯೊಂದು ಪ್ರಪಾತಕ್ಕೆ ಬಿದ್ದಿದ್ದು, ಚಾಲಕ ಗಾಯಗೊಂಡು ಮಂಗಳೂರಿನ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಮೂಡಿಗೆರೆಯಿಂದ ಮಂಗಳೂರಿಗೆ ಹೋಗುತ್ತಿದ್ದ ಟಿಪ್ಪರ್ ಲಾರಿ ಚಾಲಕನ ನಿಯಂತ್ರಣ ತಪ್ಪಿ ಆಳವಾದ ಕಂದಕಕ್ಕೆ ಉರುಳಿದೆ. ಟಿಪ್ಪರ್ ಉರುಳಿ ಬಿಳುತ್ತಿದ್ದಂತೆ ಚಾಲಕ ಲಾರಿಯಿಂದ ಜಿಗಿದಿದ್ದಾನೆ ಎನ್ನಲಾಗಿದೆ.
ಬಣಕಲ್ ಪೊಲೀಸರು ಹಾಗೂ ಸ್ಥಳೀಯರು ಪ್ರಪಾತಕ್ಕೆ ಇಳಿದು ಲಾರಿಗಾಗಿ ಶೋಧ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.