ಪುತ್ತೂರು: ರೋಟರ್ಯಾಕ್ಟ್ ಕ್ಲಬ್ ಪುತ್ತೂರು ಇದರ ಆಶ್ರಯದಲ್ಲಿ ರೋಟರ್ಯಾಕ್ಟ್ ಜಿಲ್ಲಾ ಪ್ರತಿನಿಧಿ ನೇತೃತ್ವದಲ್ಲಿ ಐಕ್ಯಂ ಜಿಲ್ಲಾ ಸಮ್ಮೇಳನ ಶನಿವಾರ ಇಲ್ಲಿನ ಕೋಟೆಚಾ ಹಾಲಿನಲ್ಲಿ ಉದ್ಘಾಟನೆಗೊಂಡಿತು.
ಎರಡು ದಿನಗಳ ಕಾಲ ನಡೆಯಲಿರುವ ಜಿಲ್ಲಾ ಸಮ್ಮೇಳನವನ್ನು ರೋಟರಿ ಗವರ್ನರ್ ಎಚ್.ಆರ್. ಗವರ್ನರ್ ಎಚ್.ಆರ್. ಕೇಶವ್ ಉದ್ಘಾಟಿಸಿ, ಶುಭಹಾರೈಸಿದರು.
ಎ.ಆರ್.ಪಿ.ಐ.ಸಿ. ಝೋನ್ 7ರ ಪಿಡಿಜಿ ಅಭಿನಂದನ್ ಶೆಟ್ಟಿ ದಿಕ್ಸೂಚಿ ಭಾಷಣ ಮಾಡಿದರು.
ಡಿ.ಆರ್.ಸಿ.ಸಿ. ಮಹಮ್ಮದ್ ಅಸ್ಲಾಂ, ರೋಟರಿ ಝೋನ್ 5ರ ಅಸಿಸ್ಟೆಂಟ್ ಗವರ್ನರ್ ನರಸಿಂಹ ಪೈ, ಪುತ್ತೂರು ರೋಟರಿ ಕ್ಲಬ್ ಅಧ್ಯಕ್ಷ ಜೈರಾಜ್ ಭಂಡಾರಿ, ಡಿ.ಆರ್.ಆರ್. ರಾಹುಲ್ ಆಚಾರ್ಯ, ಪುತ್ತೂರು ರೋಟರ್ಯಾಕ್ಟ್ ಕ್ಲಬ್ ಸಭಾಪತಿ ಪ್ರೇಮಾನಂದ್ ಮುಖ್ಯ ಅತಿಥಿಗಳಾಗಿದ್ದರು.
ಪುತ್ತೂರು ರೋಟರ್ಯಾಕ್ಟ್ ಕ್ಲಬ್ ಅಧ್ಯಕ್ಷೆ ಜ್ಯೋತಿಕಾ ಅಧ್ಯಕ್ಷತೆ ವಹಿಸಿದ್ದರು.
ಜಿಲ್ಲಾ ಸಮ್ಮೇಳನದ ಛೇರ್ ಮೆನ್ ರಜತ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಿ.ಆರ್.ಎಸ್. ಚರಿಷ್ಮಾ, ರೋಟರ್ಯಾಕ್ಟ್ ಕ್ಲಬ್ ಕಾರ್ಯದರ್ಶಿ ಧನುಶಾ ಅತಿಥಿಗಳನ್ನು ಪರಿಚಯಿಸಿದರು. ಜಿಲ್ಲಾ ರೋಟರ್ಯಾಕ್ಟ್ ಕಾರ್ಯದರ್ಶಿ ಶ್ರೇಯಸ್ ವಂದಿಸಿದರು. ಐಪಿಪಿ ಗಣೇಶ್ ಎನ್. ಕಲ್ಲರ್ಪೆ ಕಾರ್ಯಕ್ರಮ ನಿರೂಪಿಸಿದರು.
ಬಳಿಕ ರಾಕೇಶ್ ಬಾಬು, ಪ್ರಸನ್ನ ಕುಮಾರ್ ಅವರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ, ಮಾಹಿತಿ ನೀಡಿದರು. ಪಪ್ಪೆಟ್ ಶೋ, ಕ್ಲಬ್ ಪ್ರೆಸೆಂಟೇಷನ್, ಕ್ಲಬ್ ಬ್ಯಾನರ್ ಪ್ರೆಸೆಂಟೇಷನ್ ಮೊದಲಾದ ಕಾರ್ಯಕ್ರಮ ನಡೆಯಿತು. ಜ. 7ರಂದು ಸಂಜೆ ಐಕ್ಯಂ ಜಿಲ್ಲಾ ಸಮ್ಮೇಳನ ಸಮಾರೋಪಗೊಳ್ಳಲಿದೆ.