ಪುತ್ತೂರು: ಭಾರತೀಯ ಜನತಾ ಪಾರ್ಟಿ ಪುತ್ತೂರು ಗ್ರಾಮಾಂತರ ಮಂಡಲದ ಪದಾಧಿಕಾರಿಗಳ ಸಭೆ ಇಂದು ನಡೆಯಿತು.
ಮಂಡಲ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವಾ ಮುಂದಿನ ಅಯೋಧ್ಯ ರಾಮ ಮಂದಿರ ಪ್ರತಿಷ್ಠಾಪನೆ ಕಾರ್ಯಕ್ರಮ, ದೇವಸ್ಥಾನ ದೈವಸ್ಥಾನ ಮಂದಿರಗಳಲ್ಲಿ ಸ್ವಚ್ಛತಾ ಕಾರ್ಯಕ್ರಮ, ವಿಕಸಿತಾ ಭಾರತ ಸಂಕಲ್ಪ ಯಾತ್ರೆ ಹಾಗೂ ವಿಶ್ವ ಕರ್ಮ ಯೋಜನೆಯನ್ನು ಯಶಸ್ವಿಗೊಳಿಸುವಂತೆ ಪದಾಧಿಕಾರಿಗಳಿಗೆ ಜವಾಬ್ದಾರಿ ನೀಡಿದರು.
ಪ್ರಧಾನ ಕಾರ್ಯದರ್ಶಿ ನಿತೀಶ್ ಕುಮಾರ್ ಶಾಂತಿವನ ವಿಕಸಿತಾ ಭಾರತ ಸಂಕಲ್ಪ ಯಾತ್ರೆ ಬಗ್ಗೆ ಮಾಹಿತಿ ನೀಡಿದರು.
ಪುರುಷೋತ್ತಮ ಮುಂಗ್ಲಿಮನೆ ಪದವಿಧರ ಕ್ಷೇತ್ರ ದ ಮತದಾರ ಸೇರ್ಪಡೆ ಬಗ್ಗೆ ಇನ್ನೂ ಅವಕಾಶ ಇದ್ದು ಅದರ ಬಗ್ಗೆ ಸೇರ್ಪಡೆ ಮಾಡುವಂತೆ ತಿಳಿಸಿದರು ವಿಶ್ವ ಕರ್ಮ ಯೋಜನೆ ಬಗ್ಗೆ ಉಪಾಧ್ಯಕ್ಷ ಹರಿ ಪ್ರಸಾದ್ ಯಾದವ್ ಮಾಹಿತಿ ನೀಡಿದರು. ಹರೀಶ್ ಬಿಜತ್ರೆ ಮತದಾರರ ಸೇರ್ಪಡೆ ಹಾಗೂ ಬೂತ್ ಪರಿಷ್ಕರಣೆ ಬಗ್ಗೆ ತಿಳಿಸಿದರು.
ಸಭೆಯಲ್ಲಿ ಮಂಡಲ ಪಧಾಧಿಕಾರಿಗಳು ಮಹಾಶಕ್ತಿಕೇಂದ್ರ ಅಧ್ಯಕ್ಷರು, ಕಾರ್ಯದರ್ಶಿ ಹಾಗೂ ಮೋರ್ಚಾ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು ಉಪಸ್ಥಿತರಿದ್ದರು