ಪುತ್ತೂರು,ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು, ವಿವೇಕಾನಂದ ಬಿ.ಎಡ್ ಕಾಲೇಜು , ರೇಡಿಯೋ ಪಾಂಚಜನ್ಯ 90.80ಎಫ್. ಎಂ, ವಿದ್ಯಾಭಾರತೀ ಉಚ್ಚ ಶಿಕ್ಷಾ ಸಂಸ್ಥಾನ್- ಕರ್ನಾಟಕ
ಸಂಯುಕ್ತ ಆಶ್ರಯದಲ್ಲಿ ‘ಭಾರತೀಯ ಭಾಷಾ ಉತ್ಸವದ’ ಪ್ರಯುಕ್ತ ಬಹುಭಾಷಾ ಕವಿ ಗೋಷ್ಠಿ ತೆಂಕಿಲ ವಿವೇಕಾನಂದ ಬಿ.ಎಡ್. ಕಾಲೇಜಿನಲ್ಲಿ ನಡೆಯಿತು.
ಆಯುರ್ವೇದಿಕ್ ವೈದ್ಯ ಡಾ. ಹರಿಕೃಷ್ಣ ಪಾಣಾಜೆ ದೀಪ ಪ್ರಜ್ವಲಿಸುವುದರ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ದೀಪವು ಬೆಳಕನ್ನು ನೀಡಿ ಕತ್ತಲೆಯನ್ನು ಹೋಗಲಾಡಿಸುವಂತೆ ಉತ್ತಮ ಸಾಹಿತ್ಯದ ಮೂಲಕ ಜ್ಞಾನದ ಬೆಳಕು ಹರಿದು ತನ್ಮೂಲಕ ಅಜ್ಞಾನದ ಅಂಧಕಾರ ತೊಲಗಿಸಬೇಕು ಎಂದು ಹೇಳಿ ತಮ್ಮ ಸ್ವರಚಿತ ಕವನವೊಂದನ್ನು ವಾಚಿಸಿದರು.
ವಿವೇಕಾನಂದ ಬಿಎಡ್ ಕಾಲೇಜಿನ ಸಂಚಾಲಕಿ ಗಂಗಮ್ಮ ಎಚ್. ಶಾಸ್ತ್ರಿ ಅಧ್ಯಕ್ಷತೆ ವಹಿಸಿದ್ದರು. ವಿವೇಕಾನಂದ ವಿದ್ಯಾವರ್ಧಕ ಸಂಘದ ನಿರ್ದೇಶಕ ವಸಂತ ಮಾಧವ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿವೇಕಾನಂದ ಬಿಎಡ್ ಕಾಲೇಜಿನ ಪ್ರಾಂಶುಪಾಲೆ ಡಾ. ಶೋಭಿತ ಸತೀಶ್ ಸ್ವಾಗತಿಸಿದರು. ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪುತ್ತೂರು ಉಮೇಶ್ ನಾಯಕ್ ಪ್ರಾಸ್ತಾವಿಕವಾಗಿ ಮಾತನಾಡಿದರು. ರೇಡಿಯೋ ಪಾಂಚಜನ್ಯದ ಆಡಳಿತ ಮಂಡಳಿಯ ಸದಸ್ಯೆ ಶಾಲಿನಿ ಆತ್ಮಭೂಷಣ್ ವಂದಿಸಿದರು. ರಾಜೀವಿ ನಾಗೇಶ್ ಕಾರ್ಯಕ್ರಮ ನಿರೂಪಿಸಿದರು.
ಉದ್ಘಾಟನಾ ಸಮಾರಂಭದ ಬಹುಭಾಷಾ ಕವಿಗೋಷ್ಠಿ ನಡೆಯಿತು. ಸಾರ್ವಜನಿಕ ವಿಭಾಗದಲ್ಲಿ 47 ಸಾಹಿತಿಗಳು ಹಾಗೂ ವಿದ್ಯಾರ್ಥಿ ವಿಭಾಗದಲ್ಲಿ 34 ಯುವ ಸಾಹಿತಿಗಳು ಭಾಗವಹಿಸಿದ್ದರು. ವಿವೇಕಾನಂದ ಬಿಎಡ್ ಕಾಲೇಜಿನ ಆಡಳಿತ ಮಂಡಳಿ ಸದಸ್ಯ ಪ್ರಸನ್ನ ಭಟ್ ಬಲ್ನಾಡ್ ಉಪಸ್ಥಿತಿಯಲ್ಲಿ, ಶಂಕರಿ ಶರ್ಮ ಅಧ್ಯಕ್ಷತೆಯಲ್ಲಿ ಸಾರ್ವಜನಿಕ ವಿಭಾಗದ ಕವಿಗೋಷ್ಠಿ ನಡೆಯಿತು. ಭುವನೇಶ್ವರಿ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿ ವಿಭಾಗದ ಕವಿಗೋಷ್ಠಿಯ ಅಧ್ಯಕ್ಷತೆಯನ್ನು ಶಾಂತ ಪುತ್ತೂರು ವಹಿಸಿದ್ದರು. ಬಾಲಕೃಷ್ಣ ನಾಯಕ್ ಉಪಸ್ಥಿತರಿದ್ದರು, ಅಕ್ಷತಾ ನಿರೂಪಿಸಿದರು.