ಇಸ್ರೇಲ್ ಪರ ಬೇಹುಗಾರಿಕೆ?: 33 ಜನರ ಬಂಧನ

ಇಸ್ತಾನ್ ಬುಲ್: ಇಸ್ರೇಲ್ನ ವಿದೇಶಿ ಗುಪ್ತಚರ ಸೇವೆ ಮೊಸಾದ್ ಪರವಾಗಿ ಬೇಹುಗಾರಿಕೆ ಚಟುವಟಿಕೆಗಳಲ್ಲಿ ತೊಡಗಿರುವ ಶಂಕೆಯ ಮೇಲೆ ಟರ್ಕಿ ಅಧಿಕಾರಿಗಳು 33 ಜನರನ್ನು ಬಂಧಿಸಿದ್ದಾರೆ ಎಂದು ಹೇಳಲಾಗಿದೆ.

ಈ ಕುರಿತು ಅನಾಡೋಲು ಸುದ್ದಿ ಸಂಸ್ಥೆ ಭದ್ರತಾ ಮೂಲಗಳನ್ನು ಉಲ್ಲೇಖಿಸಿ ವರದಿ ಮಾಡಿದ್ದು, ಬಂಧಿತ ಶಂಕಿತರು ಮೊಸಾದ್ ಪರವಾಗಿ ಕಣ್ಗಾವಲು, ಹಲ್ಲೆ ಮತ್ತು ಅಪಹರಣದಂತಹ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ. ಈ ಬಗ್ಗೆ ಇಸ್ತಾಂಬುಲ್ ಪ್ರಾಸಿಕ್ಯೂಟರ್ ಕಚೇರಿಯ ಭಯೋತ್ಪಾದನೆ ಮತ್ತು ಸಂಘಟಿತ ಅಪರಾಧಗಳ ತನಿಖಾ ಬ್ಯೂರೊ ತನಿಖೆ ನಡೆಸುತ್ತಿದೆ ಎಂದು ವರದಿ ತಿಳಿಸಿದೆ.

ಟರ್ಕಿಯ 8 ಪ್ರಾಂತ್ಯಗಳಲ್ಲಿನ 57 ಸ್ಥಳಗಳಲ್ಲಿ ಏಕಕಾಲದಲ್ಲಿ ನಡೆದ ದಾಳಿಗಳಲ್ಲಿ ಶಂಕಿತರನ್ನು ಸೆರೆ ಹಿಡಿಯಲಾಗಿದೆ. ಉಳಿದ 13 ಶಂಕಿತರಿಗಾಗಿ ಶೋಧ ಕಾರ್ಯಾಚರಣೆ ನಡೆಯುತ್ತಿವೆ. ಬಂಧಿತರ ಬಗ್ಗೆ ಟರ್ಕಿ ಹೆಚ್ಚಿನ ಮಾಹಿತಿ ಬಿಟ್ಟು ಕೊಟ್ಟಿಲ್ಲ.































 
 

ಲೆಬನಾನ್, ಟರ್ಕಿ ಮತ್ತು ಕತಾರ್ ಸೇರಿದಂತೆ ಎಲ್ಲ ಕಡೆಗಳಲ್ಲಿ ಹಮಾಸ್ ಉಗ್ರರನ್ನು ಸದೆಬಡಿಯಲು ಸಿದ್ಧವಾಗಿದ್ದೇವೆ ಎಂದು ಇಸ್ರೇಲ್ನ ದೇಶೀಯ ಭದ್ರತಾ ಸಂಸ್ಥೆಯ ಮುಖ್ಯಸ್ಥ ಶಿನ್ ಬೆಟ್ ಹೇಳಿಕೆ ನೀಡಿದ ವಾರಗಳ ನಂತರ ಈ ಬಂಧನದ ವರದಿ ಬಂದಿದೆ ಎಂದು ಅಲ್ ಜಜೀರಾ ವರದಿ ಮಾಡಿದೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top