ಪುತ್ತೂರು: ಕೆದಿಲ ಧರ್ಮಸ್ಥಳ ಗ್ರಾಮಾಭಿವೃದ್ಧಿ ಒಕ್ಕೂಟದ ಪ್ರಗತಿ ಸ್ವಸಹಾಯ ಸಂಘದ ವತಿಯಿಂದ ಒಕ್ಕೂಟದ ಸದಸ್ಯೆ ಮೀನಾಕ್ಷಿ ಇವರಿಗೆ ಕ್ಷೇತ್ರದ ‘ಕ್ರಿಟಿಕಲ್ ಇನ್ ಲೆಸ್ ಫಂಡ್’ 25,000 ಧನಸಹಾಯ ವಿತರಿಸಲಾಯಿತು.
ಅವರು ದೀರ್ಘಕಾಲದ ಅನಾರೋಗ್ಯ ಸಮಸ್ಯೆಯಿಂದ ಬಳಲುತಿದ್ದರು.
ಈ ಸಂದರ್ಭದಲ್ಲಿ ಪರ್ನೆ ವಲಯ ಮೇಲ್ವಿಚಾರಕಿ ಶಾರದ, ಸೇವಾಪ್ರತಿನಿಧಿ ಜಯಂತಿ, ಒಕ್ಕೂಟದ ಅಧ್ಯಕ್ಷೆ ಮೀನಾಕ್ಷಿ, ಪೆರ್ನೆ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸದಸ್ಯರಾದ ಜಗದೀಶ, ಶೀನಪ್ಪ ಉಪಸ್ಥಿತರಿದ್ದರು.