ರಾಮಮಂದಿರ ಉದ್ಘಾಟನೆಯಂದು ಮೌನ ವ್ರತ ಮುರಿಯಲಿದ್ದಾರೆ ಮೌನಿ ಮಾತಾ!!

ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣದ ನಂತರ ಮೌನ ಮುರಿಯುತ್ತೇನೆ ಎಂದು ಶಪಥಗೈದಿದ್ದ ಮಹಿಳೆಯೊಬ್ಬರು ಬರೋಬ್ಬರಿ 30 ವರ್ಷದ ನಂತರ ಮಾತನಾಡಲಿದ್ದಾರೆ. ಜಾರ್ಖಂಡ್ನ 85 ವರ್ಷದ ಸರಸ್ವತಿ ದೇವಿ 1992ರ ಡಿ. 6ರಂದು ಜನ್ಮಸ್ಥಾನದಲ್ಲಿ ದಾಳಿಕೋರರು ನಿರ್ಮಿಸಿದ್ದ ಕಟ್ಟಡ ಕರಸೇವಕರಿಂದ ನೆಲಸಮವಾಗಿದ್ದು, ಅಂದು ಸರಸ್ವತಿ ದೇವಿ ಮೌನವ್ರತ ಕೈಗೊಂಡಿದ್ದರು.

ಜ.22 ರಂದು ಸರಸ್ವತಿ ದೇವಿ ಅಗರ್ವಾಲ್ ತಮ್ಮ ಕನಸು ನನಸಾಗುತ್ತಿರುವುದರಿಂದ ಅಂದಿನಿಂದ ಮತ್ತೆ ಮಾತನಾಡಲು ತೀರ್ಮಾನಿಸಿದ್ದಾರೆ. 30 ವರ್ಷದ ಅವರ ಮೌನ ದೀಕ್ಷೆ ಕೊನೆಗೊಳ್ಳುವ ಕಾಲ ರಾಮಮಂದಿರ ನಿರ್ಮಾಣದೊಂದಿಗೆ ಸನ್ನಿಹಿತವಾಗಿದೆ.

ಮೌನಿ ಮಾತಾ ಎಂದೇ ಸರಸ್ವತಿ ದೇವಿಯನ್ನು ಜನರು ಕರೆಯುತ್ತಿದ್ದರು. ತನ್ನ ಕುಟುಂಬದ ಸದಸ್ಯರು ಅಥವಾ ಸಾರ್ವಜನಿಕರೊಂದಿಗೆ ಕೇವಲ ಸಂಕೇತದಿಂದ ಸಂವಹನ ನಡೆಸುತ್ತಿದ್ದ ಆಕೆ ಕೆಲವು ಸಂದರ್ಭಗಳಲ್ಲಿ ಕಾಗದದ ಮೇಲೆ ದೊಡ್ಡ ಅಕ್ಷರದಲ್ಲಿ ಬರೆದು ತೋರಿಸುತ್ತಿದ್ದರು.































 
 

ರಾಮಮಂದಿರ ಉದ್ಘಾಟನೆ ಸಂದರ್ಭ ರೈಲಿನಲ್ಲಿ ಅಯೋಧ್ಯೆಗೆ ತೆರಳುತ್ತಿರುವುದಾಗಿ ಮೌನಿ ಮಾತಾ ಪುತ್ರ ಹರೇ ರಾಮ್ ಅಗರ್ವಾಲ್ (55) ತಿಳಿಸಿದರು. ಮಹಂತ್ ನೃತ್ಯ ಗೋಪಾಲ್ ದಾಸ್ ಸೇವಾಕುಲ ತನ್ನ ತಾಯಿಯನ್ನು ಆಹ್ವಾನಿಸಿದ್ದಾರೆ. 1986 ರಲ್ಲಿ ನಮ್ಮ ತಂದೆ ದೇವಕಿನಂದನ್ ಅಗರ್ವಾಲ್ ಮೃತಪಟ್ಟ ಬಳಿಕ ನಮ್ಮ ತಾಯಿ ಸರಸ್ವತಿ ದೇವಿ ತನ್ನ ಜೀವನವನ್ನು ಶ್ರೀರಾಮನಿಗೆ ಅರ್ಪಿಸಿದರು ಎಂದು ಅವರು ತಿಳಿಸಿದ್ದಾರೆ.

ಸರಸ್ವತಿ ದೇವಿ ಪ್ರಸ್ತುತ ಎರಡನೇ ಮಗ ನಂದ್ ಲಾಲ್ ಅಗರ್ವಾಲ್ ಜೊತೆ ಇದ್ದಾರೆ. ಆಕೆಯ ಸೊಸೆ ಇನ್ನು ಅಗರ್ವಾಲ್ ಮಾತನಾಡಿ, ಸರಸ್ವತಿ ದೇವಿಯು ಮುಂಜಾನೆ 4 ಗಂಟೆಗೆ ಏಳುತ್ತಾರೆ. ಆರು ಗಂಟೆಗೆ ಧ್ಯಾನ ಮಾಡುತ್ತಾರೆ. ಸಂಧ್ಯಾ ಆರತಿಯ ನಂತರ ರಾಮಾಯಣ ಮತ್ತು ಭಗವದ್ಗೀತೆಯಂತಹ ಪುಸ್ತಕಗಳನ್ನು ಓದುತ್ತಾರೆ. ದಿನಕ್ಕೆ ಒಂದು ಹೊತ್ತಿನ ಊಟವನ್ನು ಮಾತ್ರ ತಿನ್ನುತ್ತಾರೆ. ಬೆಳಗ್ಗೆ ಮತ್ತು ಸಂಜೆ ಒಂದು ಲೋಟ ಹಾಲು ಕುಡಿಯುತ್ತಾರೆ ಎಂದು ಹೇಳುತ್ತಾರೆ. ಅನ್ನ, ದಾಲ್ ಮತ್ತು ರೊಟ್ಟಿಗಳನ್ನು ಒಳಗೊಂಡಿರುವ ಸಸ್ಯಾಹಾರಿ ಆಹಾರವನ್ನು ತಿನ್ನುತ್ತಾರೆ ಎಂದು ಆಕೆ ವಿವರಿಸಿದ್ದಾರೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top