ಪುತ್ತೂರು: ಒಬ್ಬಂಟಿಯಾಗಿ ವಾಸವಾಗಿದ್ದ ಕಾರ್ಮಿಕನೋರ್ವ ಪೆರಿಗೇರಿಯ ಅಂಗಡಿ ಹೊರಭಾಗದ ಪಕ್ಕಾಸಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ಗುರುವಾರ ಬೆಳಿಗ್ಗೆ ಕೃತ್ಯ ಬೆಳಕಿಗೆ ಬಂದಿದ್ದು, ಎಷ್ಟು ಹೊತ್ತಿಗೆ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂಬ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.
ದಿ. ಅಪ್ಪಯ್ಯ ನಾಯ್ಕ ಅವರ ಪುತ್ರ, ಕಾರ್ಮಿಕ ಜಾನು ನಾಯ್ಕ (45) ಆತ್ಮಹತ್ಯೆ ಮಾಡಿಕೊಂಡವರು.
ಪೆರಿಗೇರಿಯ ತನ್ನ ಮನೆ ಸಮೀಪದ ದುರ್ಗಾ ಸ್ಟೋರ್ ಎಂಬ ಅಂಗಡಿ ಮುಂಭಾಗವೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ.