ಬೆಳ್ತಂಗಡಿ: ಒಂಟಿಸಲಗವೊಂದು ಕೃಷಿ ಭೂಮಿಗೆ ನುಗ್ಗಿ ಕೃಷಿಗೆ ಹಾನಿಯುಂಟುಮಾಡಿದ ಘಟನೆ ಧರ್ಮಸ್ಥಳ ಗ್ರಾಮದ ಮುಳಿಕಾರಿನಲ್ಲಿ ನಡೆದಿದೆ.
ಬುಧವಾರ ಬೆಳಗ್ಗಿನ ಜಾವ ಮುಳಿಕಾರು ನಿವಾಸಿ ಡೀಕಯ್ಯ ಮಲೆಕುಡಿಯ ಎಂಬವರ ತೋಟಕ್ಕೆ ನುಗ್ಗಿ ತೆಂಗಿನ ಮರವನ್ನು ನೆಲಕ್ಕುರುಳಿಸಿ ಪುಡಿಗೈದ ಕಾಡಾನೆ, ಅಡಿಕೆ, ಬಾಳೆ ಗಿಡಗಳಿಗೂ ಹಾನಿಯುಂಟುಮಾಡಿದೆ.
ಕಳೆದ ಕೆಲದಿನಗಳಿಂದ ಕಾಡಾನೆಯೊಂದು ಇದೇ ಪರಿಸರದ ಅರಣ್ಯದಲ್ಲಿ ತಿರುಗಾಟ ನಡೆಸುತ್ತಿತ್ತು ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. ಮುಳಿಕಾರಿನ ಅರಣ್ಯದಲ್ಲಿಯೇ ತಿರುಗಾಡುತ್ತಿರುವ ಆನೆ ರಾತ್ರಿ ಮತ್ತೆ ಕೃಷಿ ಭೂಮಿಗೆ ಹಾನಿ ಮಾಡುವ ಅಪಾಯವಿದ್ದು ಸ್ಥಳೀಯರಲ್ಲಿ ಆತಂಕ ಹೆಚ್ಚಿಸಿದೆ.
























