ಪುತ್ತೂರು: ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಳದಲ್ಲಿ ಕಿರುಷಷ್ಠಿ ಉತ್ಸವದ ಕುರಿತು ಪೂರ್ವಭಾವಿ ಸಭೆ ನಡೆಯಿತು.
ದೇವಸ್ಥಾನದ ಆಡಳಿತಾಧಿಕಾರಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ವರ್ಷಾವಧಿ ಜಾತ್ರೋತ್ಸವದ ದಿನದಂದು ವಿಶೇಷ ಪೂಜೆ, ಅನ್ನಸಂತರ್ಪಣೆ ನಡೆಸುವುದೆಂದು ತೀರ್ಮಾನಿಸಲಾಯಿತು.
ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಳದಲ್ಲಿ ಪ್ರತೀ ವರ್ಷ ಕಿರುಷಷ್ಠಿಗೆ ಜಾತ್ರೋತ್ಸವ ನಡೆಯುವ ಪದ್ದತಿ. ಈ ವರ್ಷ ದೇವರನ್ನು ಬಾಲಾಲಯದಲ್ಲಿ ಪ್ರತಿಷ್ಟಾಪಿಸಲಾಗಿದೆ. ಜೀರ್ಣೋದ್ಧಾರ ಕಾರ್ಯ ನಡೆಯುತ್ತಿರುವುದರಿಂದ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ನವ ಕಲಶ, ಗಣಹೋಮ ನಡೆಸಿ ಭಕ್ತಾಧಿಗಳಿಗೆ ಮಧ್ಯಾಹ್ನ ಅನ್ನಸಂತರ್ಪಣೆ ಮಾಡುವ ಬಗ್ಗೆ ತೀರ್ಮಾನಿಸಲಾಯಿತು. ವರ್ಷಾವಧಿ ಮಕರ ಸಂಕ್ರಮಣದಂದು ನಡೆಯುವ ಸಾರ್ವಜನಿಕ ಸತ್ಯನಾರಾಯಣ ಪೂಜೆ ಕಿರುಷಷ್ಠಿ ದಿನವಾದ ಜ.16 ರಂದು ಮಂಗಳವಾರ ನಡೆಸಲು ನಿರ್ಧರಿಸಲಾಯಿತು.
ಸಭೆಯಲ್ಲಿ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಬೂಡಿಯಾರ್ ರಾಧಾಕೃಷ್ಣ ರೈ, ಮಾಜಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸುಧಾಕರ ರಾವ್, ಗೌರವ ಸಲಹೆಗಾರ ಅರ್ಚಕ ಸಂದೀಪ ಕಾರಂತ, ದೇವಯ್ಯ ಗೌಡ, ದಾಮೋದರ ರೈ, ಕಿಶೋರ ಗೌಡ ಮರಿಕೆ, ವಿಠಲ ರೈ ಮೇರ್ಲ, ಬಾಲಚಂದ್ರ ಗೌಡ ದೇವಸ್ಯ, ಗಿರೀಶ್ ಕಿನ್ನಿಜಾಲ್, ಪ್ರಜ್ವಲ್ ರೈ ತೊಟ್ಲ, ಭಾರತಿ ಶಾಂತಪ್ಪ, ಸುಮಾ ಭಟ್, ಗೀತಾ ಕಾರಂತ, ಹರಿಣ ವಸಂತ ರೈ, ಹರೀಶ್ ಪೂಜಾರಿ ಕಾರ್ಪಾಡಿ, ರಾಮಚಂದ್ರ ಕುಲಾಲ್ ಬಳಕ್ಕ, ಚಂದ್ರಕಲಾ ಜಗದೀಶ ಮತ್ತಿತರರು ಉಪಸ್ಥಿತರಿದ್ದರು.