ಪುತ್ತೂರು: ಮಾ. 23 ಹಾಗೂ 24ರಂದು ತಾಲೂಕಿನ ಚಿಕ್ಕಮುಡ್ನೂರು ಗ್ರಾಮದ ನೆಕ್ಕರೆಯಲ್ಲಿರುವ ಶ್ರೀ ಬ್ರಹ್ಮ ಆದಿಮೊಗೇರ್ಕಳ ಹಾಗೂ ಚಾಮುಂಡೇಶ್ವರಿ ಅಮ್ಮನವರ ದೈವಸ್ಥಾನದಲ್ಲಿ ನಡೆಯಲಿರುವ ಚತುರ್ಥ ವರ್ಷದ ವಾರ್ಷಿಕ ಪೂಜೆ ಹಾಗೂ ನೇಮೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಲಾಯಿತು.
ಕ್ಷೇತ್ರದ ಆನುವಂಶಿಕ ಮೊಕ್ತೇಸರ ಬಾಬು ಎನ್. ನೆಕ್ಕರೆ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಿದರು.
ಈ ಸಂದರ್ಭದಲ್ಲಿ ಶ್ರೀ ಬ್ರಹ್ಮ ಆದಿಮೊಗೇರ್ಕಳ ಹಾಗೂ ಚಾಮುಂಡೇಶ್ವರಿ ಅಮ್ಮನವರ ಸೇವಾ ಸಮಿತಿ ಗೌರವಾಧ್ಯಕ್ಷ ಶ್ರೀಧರ ಪೂಜಾರಿ ನೆಕ್ಕರೆ, ಅಧ್ಯಕ್ಷ ರವಿ ಮುಕ್ವೆ, ಉಪಾಧ್ಯಕ್ಷ ಶಿವರಾಮ ಪೆರ್ನೆ, ಕಾರ್ಯದರ್ಶಿಗಳಾದ ರವಿ ಬೆಳ್ಳಿಪ್ಪಾಡಿ, ಲಲಿತಾ ಎನ್., ಕೋಶಾಧಿಕಾರಿ ವಾಸು ಕೇಪುಳು, ಸದಸ್ಯರಾದ ಶ್ರೀನಿವಾಸ ನೆಕ್ಕರೆ, ಮಾಧವ ನೆಕ್ಕರೆ, ಜನಾರ್ದನ ಪೂಜಾರಿ ಬೆಳ್ತಂಗಡಿ ಉಪಸ್ಥಿತರಿದ್ದರು.
ದೈವಸ್ಥಾನದಲ್ಲಿ ಮಾ. 23 ಹಾಗೂ 24ರಂದು ವೇದಮೂರ್ತಿ ಶ್ರೀಧರ ಭಟ್ ಕಬಕ ಅವರ ನೇತೃತ್ವದಲ್ಲಿ ಗಣಪತಿ ಹೋಮ, ಸಾನಿಧ್ಯಗಳಿಗೆ ಕಲಶ ಅಭಿಷೇಕ, ತಂಬಿಲ ಸೇವೆ, ಶ್ರೀ ಸತ್ಯನಾರಾಯಣ ಪೂಜೆ, ಅನ್ನಸಂತರ್ಪಣೆ ಜರಗಿ, ಸ್ಥಳದ ಗುಳಿಗ ದೈವ, ಚಾಮುಂಡೇಶ್ವರಿ, ಗುಳಿಗ, ಕಲ್ಲುರ್ಟಿ, ಪಂಜುರ್ಲಿ ಹಾಗೂ ಕಾರಣಿಕದ ಸ್ವಾಮಿ ಕೊರಗಜ್ಜ ದೈವಗಳ ನೇಮೋತ್ಸವ ವಿಜೃಂಭಣೆಯಿಂದ ಜರಗಲಿದೆ.