ವಿಟ್ಲ: ಗುಡ್ಡ ಜರಿದು ಕಾರ್ಮಿಕರು ಮಣ್ಣಿನ ಅಡಿ ಸಿಲುಕಿದ ಘಟನೆ ಸೂರಿಕುಮೇರು ಸಮೀಪದ ಕಾಯರಡ್ಕದಲ್ಲಿ ಶುಕ್ರವಾರ ಮಧ್ಯಾಹ್ನ ನಡೆದಿದೆ.

ದಾಸಕೋಡಿ ನೆಲ್ಲಿ ನಿವಾಸಿ ಉಮೇಶ್ ನಾಯ್ಕ( 60) ಮತ್ತು ಬಾಯಿಲ ನಿವಾಸಿ ರಾಜೇಶ್ ನಾಯ್ಕ(40) ಮಣ್ಣಿನಡಿ ಸಿಲುಕಿ ಗಾಯಗೊಂಡವರು.

ಜೆಸಿಂತಾ ಮಾರ್ಟಿಸ್ ಎಂಬವರ ಮನೆಯ ಕಾಂಪೌಂಡ್ ನ ಕಾಮಗಾರಿ ನಡೆಯುತ್ತಿದ್ದ ಸಂದರ್ಭ ಹಠಾತ್ತನೆ ಮೇಲಿನಗುಡ್ಡ ಕುಸಿದಿದೆ. ಈ ಸಂದರ್ಭ ಕೆಲಸದಲ್ಲಿ ನಿರತರಾಗಿದ್ದ ಈ ಇಬ್ಬರು ಕಾರ್ಮಿಕರು ಮಣ್ಣಿನೊಳಗೆ ಸಿಲುಕಿಕೊಂಡರು. ತಕ್ಷಣ ಸ್ಥಳೀಯರು ಗಾಯಾಳುಗಳನ್ನು ರಕ್ಷಿಸಿ ಆ್ಯಂಬುಲೆನ್ಸ್ ಮೂಲಕ ತುಂಬೆ ಖಾಸಗಿ ಆಸ್ಪತ್ರೆಗೆ ದಾಖಲಿಸಿದರು ಎನ್ನಲಾಗಿದೆ.
ಸ್ಥಳಕ್ಕೆ ವಿಟ್ಲ ಪೊಲೀಸ್ ಇನ್ಸ್ ಪೆಕ್ಟರ್ ನಾಗರಾಜ್ ಎಚ್, ಕಂದಾಯ ಅಧಿಕಾರಿ ವಿಜಯ್ ಬೇಟಿ ಅವರು ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.