ಕಾಣಿಯೂರು: ಆಟೋ ಚಾಲಕ ಬೆದ್ರಾಜೆ ವಸಂತ ಗೌಡ ಅವರು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಈ ಸಾವಿನ ಹಿಂದೆ ಸಂಶಯ ಮೂಡಿದೆ. ಆದ್ದರಿಂದ ಸೂಕ್ತ ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ಬೆಳ್ಳಾರೆ ಪೊಲೀಸ್ ಠಾಣಾಧಿಕಾರಿಗಳಿಗೆ ಮನವಿ ನೀಡಲಾಗಿದೆ.
ಬೆದ್ರಾಜೆ ವಸಂತ ಗೌಡ ಎಂಬವರು ಡಿ. 27ರಂದು ಮಧ್ಯಾಹ್ನ ಎಲುವೆ ಎಂಬಲ್ಲಿ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಮೇಲ್ನೊಟಕ್ಕೆ ಇದು ಆತ್ಮಹತ್ಯೆಯೆಂದು ಕಂಡುಬಂದಿತ್ತು. ಆದರೆ ಸಾವಿನ ಬಗ್ಗೆ ಸಂಶಯ ವ್ಯಕ್ತಪಡಿಸಿರುವ ಕಾಣಿಯೂರು ಕಣ್ವರ್ಷಿ ಬಿ.ಎಂ.ಎಸ್. ಆಟೋ ರಿಕ್ಷಾ ಚಾಲಕ ಮಾಲಕ ಸಂಘ ಸೂಕ್ತ ತನಿಖೆಗೆ ಒತ್ತಾಯಿಸಿದೆ.
ಬಾಡಿಗೆಗೆ ಎಂದು ಹೋದವರು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಇದರ ಬಳಿಕ ಸಾರ್ವಜನಿಕ ವಲಯದಲ್ಲಿ ವದಂತಿಗಳು ಹಬ್ಬಿದ್ದು, ಆಟೋ ಚಾಲಕರಲ್ಲಿ ಭಯದ ವಾತಾವರಣ ತುಂಬಿದೆ. ಇದು ಕೊಲೆಯೋ, ಆತ್ಮಹತ್ಯೆಯೋ ಎನ್ನುವುದನ್ನು ಸೂಕ್ತ ತನಿಖೆ ನಡೆಸಿ, ಕ್ರಮ ಕೈಗೊಳ್ಳುವಂತೆ ಮನವಿಯಲ್ಲಿ ಆಗ್ರಹಿಸಿದ್ದಾರೆ.
























