ಶಾಂತಿಯುತವಾಗಿ ನಡೆದ ನಗರಸಭೆ ಉಪಚುನಾವಣೆ | ವಾರ್ಡು 1 ರಲ್ಲಿ ಶೇ.73.46, ವಾರ್ಡು 11 ರಲ್ಲಿ ಶೇ. 61.07 ಮತ ಚಲಾವಣೆ |

ಪುತ್ತೂರು: ಪುತ್ತೂರು ನಗರಸಭೆ ಸದಸ್ಯರ ಅಕಾಲಿಕ ಮರಣದಿಂದ ತೆರವಾದ ಎರಡು ವಾರ್ಡುಗಳಿಗೆ ಉಪಚುನಾವಣೆ ಮುಂಜಾನೆಯಿಂದ ಆರಂಭಗಂಡಿದ್ದು ಸಂಜೆ 5 ಗಂಟೆ ಹೊತ್ತಿಗೆ ಸಂಪೂರ್ಣಗೊಂಡಿದೆ.

ವಾರ್ಡು1 ರಲ್ಲಿ 73.46 ಶೇ. ಮತದಾನವಾಗಿದ್ದು, ವಾರ್ಡು11 ರಲ್ಲಿ 61.07 ಶೇ. ಮತ ಚಲಾವಣೆಯಾಗಿದೆ.

ನಗರ ಸಭೆಯ ವಾರ್ಡ್ 1 ಹಾಗೂ ವಾರ್ಡ್ 11ರ ಸದಸ್ಯರಿಬ್ಬರ ನಿಧನದಿಂದ ತೆರವಾಗಿರುವ ಎರಡು ಸ್ಥಾನಗಳಿಗೆ ಉಪಚುನಾವಣೆ ನಡೆದು ಕಾಂಗ್ರೆಸ್, ಬಿಜೆಪಿ ಹಾಗೂ ಪುತ್ತಿಲ ಪರಿವಾರ ಬೆಂಬಲಿತ ಅಭ್ಯರ್ಥಿಗಳ ಮಧ್ಯೆ ನಡುವೆ ತ್ರಿಕೋನ ಸ್ಪರ್ಧೆ ನಡೆದಿತ್ತು.































 
 

ವಾರ್ಡ್-1 ಕಬಕ ಸಾಮಾನ್ಯ ಮೀಸಲು ಸ್ಥಾನದಿಂದ ಚುನಾಯಿತ ಸದಸ್ಯರಾಗಿದ್ದ ಬಿಜೆಪಿಯ ಶಿವರಾಮ ಸಪಲ್ಯ ಹಾಗೂ1ವಾರ್ಡ್ 11 ಮೀಸಲು ಸ್ಥಾನದಿಂದ ಚುನಾಯಿತ ಸದಸ್ಯರಾಗಿದ್ದ ಕಾಂಗ್ರೆಸ್‌ನ ಶಕ್ತಿ ಸಿನ್ಹರವರ ನಿಧನದಿಂದ ತೆರವಾದ ಸ್ಥಾನಗಳಿಗೆ ಉಪಚುನಾವಣೆ ನಡೆಯುತ್ತಿದೆ.ವಾರ್ಡ್ ರ ಸಾಮಾನ್ಯ ಮೀಸಲು ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ದಿನೇಶ್ ಕೆ. ಶೇವಿರೆ, ಬಿಜೆಪಿಯಿಂದ ಸುನೀತಾ ಶಿವನಗರ ಮತ್ತು ಪುತ್ತಿಲ ಪರಿವಾರದಿಂದ ಅನ್ನಪೂರ್ಣ ಎಸ್.ಕೆ ರಾವ್ ಕಣದಲ್ಲಿದ್ದಾರೆ. ವಾರ್ಡ್-11ರ ಸಾಮಾನ್ಯ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ದಾಮೋದರ ಭಂಡಾರ್ಕರ್ ನೆಲ್ಲಿಕಟ್ಟೆ, ಬಿಜೆಪಿಯಿಂದ ರಮೇಶ್ ರೈ ನೆಲ್ಲಿಕಟ್ಟೆ ಹಾಗೂ ಪುತ್ತಿಲ ಪರಿವಾರದಿಂದ ಚಿಂತನ್ ಪಿ.ಅಂದ್ರಟ್ಟ ಕಣದಲ್ಲಿದ್ದಾರೆ.

ಇನ್ನು ಫಲಿತಾಂಶ ಹೊರ ಬೀಳುವುದೊಂದೇ ಬಾಕಿ. ವಾರ್ಡುಗಳು ಯಾರ ಪಾಲಿಗೆ ಹೋಗಲಿದೆ ಎಂಬುದನ್ನು ಕಾದುನೋಡಬೇಕಾಗಿದೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top