ಪಂಜ: ಜಾಂಡೀಸ್ ಕಾಯಿಲೆಯಿಂದ ಬಳಲುತ್ತಿದ್ದ ಯುವಕನೋರ್ವ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ಪಂಜದಿಂದ ವರದಿಯಾಗಿದೆ.
ಪ್ರಶಾಂತ್ (39) ಮೃತಪಟ್ಟ ಯುವಕ.
ಕೂತ್ಕುಂಜ ಗ್ರಾಮದ ಕಲ್ಕ ದಿ.ಪದ್ಮಯ್ಯ ಗೌಡ ಹಾಗೂ ಇಂದಿರಾ ದಂಪತಿ ಪುತ್ರರಾಗಿರುವ ಪ್ರಶಾಂತ್ ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದು, ಕೆಲ ಸಮಯಗಳ ಹಿಂದೆ ಮನೆಗೆ ಬಂದಿದ್ದರು. ಜಾಂಡೀಸ್ ಕಾಯಿಲೆಗೆ ಒಳಗಾದ ಅವರು ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಯಲ್ಲಿದ್ದರು. ಈ ನಡುವೆ ಹಠಾತ್ತನೇ ಅನಾರೋಗ್ಯಕ್ಕೀಡಾದ ಅವರನ್ನು ಸುಳ್ಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎನ್ನಲಾಗಿದೆ.