ಜ.14ರಂದು ಪುತ್ತೂರಿನ ತೆಂಕಿಲದಲ್ಲಿ ಅಯೋಧ್ಯೆಯ ಸಮಗ್ರ ಕಥನ `ಶ್ರೀರಾಮ ಕಥಾ ವೈಭವ” | 3 ಗಂಟೆ, 3 ವೇದಿಕೆ, 300 ವಿದ್ಯಾರ್ಥಿಗಳು `ಶ್ರೀರಾಮ ಕಥಾ ವೈಭವ’ದ ವಿಶೇಷತೆ

ಪುತ್ತೂರು: ರಾಮನ ಚರಿತ್ರೆಯನ್ನು‌ ಯುವಜನಾಂಗಕ್ಕೆ ತಿಳಿಸುವ ಉದ್ದೇಶದಿಂದ ಜ.14 ರಂದು ಪುತ್ತೂರಿನ ತೆಂಕಿಲದ ವಿವೇಕ ನಗರದಲ್ಲಿ ವೈಭವದ ಆಯೋಧ್ಯೆಯ ಸಮಗ್ರ ಕಥನವನ್ನು ಪ್ರಸ್ತುತಪಡಿಸುವ ‘ಶ್ರೀರಾಮ ಕಥಾ ವೈಭವ’ ಕಾರ್ಯಕ್ರಮ ನಡೆಯಲಿದೆ ಎಂದು ಶ್ರೀರಾಮ ಕಥಾ ವೈಭವ ಸಾಂಸ್ಕೃತಿಕ ಸಮಿತಿ ಗೌರವಾಧ್ಯಕ್ಷ ಬಲರಾಮ ಆಚಾರ್ಯ ಹೇಳಿದರು.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜ.14 ರಂದು ಸಂಜೆ 6 ರಿಂದ ರಾತ್ರಿ 9 ಗಂಟೆಯವರೆಗೆ ನಡೆಯಲಿರುವ ಈ ಕಾರ್ಯಕ್ರಮಕ್ಕೆ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಪ್ರಭಾಕರ ಭಟ್ ಕಲ್ಲಡ್ಕ ದೀಪ ಪ್ರಜ್ವಲನೆಗೈದು ಚಾಲನೆ ನೀಡಲಿದ್ದಾರೆ. ಮಂಗಳೂರು ಲೋಕಸಭಾ ಕ್ಷೇತ್ರದ ಸಂಸದ ನಳಿನ್ ಕುಮಾರ್ ಕಟೀಲ್, ಮಾಜಿ ಸಚಿವ ಪ್ರಮೋದ್‌ ಮಧ್ವರಾಜ್, ಶಾಸಕರಾದ ಮಂಗಳೂರು ಉತ್ತರದ ಡಾ.ವೈ. ಭರತ್ ಶೆಟ್ಟಿ, ಬೆಳ್ತಂಗಡಿಯ ಹರೀಶ್ ಪೂಂಜಾ, ಬೈಂದೂರಿನ ಗುರುರಾಜ್ ಗಂಟೆಹೊಳೆ, ಸುಳ್ಯದ ಭಾಗೀರಥಿ ಮುರುಳ್ಯ, ಎಂಆರ್‌ಜಿ ಗ್ರೂಪ್‌ನ ಅಧ್ಯಕ್ಷ ಕೆ. ಪ್ರಕಾಶ್ ಶೆಟ್ಟಿ, ಬರೋಡಾದ ತುಳು ಸಂಘದ ಅಧ್ಯಕ್ಷ ಶಶಿಧರ ಶೆಟ್ಟಿ ಬರೋಡಾ, ಭಾರತ್ ಕೊ-ಅಪರೇಟಿವ್ ಬ್ಯಾಂಕ್ ಉಪಾಧ್ಯಕ್ಷರು, ರಾಷ್ಟ್ರೀಯ ಬಿಲ್ಲವ ಮಹಾಮಂಡಲದ ಅಧ್ಯಕ್ಷ ಸೂರ್ಯಕಾಂತ್ ಜಯ ಸುವರ್ಣ, ಬಿಜೆಪಿ ದಕ್ಷಿಣ, ಮುಂಬೈಯ ಪ್ರಧಾನ ಕಾರ್ಯದರ್ಶಿ ವಿಜಯ ಶೆಟ್ಟಿ ಪಣಕಜಿ, ಅದಾನಿ ಗ್ರೂಪ್ ಕರ್ನಾಟಕದ ಅಧ್ಯಕ್ಷರು ಮತ್ತು ಆಡಳಿತ ನಿರ್ದೇಶಕ ಕಿಶೋ‌ರ್ ಅಳ್ವ, ಬೆಂಗಳೂರಿನ ಉದ್ಯಮಿ ಕಿರಣಚಂದ್ರ ಡಿ., ದೈವ ನರ್ತಕರು ಮತ್ತು ಸಿವಿಲ್ ಇಂಜಿನಿಯರ್ ಡಾ. ರವೀಶ್ ಪಡುಮಲೆ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದರು.

ಸಮಿತಿಯ ಪ್ರಧಾನ ಕಾರ್ಯದರ್ಶಿ ಎಸ್. ದಾಮೋದರ ಪಾಟಾಳಿ ಮಾತನಾಡಿ, ಶ್ರೀರಾಮ ಕಥಾ ವೈಭವ ಸಾಂಸ್ಕಂತಿಕ ಸಮಿತಿ, ವಿವೇಕಾನಂದ ವಿದ್ಯಾವರ್ಧಕ ಸಂಘದ ಅಂಗ ಸಂಸ್ಥೆಗಳಾದ ವಿವೇಕಾನಂದ ಕಾಲೇಜ್ ಆಫ್ ಇಂಜಿನಿಯರಿಂಗ್ ಅಂಡ್ ಟೆಕ್ನಾಲಜಿ, ವಿವೇಕಾನಂದ ಕಾನೂನು ಮಹಾವಿದ್ಯಾಲಯ, ವಿವೇಕಾನಂದ ಕಾಲೇಜ್ ಆಫ್ ಎಜುಕೇಶನ್, ನರೇಂದ್ರ ಪದವಿ ಪೂರ್ವ ಕಾಲೇಜು, ವಿವೇಕಾನಂದ ಅಂಗ್ಲ ಮಾಧ್ಯಮ ಶಾಲೆ, ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಗಳ ಸಂಯುಕ್ತ ಆಶ್ರಯದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.































 
 

ರಾಮಾಯಣ ಭಾರತೀಯರ ಮಹಾ ಕಾವ್ಯ. ಇದು ರಾಮನ ಇತಿಹಾಸವನ್ನು ಹೇಳುವುದರೊಂದಿಗೆ ತ್ರೇತಾಯುಗದಲ್ಲಿ ಜನಿಸಿದ ಶ್ರೀರಾಮನ ಬದುಕು ಇಂದಿಗೂ ಭಾರತೀಯರ ಜೀವನ ಶೈಲಿಯ ಮೇಲೆ ಆಳವಾದ ಪ್ರಭಾವ ಬೀರುತ್ತಿದೆ ಎಂಬುದನ್ನು ಪ್ರತಿಬಿಂಬಿಸುತ್ತದೆ. ಆತನ ಅತ್ಯುನ್ನತ ಆದರ್ಶಗಳು, ನಡೆದು ಬಂದ ದಾರಿ, ನಂಬಿದ ಧರ್ಮ ಮತ್ತು ಆತನಲ್ಲಿರುವ ಗುಣ ಲಕ್ಷಣಗಳು ಆತನನ್ನು ದೇವರ ಅವತಾರವನ್ನಾಗಿ ಮಾಡಿತು. ಶ್ರೀರಾಮ ಭಾರತದ ಆತ್ಮ. ಅದು ಜೀವನ ಮೌಲ್ಯಗಳ ಪ್ರತಿರೂಪ. ರಾಮ ಕಥಾ ವೈಭವ ಪ್ರಸ್ತುತಿಯ ಮೂಲಕ ಅಯೋಧ್ಯೆಯಲ್ಲಿ ಶ್ರೀರಾಮ ರಾಷ್ಟ್ರ ಮಂದಿರದ ಉಗಮದ ಮಹಾಸಂಕಲ್ಪ ಪೂರ್ಣವಾಗುವ ರಾಷ್ಟ್ರ ಯಜ್ಞವಾಗಿದೆ ಎಂದರು.

ವಿವೇಕಾನಂದ ವಿದ್ಯಾವರ್ಧಕ ಸಂಘದ ಜತೆ ಕಾರ್ಯದರ್ಶಿ ರೂಪಲೇಖಾ ಮಾತನಾಡಿ, 200 – 300ರಷ್ಟು ವಿದ್ಯಾರ್ಥಿಗಳು ಪ್ರಸ್ತುತ ಪಡಿಸಲಿರುವ ಶ್ರೀ ರಾಮ ಕಥಾ ವೈಭವ ನೃತ್ಯ ರೂಪಕವಾಗಿ ಮೂಡಿಬರಲಿದೆ. 3 ಗಂಟೆಯ ಕಾರ್ಯಕ್ರಮ 3 ವೇದಿಕೆಯಲ್ಲಿ ಮೂಡಿಬರಲಿದೆ. ಮಧ್ಯಭಾಗದಲ್ಲಿ ದೊಡ್ಡ ವೇದಿಕೆ, ಇಕ್ಕೆಲಗಳಲ್ಲಿ ಎರಡು ವೇದಿಕೆ ಇರಲಿದೆ. ಶ್ರೀರಾಮನ ಕಥೆಯಿಂದ ಹಿಡಿದು ಅಯೋಧ್ಯೆಯ ಹೋರಾಟದವರೆಗೂ ಕಥೆಯನ್ನು ತಿಳಿಸಿಕೊಡಲಾಗುವುದು ಎಂದರು.

ಶ್ರೀರಾಮ ಕಥಾ ವೈಭವ ಹಾಗೂ ಶ್ರೀರಾಮ ಜನ್ಮಭೂಮಿ ಯಶೋಗಾಥೆ ಅಂದು-ಇಂದು-ಎಂದೆಂದೂ ಶ್ರೀರಾಮ, ಶ್ರೀರಾಮ ಕಥಾ ವೈಭವದ ಒಂದನೇ ಭಾಗ, ರಾಮ ನಾಮ ವ್ಯಾಹರಣ, ವಾಲ್ಮೀಕಿ ಮಹರ್ಷಿಗಳು ಗಳಿಸಿದ ದಿವ್ಯ ಶಕ್ತಿ, ಕ್ರೌಂಚ ಮಿಥುನವನ್ನು ಕಂಡು ಹೊರ ಹೊಮ್ಮಿದ ಶಾಪ ವಾಕ್ಯ, ಮಾನಿಷಾದ ಶ್ಲೋಕದ ಉತ್ಪತ್ತಿ, ರಾಮಾಯಣ ಮಹಾಕಾವ್ಯಕ್ಕೆ ಮೂಲಧಾತು, ವಾಲ್ಮೀಕಿ ಆದಿ ಕವಿಯಾದ ಬಗೆ, ರಾಮ ಚರಿತೆ, ಪುತ್ರ ಕಾಮೇಷ್ಠಿ, ಯಜ್ಞ ಸಂರಕ್ಷಣೆ, ತಾಟಕೀ ಸಂಹಾರ ಮತ್ತಿತರ ಯಶೋಗಾಥೆಯನ್ನು ವಿದ್ಯಾರ್ಥಿಗಳು ಪ್ರಸ್ತುತಪಡಿಸಲಿದ್ದಾರೆ ಎಂದು ವಿವರಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಸಮಿತಿ ಅಧ್ಯಕ್ಷ ಕಿಶೋರ್ ಕುಮಾರ್ ಬೊಟ್ಯಾಡಿ, ಉಪಾಧ್ಯಕ್ಷ ಡಾ. ಪ್ರಸನ್ನ ಉಪಸ್ಥಿತರಿದ್ದರು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top