ನವದೆಹಲಿ: ದೇಶದ 430 ಕಡೆಯಿಂದ ಆಯೋಧ್ಯೆಗೆ ರೈಲು ಸೇವೆ ನೀಡಲು ನಿರ್ಧರಿಸಲಾಗಿದೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.
ಜನವರಿ 25 ರಿಂದ 60 ದಿನಗಳ ಕಾಲ ವಿಶೇಷ ಹಾಗೂ ಹೆಚ್ಚುವರಿ ರೈಲುಗಳು ಆಯೋಧ್ಯೆಯತ್ತ ಸಂಚರಿಸಲಿವೆ. ಪ್ರತಿ ದಿನ 35 ರೈಲುಗಳು ಆಯೋಧ್ಯೆ ತೆರಳುವ ಭಕ್ತರಿಗೆ ಸೇವೆ ನೀಡಲಿವೆ ಎಂದು ಬಿಜೆಪಿ ಸಭೆಯಲ್ಲಿ ಹೇಳಿದರು.
ಈ ಮೂಲಕ ಜನಸಾಮಾನ್ಯರಿಗೆ ಕೇಂದ್ರ ಸರ್ಕಾರ ಶ್ರೀರಾಮ ಮಂದಿರ ದರ್ಶನಕ್ಕೆ ವಿಶೇಷ ವ್ಯವಸ್ಥೆ ಮಾಡಿದೆ.
ದೇಶಾದ್ಯಂತ ದೀಪಾವಳಿ ಸಡಗರ ಮನೆ ಮಾಡಬೇಕು. ಆಯೋಧ್ಯೆಯ ಐತಿಹಾಸಿಕ ರಾಮ ಮಂದಿರ ಉದ್ಘಾಟನೆ ದೇಶದ ಹೊಸ ಬೆಳಕಿಗೆ ನಾಂದಿ ಹಾಡಬೇಕು ಎಂದು ಇದೇ ವೇಳೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಹೇಳಿದ್ದಾರೆ.