ಜ.2 : ಅಕ್ರಮ-ಸಕ್ರಮ ಹಕ್ಕುಪತ್ರ ವಿತರಣೆ

ಪುತ್ತೂರು: ಅಕ್ರಮ ಸಕ್ರಮ ಹಕ್ಕು ಪತ್ರ ವಿತರಣೆ ಕಾರ್ಯಕ್ರಮ ಜ.2 ರಂದು ನಡೆಯಲಿದೆ ಎಂದು ಶಾಸಕರಾದ ಅಶೋಕ್ ರೈ ತಿಳಿಸಿದ್ದಾರೆ.

ಶನಿವಾರ ನಡೆದ ಅಕ್ರಮ ಸಕ್ರಮ ಸದಸ್ಯರ ಸಭೆಯಲ್ಲಿ ಮಾಹಿತಿ ನೀಡಿದ ಶಾಸಕರು,  ಶಾಸಕರ ಕಚೇರಿ‌ ಮುಂಭಾಗದಲ್ಲಿ ಬೆಳಿಗ್ಗೆ 10 ರಿಂದ ಕಾರ್ಯಕ್ರಮ ನಡೆಯಲಿದ್ದು, ಅಕ್ರಮ ಸಕ್ರಮ ಮತ್ತು 94 ಸಿ, 94 ಸಿಸಿ ಹಕ್ಕು ಪತ್ರಗಳ ವಿತರಣೆ ನಡೆಯಲಿದೆ. ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಪುತ್ತೂರು ಮತ್ತು ಉಪ್ಪಿನಂಗಡಿ ಹೋಬಳಿಯ ಫಲಾನುಭವಿಗಳು ಭಾಗವಹಿಸುವಂತೆ ತಿಳಿಸಿದರು. ಸುಮಾರು 600 ಮಂದಿ ಫಲಾನುಭವಿಗಳಿಗೆ ಹಕ್ಕು ಪತ್ರ ವಿತರಣೆ ನಡೆಯಲಿದೆ.‌ ಈಗಾಗಲೇ ಈ ಸಂಬಂದ ತಹಶಿಲ್ದಾರ್ ರವರಿಗೆ ಸೂಚನೆಯನ್ನು ನೀಡಿದ್ದು ಕಡತಗಳನ್ನು ತ್ವರಿತಗತಿಯಲ್ಲಿ ಇತ್ಯರ್ಥ ಮಾಡುವಂತೆ ಶಾಸಕರು ಸೂಚನೆ ನೀಡಿದ್ದಾರೆ.

ಸಭೆಯಲ್ಲಿ ಅಕ್ರಮ ಸಕ್ರಮ ಸಮಿತಿ ಸದಸ್ಯರುಗಳಾದ ಮಹಮ್ಮದ್ ಬಡಗನ್ನೂರು, ರಾಮಣ್ಣ ಪಿಲಿಂಜ ಮತ್ತು ರೂಪರೇಖಾ ಆಳ್ವ ಉಪಸ್ತಿತರಿದ್ದರು.



































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top