ಕಾಣಿಯೂರು: ಕಾಣಿಯೂರು ಹಾಲು ಉತ್ಪಾದಕರ ಸಂಘದ ಹಾಲು ಸಂಗ್ರಹಣಾ ಉಪಕೇಂದ್ರವನ್ನು ಕೊಡಿಯಾಲದ ಮೂವಪ್ಪೆ ಶಾಲಾ ಬಳಿ ಉದ್ಘಾಟನೆಗೊಂಡಿತು.
ಕೆ.ಎಂ.ಎಫ್.ನ ಡಿಎಂ ಸತೀಶ್ ರಾವ್ ದೀಪ ಬೆಳಗಿಸಿ ಉದ್ಘಾಟಿಸಿದರು.
ವಿಸ್ತರಣಾಧಿಕಾರಿ ನಾಗೇಶ್, ಕಾಣಿಯೂರು ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಸುರೇಶ್ ಓಡಬಾಯಿ, ನಿರ್ದೇಶಕರಾದ ಮುರಳೀಧರ ಪುಣ್ಚತ್ತಾರು, ಭರತ್ ಅಗಳಿ, ಸದಾನಂದ ನಾವೂರು, ರಾಜೇಶ್ ಮೀಜೆ, ಸೌಮ್ಯ ಪೈಕ, ಹೇಮಾವತಿ ಮುಗರಂಜ, ಮಾಜಿ ನಿರ್ದೇಶಕರಾದ ಜಿನ್ನಪ್ಪ ಗೌಡ ಕಲ್ಪಡ, ಕಾಣಿಯೂರು ಗ್ರಾ.ಪಂ. ಸದಸ್ಯ ಪ್ರವೀಣ್ ರೈ ಕುಮೇರು, ಕಲ್ಪಡ ಶ್ರೀ ಉಳ್ಳಾಕುಲು ದೈವಸ್ಥಾನದ ಮೊಕ್ತೇಸರ ಶಿವರಾಮ ಉಪಾಧ್ಯಾಯ, ಸದಸ್ಯರಾದ ಹರೀಶ್ ಪೈಕ, ಸುಕುಮಾರ ಕಲ್ಪಡ, ಹೊನ್ನಪ್ಪ ಗೌಡ ಪುಳಿತ್ತಡಿ, ಮಾಧವ ಕೆ.ಟಿ., ಮಹಮ್ಮದ್ ಮೂವಪ್ಪೆ, ಸಂಘದ ಕಾರ್ಯದರ್ಶಿ ಜಗದೀಶ್ ಗೌಡ, ಸಿಬ್ಬಂದಿ ಸೀತಾರಾಮ ಅನಿಲ, ಕಲ್ಪಡ ಭಾಗದ ಹಾಲು ಉತ್ಪಾದಕರು ಉಪಸ್ಥಿತರಿದ್ದರು.