ಉಳ್ಳಾಲ: ಸಮುದ್ರಕ್ಕೆ ಈಜಲು ತೆರಳಿದ ಯುವಕರಿಬ್ಬರು ಅಲೆಯ ಸೆಳೆತಕ್ಕೆ ಸಿಲುಕಿ ಸಾವನ್ನಪ್ಪಿರುವ ಘಟನೆ ಉಳ್ಳಾಲ ಸಮ್ಮರ್ ಸ್ಯಾಂಡ್ ಬೀಚ್ನಲ್ಲಿ ನಡೆದಿದೆ.
ಬಶೀರ್ (23) ಹಾಗೂ ಸಲ್ಮಾನ್ (19) ಮೃತಪಟ್ಟ ಯುವಕರು.
ಕುಟುಂಬ ಸಮೇತ ಉಳ್ಳಾಲ ದರ್ಗಾ ಸಂದರ್ಶನಕ್ಕೆ ಬಂದಿದ್ದ ಅವರು ಬಳಿಕ ಬೀಚ್ಗೆ ತೆರಳಿ ನೀರಿನಲ್ಲಿ ಆಟವಾಡುತ್ತಿದ್ದ ಸಂದರ್ಭ ಬಶೀರ್, ಸಲ್ಮಾನ್ ಹಾಗೂ ಸೈಫ್ ಅಲಿ ಅಲೆಗೆ ಸಿಲುಕಿ ನಾಪತ್ತೆಯಾಗಿದ್ದರು. ಈ ಸಂದರ್ಭ ಸ್ಥಳೀಯ ಈಜುಗಾರರು ಸಲ್ಮಾನ್ ಹಾಗೂ ಸೈಫುಲ್ಲಾ ಅವರನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದರು. ಈ ಪೈಕಿ ಸಲ್ಮಾನ್ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಬಶೀರ್ ನ ಮೃತದೇಹಕ್ಕೆ ಹುಡುಕಾಟ ನಡೆಯುತ್ತಿದೆ. ಸೈಫುಲ್ಲಾ ಅವರು ಚೇತರಿಸಿಕೊಂಡಿದ್ದಾರೆ ಎನ್ನಲಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.