ಚೆನ್ನಾವರ : ಶನಿವಾರ ರಾತ್ರಿ ಸುರಿದ ಧಾರಕಾರ ಮಳೆಗೆ ಚೆನ್ನಾವರ ಬಳಿಯ ಗೌರಿ ಹೊಳೆಯ ಕಿಂಡಿ ಅಣೆಕಟ್ಟಿನ ಒಂದು ಪಾರ್ಶ್ವ ಒಡೆದು ಅಪಾರ ಪ್ರಮಾಣದ ಕೃಷಿ ಭೂಮಿ ನಷ್ಟವಾಗಿದೆ.

ತೋಟಕ್ಕೆ ನೀರು ಹರಿದು ಮಣ್ಣು ಕುಸಿದಿದ್ದು, ಅಡಕೆ ಮರಗಳು ಧರೆಗುರುಳಿ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದೆ.
ಸ್ಥಳಕ್ಕೆ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ರವರು ಭೇಟಿ ನೀಡಿದ್ದು, ಅಧಿಕಾರಿಗಳಿಗೆ ಪರಿಹಾರ ನೀಡಬೇಕೆಂದು ಸೂಚಿಸಿದರು.