ಪುತ್ತೂರು : ನಗರಸಭೆಯ ಎರಡು ವಾರ್ಡುಗಳಿಗೆ ನಡೆದ ಉಪಚುನಾವಣೆಯ ಫಲಿತಾಂಶ ಪ್ರಕಟಗೊಂಡಿದ್ದು, ವಾರ್ಡ್ 1 ರಲ್ಲಿ ಕಾಂಗ್ರೆಸ್ ಅಭ್ಯರ್ಥಿ ದಿನೇಶ್ ಶೇವಿರೆ ಹಾಗೂ ವಾರ್ಡು 11 ರಲ್ಲಿ ಬಿಜೆಪಿ ಅಭ್ಯರ್ಥಿ ರಮೇಶ್ ರೈ ಜಯ ಗಳಿಸಿದ್ದಾರೆ.
ಈ ಎರಡೂ ವಾರ್ಡುಗಳ ಸದಸ್ಯರಿಬ್ಬರ ಮರಣದಿಂದ ತೆರವಾದ ಎರಡು ಸ್ಥಾನಗಳಿಗೆ ಡಿ.27 ರಂದು ಉಪಚುನಾವಣೆ ನಡೆದಿದ್ದು, ಇಂದು ಫಲಿತಾಂಶ ಪ್ರಕಟಗೊಂಡಿದೆ.
ಅಭ್ಯರ್ಥಿಗಳ ನಡುವೆಯೂ ತೀವ್ರ ಪೈಪೋಟಿ ಇದ್ದು, ರಮೇಶ್ ರೈ ಹಾಗೂ ದಿನೇಶ್ ಶೇವಿರೆ ಅವರು ಜಯಗಳಿಸಿದ್ದಾರೆ. ನಗರ ಸಭೆಯ ವಾರ್ಡ್ 1 ರಲ್ಲಿ ಬಿಜೆಪಿ ಬೆಂಬ” ಅಭ್ಯರ್ಥಿ ಶಿವರಾಮ ಸಪಲ್ಯ ಹಾಗೂ ವಾಡ್ ಕಾಂಗ್ರೆಸ್ ಬೆಂಬಲಿತ ಸದಸ್ಯ ಶಕ್ತಿ ಸಿನ್ಹಾ ರವರ ನಿಧನದಿಂದ ತೆರವಾದ ಸ್ಥಾನಗಳಿಗೆ ಚುನಾವಣೆ ನಡೆದಿತ್ತು.
ವಾರ್ಡು 11 ರಲ್ಲಿ ಬಿಜೆಪಿ ಅಭ್ಯರ್ಥಿ ರಮೇಶ್ ರೈ 431, ಕಾಂಗ್ರೆಸ್ ದಾಮೋದರ್ 400, ಪುತ್ತಿಲ ಪರಿವಾರದ ಚಿಂತನ್ 216 ಮತಗಳನ್ನು ಪಡೆದಿದ್ದು, 6 ನೋಟಾ ಮತದಾನವಾಗಿದೆ.
ವಾರ್ಡು 1 ರಲ್ಲಿ ಕಾಂಗ್ರೆಸ್ ನ ದಿನೇಶ್ ಶೇವಿರೆ 427, ಬಿಜೆಪಿಯ ಸುನೀತಾ 219, ಪುತ್ತಿಲ ಪರಿವಾರದ ಅನ್ನಪೂರ್ಣ 308 ಮತಗಳನ್ನು ಪಡೆದಿದ್ದು, 4 ನೋಟಾ ಮತಗಳಾಗಿವೆ.