ಪುತ್ತೂರು: ಪಾಟ್ನದಲ್ಲಿ ನಡೆದ ಕನ್ವರ್ಜ್ 2023ರ ತ್ರೋಬಾಲ್ ಪಂದ್ಯದಲ್ಲಿ ಪುತ್ತೂರಿನ ಧನ್ವಿ ಜೆ. ರೈ ತಂಡ ಪ್ರಥಮ ಸ್ಥಾನ ಪಡೆದುಕೊಂಡಿದೆ.

ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಫ್ಯಾಷನ್ ಟೆಕ್ನಾಲಜಿ (nift), ಇನ್ಸ್ಟಿಟ್ಯೂಟ್ ಆಫ್ ಡಿಸೈನ್ ಮ್ಯಾನೇಜ್ಮೆಂಟ್ ಅಂಡ್ ಟೆಕ್ನಾಲಜಿ, ಸ್ಟ್ಯಾಟುಟರಿ ಇನ್ಸ್ಟಿಟ್ಯೂಟ್ ಗವರ್ನ್ ಬೈ ದ ನಿಫ್ಟ್ ಆಕ್ಟ್ 2006, ಮಿನಿಸ್ಟ್ರಿ ಆಫ್ ಟೆಕ್ಸ್ ಟೈಲ್ಸ್ ಗವರ್ಮೆಂಟ್ ಆಫ್ ಇಂಡಿಯಾ ಪಂದ್ಯವನ್ನು ಆಯೋಜಿಸಲಾಗಿತ್ತು.
ಪಂದ್ಯದಲ್ಲಿ ಬೆಂಗಳೂರು ತಂಡ ಪಾಲ್ಗೊಂಡಿದ್ದು, ತಂಡದಲ್ಲಿ ಪುತ್ತೂರಿನ ಧನ್ವಿ ಜೆ. ರೈ ಆಟವಾಡಿದ್ದರು.
ಧನ್ವಿ ಜೆ. ರೈ ಅವರು ಜಯರಾಮ ರೈ ನುಳಿಯಾಲು ಮತ್ತು ಸಾಹಿತಿ, ತುಳು ಕನ್ನಡ ಕವಯಿತ್ರಿ ಮಲ್ಲಿಕಾ ಜೆ. ರೈ ಗುಂಡ್ಯಡ್ಕ ಅವರ ಪುತ್ರಿ.
























