ಗ್ರಾಮೀಣ ಪ್ರದೇಶ ಕ್ರೀಡಾ ಪ್ರತಿಭೆಗಳನ್ನು ಹೊರತರಲು ಕ್ರೀಡಾಕೂಟ ಸಹಕಾರಿ | ಕಾಣಿಯೂರು ಕೂಡುರಸ್ತೆ ಫ್ರೆಂಡ್ಸ್ ಸ್ಪೋರ್ಟ್ಸ್‍ ಕ್ಲಬ್‍ನ ಪ್ರೀಮಿಯರ್ ಲೀಗ್ ಕೆಪಿಎಲ್‍-2023 ಕ್ರೀಡಾಕೂಟದಲ್ಲಿ ಶಾಸಕಿ ಬಾಗೀರಥಿ ಮುರುಳ್ಯ | ಸೇವಾ ಮನೋಭಾವದಿಂದ ಸಮಾಜ ಅಭಿವೃದ್ಧಿ ಸಾಧ್ಯ : ಸುರೇಶ್ ಬೈಲು | ಕ್ರೀಡೆ ಭಾವೈಕ್ಯದ ಸಂಕೇತ : ಕಿರಣ್ ಬುಡ್ಲೆಗುತ್ತು

ಕಾಣಿಯೂರು: ಗ್ರಾಮೀಣ ಪ್ರದೇಶದಲ್ಲಿ ನಡೆಯುವ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾಟದಂತಹ ಕ್ರೀಡಾಕೂಟದಿಂದ ಗ್ರಾಮೀಣ ಪ್ರದೇಶದ ಕ್ರೀಡಾ ಪ್ರತಿಭೆಗಳನ್ನು ಹೊರತರಲು ಸಾಧ್ಯ. ಜೊತೆಗೆ ಯುವ ಜನತೆಯನ್ನು ಒಗ್ಗೂಡಿಸಿ ಆತ್ಮೀಯತೆಯ ಬಾಂಧವ್ಯವನ್ನು ಬೆಸೆಯುವ ಕಾರ್ಯಕ್ಕೆ ಪೂರಕವಾಗಿದೆ ಎಂದು ಸುಳ್ಯ ಶಾಸಕ ಭಾಗೀರಥಿ ಮುರುಳ್ಯ ಹೇಳಿದರು.

ಅವರು ಕಾಣಿಯೂರು ಕೂಡುರಸ್ತೆ ಫ್ರೆಂಡ್ಸ್ ಸ್ಪೋರ್ಟ್ಸ್ ಕ್ಲಬ್‍ ವತಿಯಿಂದ ಏಲಡ್ಕ ನೇತಾಜಿ ಸುಭಾಷ್ ಚಂದ್ರ ಬೋಸ್ ಕ್ರೀಡಾಂಗಣದಲ್ಲಿ ನಡೆದ ಪ್ರೀಮಿಯರ್ ಲಿಗ್ ಕೆಪಿಎಲ್‍-2023 ಪಂದ್ಯಾಟ ಹಾಗೂ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕಡಬ ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ಸುರೇಶ್ ಬೈಲು ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಸೇವಾ ಮನೋಭಾವದಿಂದ ಮುನ್ನಡೆಯುವುದರ ಜತೆ  ಸಮಾಜಮುಖಿ ಚಿಂತನೆಯ ಮೂಲಕ ಉತ್ತಮ ಗುಣಗಳನ್ನು ವೃದ್ಧಿಸಿಕೊಂಡಾಗ ಸಮಾಜದ ಅಭಿವೃದ್ಧಿ ಸಾಧ್ಯ ಎಂದರು.































 
 

ಸ್ವಾತ್ರಂತ್ಯ ಸೇನಾನಿ ಕೆದಂಬಾಡಿ ರಾಮಯ್ಯ ಗೌಡ ಪ್ರತಿಮೆ ಸ್ಥಾಪನಾ ಸಮಿತಿ ಅಧ್ಯಕ್ಷ ಕಿರಣ್ ಬುಡ್ಡೆಗುತ್ತು ಮಾತನಾಡಿ, ದೈಹಿಕ ಹಾಗೂ ಮಾನಸಿಕ ಆರೋಗ್ಯ ಉತ್ತಮವಾಗಿರಲು ಕ್ರೀಡೆ ಅತ್ಯುತ್ತಮ ಮಾರ್ಗ. ಪರಸ್ಪರ ಅನ್ಯೋನ್ಯತೆಯಿಂದ ಸಮಾಜದ ಎಲ್ಲಾ ವರ್ಗದ ಜನರೂ ಭಾಗವಹಿಸಿಸುವ ಕ್ರೀಡೆ ಭಾವೈಕ್ಯದ ಸಂಕೇತವಾಗಿದೆ ಎಂದರು.

 ಪ್ರಜ್ವಲ್ ರೈ ಪಾತಾಜೆ, ಸಾಫ್ಟ್‌ವೇ‌ರ್ ಉದ್ಯೋಗಿ ಶಿವರಂಜನ್ ಚೌಟ, ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆಯ ಟ್ರಸ್ಟಿ ದೇವಿಕಿರಣ್ ರೈ ಮಾದೋಡಿ, ಚಾರ್ವಾಕ ಕಪಿಲ ಚಾಂಪಿಯನ್ಸ್‌ನ ಮಾಲಕ ನಂದನ್ ಕಜೆ, ಸ್ವಾತ್ರಂತ್ಯ ಸೇನಾನಿ ಕೆದಂಬಾಡಿ ರಾಮಯ್ಯ ಗೌಡ ಪ್ರತಿಮೆ ಸ್ಥಾಪನಾ ಸಮಿತಿ ಸದಸ್ಯ ಸುನಿಲ್‌ ಕೆರ್‌ನಡ್ಕ, ತೀರ್ಪುಗಾರರಾದ ಭಾನುಪ್ರಕಾಶ್ ಪುತ್ತೂರು, ರವಿ ಆಚಾರ್ಯ ಕೆಮ್ಮಾಯಿ, ವಿನೋದ್ ಪುತ್ತೂರು, ಫ್ರೆಂಡ್ಸ್ ಸ್ಪೋರ್ಟ್ಸ್ ಕ್ಲಬ್‌ನ ಗೌರವಾಧ್ಯಕ್ಷ ರಾಮಣ್ಣ ಗೌಡ ಮುಗರಂಜ, ಸ್ಥಾಪಕಾಧ್ಯಕ್ಷ ರಾಧಾಕೃಷ್ಣ ಬೈತಡ್ಕ, ಕಾರ್ಯದರ್ಶಿ ರಕ್ಷಿತ್ ಮುಗರಂಜ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ರಾಜ್ಯಮಟ್ಟದ ಕ್ರೀಡಾಪಟು ಅಹಿಜಿತ್ ಕಟ್ಟತ್ತಾರು, ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ರಾಜ್ಯ ಮಟ್ಟದಲ್ಲಿ ದ್ವಿತೀಯ ಸ್ಥಾನ ಪಡೆದ ಉತ್ತಮ್ ಗುಂಡಿಗದ್ದೆ, ರಾಷ್ಟ್ರ ಮಟ್ಟದ ಹಿರಿಯ ಕ್ರೀಡಾಪಟು ಸುಶೀಲ ಪೆರ್ಲೋಡಿ ಅವರನ್ನು ಸನ್ಮಾನಿಸಲಾಯಿತು. ಫ್ರೆಂಡ್ಸ್ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಕಾರ್ಯಾಚರಿಸುತ್ತಿರುವ ಜೀವರಕ್ಷಕ ಆಂಬುಲೆನ್ಸ್ ಚಾಲಕರನ್ನು ಗೌರವಿಸಲಾಯಿತು.

ಫ್ರೆಂಡ್ಸ್ ಸ್ಪೋರ್ಟ್ಸ್ ಕ್ಲಬ್‌ನ ಅಧ್ಯಕ್ಷ ಕಿರಣ್ ಮಲೆಕೆರ್ಚಿ ಸ್ವಾಗತಿಸಿದರು. ರಮೇಶ್ ಬೆಳ್ಳಾರೆ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ರಮೇಶ್‌ ಬೆಳ್ಳಾರೆ, ಅಜೀಜ್ ಮುಂಡೂರು ವೀಕ್ಷಕ ವಿವರಣೆ ನೀಡಿದರು.

ಪ್ರೀಮಿಯರ್ ಕೆಪಿಎಲ್ 2023ರಲ್ಲಿ ನಕ್ಷತ್ರ ಫ್ರೆಂಡ್ಸ್ ಪುಣ್ವತ್ತಾರು ಪ್ರಥಮ ಸ್ಥಾನ ಪಡೆದುಕೊಂಡರೆ, ಪವರ್ ಪ್ಲಸ್ ಏಲಡ್ಕ ದ್ವಿತೀಯ ಸ್ಥಾನ ಪಡೆದುಕೊಂಡಿತು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top