ರಾಜ್ಯ ಸರಕಾರ ಹತಾಶೆ ಭಾವದಿಂದ ಹಿಂದೂ ವಿರೋಧಿ ಹೇಳಿಕೆಗಳನ್ನು ನೀಡುತ್ತಿದೆ | ಪತ್ರಿಕಾಗೋಷ್ಠಿಯಲ್ಲಿ ಡಾ.ಕೃಷ್ಣಪ್ರಸನ್ನ

ಪುತ್ತೂರು: ಅಯೋಧ್ಯೆಯಲ್ಲಿ ಶ್ರೀರಾಮನ ಭವ್ಯ ಮಂದಿರ ನಿರ್ಮಾಣವಾಗಿ, ಶ್ರೀರಾಮನ ಪ್ರತಿಷ್ಠಾಪನೆ ನಡೆಯಲಿರುವ ಸಂದರ್ಭದಲ್ಲಿ ಹಿಂದುಗಳು ಒಗ್ಗಟ್ಟಾಗಿ ಭಕ್ತಿಭಾವದಿಂದ ನಡೆದುಕೊಳ್ಳುವ ಕಾರ್ಯವಾಗುತ್ತಿದೆ. ಇದನ್ನು ನೋಡಿ ಹತಾಶೆಯ ಭಾವನೆಯಿಂದ ರಾಜ್ಯ ಸರ್ಕಾರದ ಪ್ರಮುಖರು ಹಿಂದು ವಿರೋಧಿ ಹೇಳಿಕೆಗಳನ್ನು ನೀಡುತ್ತಿದ್ದು, ಇದನ್ನು ವಿಶ್ವ ಹಿಂದು ಪರಿಷತ್ ಹಾಗೂ ಇತರ ಸಂಘ ಪರಿವಾರದ ಎಲ್ಲಾ ಸಂಘಟನೆಗಳು ಖಂಡಿಸುತ್ತದೆ. ಇಂತಹ ಹುನ್ನಾರವನ್ನು ರಾಜ್ಯ ಸರ್ಕಾರ ಗಮನದಲ್ಲಿಟ್ಟುಕೊಂಡು ತಡೆಯುವ ಕಾರ್ಯ ಮಾಡಬೇಕು ಎಂದು ವಿಶ್ವ ಹಿಂದೂ ಪರಿಷತ್ ಪುತ್ತೂರು ಜಿಲ್ಲಾಧ್ಯಕ್ಷ ಡಾ.ಕೃಷ್ಣ ಪ್ರಸನ್ನ ಹೇಳಿದರು.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ರಾಮನ ಹಾಗೂ ರಾಮ ಮಂದಿರದ ಬಗ್ಗೆ ವಿರೋಧವನ್ನು ಮಾಡಿದವರು, ರಾಮ ಅಸ್ಥಿತ್ವವೇ ಕಾಲ್ಪನಿಕ ಎಂದು ಅಫಿದವಿತ್ ಸಲ್ಲಿಸಿದವರಿಗೆ ರಾಮ ಮಂದಿರವನ್ನು ನೋಡುವುದು ಹಾಗೂ ಅದರ ಬಗ್ಗೆ ಜನರಲ್ಲಿರುವ ಪೂಜ್ಯ ಭಾವನೆ ಹಾಗೂ ಭಕ್ತಿ ಶ್ರದ್ಧೆಯ ಶಕ್ತಿಯನ್ನು ನೋಡಿ ಹತಾಶೆಯಾಗುವುದು ಸಹಜ. ಗೋದ್ರಾ ಹತ್ಯಾಕಾಂಡದಂತ ಘಟನೆ ಮತ್ತೆ ಕರ್ನಾಟಕದಲ್ಲಿ ಮರುಕಳಿಸಬಹುದೆಂಬ ಹೇಳಿಯನ್ನು ಯಾವ ಆಧಾರದಲ್ಲಿ ಹೇಳಿದ್ದಾರೆಂಬ ಪ್ರಶ್ನೆ ಮೂಡುತ್ತದೆ. ಈ ಹೇಳಿಕೆ ಬಹಳಷ್ಟು ಕಳವಳಕಾರಿ ಹಾಗೂ ಆತಂಕಕಾರಿ ಹೇಳಿಕೆಯಾಗಿದೆ ಮತ್ತು ಸಮಾಜದಲ್ಲಿ ಅಶಾಂತಿಯನ್ನು ಸೃಷ್ಠಿಸುವ ಕಾರ್ಯವನ್ನು ಮಾಡುತ್ತಿದ್ದಾರೆ. ಅಯೋಧ್ಯೆಗೆ ತೆರಳುವ ಜನರನ್ನು ಹೆದರಿಸುವಂತಹ ಹೇಳಿಕೆಯನ್ನು ನೀಡುವ ಮೊದಲು ಆಧಾರಗಳನ್ನು ಬಹಿರಂಗ ಪಡಿಸುವ ಕಾರ್ಯವಾಗಬೇಕು ಎಂದು ಆಗ್ರಹಿಸಿದರು.

ವಿಶ್ವ ಹಿಂದೂ ಪರಿಷತ್ ಹಿರಿಯ ಕಾರ್ಯಕರ್ತ ಅಪ್ಪಯ್ಯ ಮಣಿಯಾಣಿ ಮಾತನಾಡಿ, ಮೆರವಣಿಗೆಗಳ ಮಾಡದೆ, ಘೋಷಣೆ, ದಿಕ್ಕಾರ ಕೂಗದೆ, ಪಟಾಕಿ ಒಡೆಯದೆ ಮನೆಯಲ್ಲೇ ದೀಪಾವಳಿಯ ರೀತಿಯಲ್ಲಿ ಆಚರಿಸಲು ಸೂಚನೆಗಳಿದೆ. ಹರಿಪ್ರಸಾದರ ಹೇಳಿಕೆ ರಾಮ ಭಕ್ತರಲ್ಲಿ ಭಯ ಹುಟ್ಟಿಸುವ ಜತೆಗೆ ಹಿಂದೂ ಮುಸ್ಲಿಂರ ನಡುವೆ ಸಂಶಯ ಹುಟ್ಟಿಸಿ ಗಲಾಟೆಗೆ ಪ್ರಚೋದನೆ ನೀಡುವ ರೀತಿಯ ಹೇಳಿಯಾಗಿದೆ. ತಕ್ಷಣ ಅವರನ್ನು ಬಂಧಿಸಬೇಕು ಮತ್ತು ಸಾಕ್ಷಿಗಳನ್ನು ಪಡೆದುಕೊಂಡು ತನಿಖೆ ನಡೆಸಬೇಕು. ಎಂ.ಎಲ್.ಸಿ. ಯಿಂದ ವಜಾ ಮಾಡಬೇಕು. ಮುಖ್ಯ ಮಂತ್ರಿಗಳ ಮಗ ಅವರು ಸಂಘ ಪರಿವಾರದವರು ಹಿಂದೂರಾಷ್ಟ್ರ ಮಾಡುವುದಕ್ಕೆ ಮುಂದಾಗಿದ್ದಾರೆ. ಇದಾದರೆ ಭಾರತವು ಪಾಕಿಸ್ತಾನ ಮತ್ತು ಅಪಘಾನಿಸ್ತಾನ ಆಗಬಹುದು ಎಂದು ಹೇಳಿದ್ದಾರೆ. ಅವರಿಗೆ ಹಿಂದೂರಾಷ್ಟ್ರದ ಕಲ್ಪನೆ ಇಲ್ಲ, ರಾಮರಾಜ್ಯದಲ್ಲಿ ಯಾವ ಧರ್ಮದವರಿಗೂ ಯಾವ ಸಮಸ್ಯೆಯೂ ಆಗಿರುವುದು ಚರಿತ್ರೆಯಲ್ಲಿಲ್ಲ. ಕಾಂಗ್ರೆಸ್ ಹಿಂದೂ ವಿರೋಧಿ, ರಾಮನ ವಿರೋಧಿ ಮಾಡಿಕೊಂಡು ಹೋದರೆ ಅವರು ಮತ್ತೊಮ್ಮೆ ಅವಸಾನ ಆಗುವುದು ನಿಶ್ವಿತ ಎಂದು ತಿಳಿಸಿದರು.































 
 

ಪತ್ರಿಕಾಗೋಷ್ಠಿಯಲ್ಲಿ ಹಿಂದೂ ಜಾಗರಣ ವೇದಿಕೆಯ ಪ್ರಾಂತ ಸದಸ್ಯ ಅಜಿತ್ ರೈ ಹೊಸಮನೆ, ವಿಶ್ವ ಹಿಂದೂ ಪರಿಷತ್ ಪುತ್ತೂರು ಜಿಲ್ಲೆಯ ಸಹಕಾರ್ಯವಾಹ ಶ್ರೀಧರ ತೆಂಕಿಲ, ಬಿಜೆಪಿ ಮುಖಂಡ ರಾಜೇಶ್ ಬನ್ನೂರು ಉಪಸ್ಥಿತರಿದ್ದರು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top