ಶ್ರೀ ದೇವಿ ಮಹಾತ್ಮೆ ಇನ್ನು ಪೂರ್ಣ ರಾತ್ರಿ ಪ್ರದರ್ಶನ | ಕಟೀಲು ಮೇಳಕ್ಕೆ ಹೈಕೋರ್ಟ್ ಅನುಮತಿ!

ಕಾಲಮಿತಿಯಲ್ಲಿ ನಡೆಯುತ್ತಿದ್ದ ಕಟೀಲು ಮೇಳದ ಯಕ್ಷಗಾನ ಇನ್ನು ಪೂರ್ಣರಾತ್ರಿ ನಡೆಯಲಿದೆ. ಹಳೆ ಪದ್ಧತಿಯಂತೆ ರಾತ್ರಿಯಿಡೀ ಯಕ್ಷಗಾನ ನಡೆಸಲು ಹೈಕೋರ್ಟ್ ಅನುಮತಿ ನೀಡಿದ್ದು, ಯಕ್ಷಗಾನ ಪ್ರಿಯರ ಸಂತಸಕ್ಕೆ ಕಾರಣವಾಗಿದೆ.

ಜ. 14ರಿಂದ ಮತ್ತೆ ಹಿಂದಿನಂತೆ ಪೂರ್ಣರಾತ್ರಿ ಪ್ರದರ್ಶನ ನೀಡಲು ಕಟೀಲಿನ 6 ಮೇಳಗಳು ಸಿದ್ಧವಾಗಿವೆ.

ಶಬ್ದಮಾಲಿನ್ಯ ಮಿತಿಯ ನಿಯಮದಿಂದಾಗಿ ಕಳೆದ ವರ್ಷದಿಂದ ಕಾಲಮಿತಿಗೆ ಒಳಪಟ್ಟಿದ್ದ ಕಟೀಲು ಮೇಳ ಈ ಬಾರಿಯೂ ಸುಮಾರು ಒಂದೂವರೆ ತಿಂಗಳ ಕಾಲ ಕಾಲಮಿತಿಯಲ್ಲಿ ಪ್ರದರ್ಶನ ನೀಡಿದೆ. ಹೈಕೋರ್ಟ್‌ ಆದೇಶ ಮತ್ತು ಶ್ರೀ ಕ್ಷೇತ್ರದ ಭಕ್ತರ ಅಪೇಕ್ಷೆ ಮೇರೆಗೆ ಜ. 14ರ ಮಕರ ಸಂಕ್ರಮಣದಿಂದ ಬೆಳಗ್ಗಿನವರೆಗೆ ಯಕ್ಷಗಾನ ನಡೆಯಲಿದೆ ಎಂದು ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ಕೊಡೆತ್ತೂರು ಗುತ್ತು ಸನತ್‌ ಕುಮಾರ್‌ ಶೆಟ್ಟಿ ಹಾಗೂ ಆನುವಂಶಿಕ ಮೊಕ್ತೇಸರ ವಾಸುದೇವ ಆಸ್ರಣ್ಣ ತಿಳಿಸಿದ್ದಾರೆ.































 
 

ಬೆಂಗಳೂರಿನ ಕೃಷ್ಣಕುಮಾರ್‌ ಸಲ್ಲಿಸಿದ್ದ ಅರ್ಜಿ ವಿಚಾರಣೆ ವೇಳೆ ಹೈಕೋರ್ಟ್‌, ಪೂರ್ಣರಾತ್ರಿ ಯಕ್ಷಗಾನ ಪ್ರದರ್ಶನಕ್ಕೆ ತೊಂದರೆ ಇಲ್ಲ, ನಿಯಮ ಉಲ್ಲಂಘನೆಯಾಗದಂತೆ ನೋಡಿಕೊಳ್ಳಬೇಕು ಎಂದಿತ್ತು. ಶಬ್ದಮಾಲಿನ್ಯ ಉಂಟಾಗಲಾರದು, ಧ್ವನಿವರ್ಧಕ ಬಳಕೆಯಿಂದ ಹಳ್ಳಿಗಳಲ್ಲಿ ಯಾವುದೇ ಸಮಸ್ಯೆ ಇಲ್ಲ. ನಗರದಲ್ಲಿ ಅದರ ಶಬ್ದಮಿತಿಯನ್ನು ನೋಡಿಕೊಳ್ಳಲಾಗುವುದು. ಇದು ಹರಕೆಯ ಆಟವಾದ್ದರಿಂದ ಜನರಿಗೆ ಯಾವುದೇ ಸಮಸ್ಯೆಯೂ ಆಗಲಾರದು ಎಂದು ನ್ಯಾಯಾಲಯದಲ್ಲಿ ವಾದಿಸಲಾಗಿತ್ತು.

ವಾದವನ್ನು ಒಪ್ಪಿಕೊಂಡಿರುವ ನ್ಯಾಯಾಲಯ ಆರೂ ಮೇಳಗಳಿಗೆ ಆಟವನ್ನು ಪೂರ್ಣ ರಾತ್ರಿ ನಡೆಸಲು ಅನುಮತಿ ನೀಡಿದೆ. ಕಟೀಲಿನ ಆರೂ ಮೇಳಗಳು ಬಹುತೇಕ ದೇವಿ ಮಹಾತ್ಮೆ ಪ್ರಸಂಗವನ್ನು ಪ್ರದರ್ಶಿಸುತ್ತವೆ. ಈ ಪ್ರಸಂಗಕ್ಕೆ ಕಾಲಮಿತಿ ಒಪ್ಪುವುದಿಲ್ಲ ಎಂಬ ಕೊರಗು ಯಕ್ಷಗಾನ ಪ್ರಿಯರಿಗಿತ್ತು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top