ನಗರಸಭೆ ತೆರವಾದ ಎರಡು ವಾರ್ಡುಗಳಿಗೆ ಉಪಚುನಾವಣೆ | ನಿಧಾನಗತಿಯಲ್ಲಿ ಸಾಗುತ್ತಿರುವ ಮತದಾನ

ಪುತ್ತೂರು: ಪುತ್ತೂರು ನಗರಸಭೆ ಸದಸ್ಯರ ಅಕಾಲಿಕ ಮರಣದಿಂದ ತೆರವಾದ ಎರಡು ವಾರ್ಡುಗಳಿಗೆ ಉಪಚುನಾವಣೆ ಮುಂಜಾನೆಯಿಂದ ನಡೆಯುತ್ತಿದ್ದು, ಸುಮಾರು 11 ಗಂಟೆ ಹೊತ್ತಿಗೆ ಶೇ.24 ಮತದಾನವಾಗಿದೆ.

ನಗರ ಸಭೆಯ ವಾರ್ಡ್ 1 ಹಾಗೂ ವಾರ್ಡ್ 11ರ ಸದಸ್ಯರಿಬ್ಬರ ನಿಧನದಿಂದ ತೆರವಾಗಿರುವ ಎರಡು ಸ್ಥಾನಗಳಿಗೆ ಉಪಚುನಾವಣೆ ನಡೆಯುತ್ತಿದ್ದು, ಕಾಂಗ್ರೆಸ್, ಬಿಜೆಪಿ ಹಾಗೂ ಪುತ್ತಿಲ ಪರಿವಾರ ಬೆಂಬಲಿತ ಅಭ್ಯರ್ಥಿಗಳ ಮಧ್ಯೆ ನಡುವೆ ತ್ರಿಕೋನ ಸ್ಪರ್ಧೆ ನಡೆಯುತ್ತಿದೆ.

ವಾರ್ಡ್-1 ಕಬಕ ಸಾಮಾನ್ಯ ಮೀಸಲು ಸ್ಥಾನದಿಂದ ಚುನಾಯಿತ ಸದಸ್ಯರಾಗಿದ್ದ ಬಿಜೆಪಿಯ ಶಿವರಾಮ ಸಪಲ್ಯ ಹಾಗೂ1ವಾರ್ಡ್ 11 ಮೀಸಲು ಸ್ಥಾನದಿಂದ ಚುನಾಯಿತ ಸದಸ್ಯರಾಗಿದ್ದ ಕಾಂಗ್ರೆಸ್‌ನ ಶಕ್ತಿ ಸಿನ್ಹರವರ ನಿಧನದಿಂದ ತೆರವಾದ ಸ್ಥಾನಗಳಿಗೆ ಉಪಚುನಾವಣೆ ನಡೆಯುತ್ತಿದೆ.ವಾರ್ಡ್ ರ ಸಾಮಾನ್ಯ ಮೀಸಲು ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ದಿನೇಶ್ ಕೆ. ಶೇವಿರೆ, ಬಿಜೆಪಿಯಿಂದ ಸುನೀತಾ ಶಿವನಗರ ಮತ್ತು ಪುತ್ತಿಲ ಪರಿವಾರದಿಂದ ಅನ್ನಪೂರ್ಣ ಎಸ್.ಕೆ ರಾವ್ ಕಣದಲ್ಲಿದ್ದಾರೆ. ವಾರ್ಡ್-11ರ ಸಾಮಾನ್ಯ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ದಾಮೋದರ ಭಂಡಾರ್ಕರ್ ನೆಲ್ಲಿಕಟ್ಟೆ, ಬಿಜೆಪಿಯಿಂದ ರಮೇಶ್ ರೈ ನೆಲ್ಲಿಕಟ್ಟೆ ಹಾಗೂ ಪುತ್ತಿಲ ಪರಿವಾರದಿಂದ ಚಿಂತನ್ ಪಿ.ಅಂದ್ರಟ್ಟ ಕಣದಲ್ಲಿದ್ದಾರೆ. ಈ ಮೂಲಕ ಎರಡೂ ಕ್ಷೇತ್ರಗಳಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ.



































 
 

. ವಾರ್ಡ್-1ಕ್ಕೆ ಸಂಬಂಧಿಸಿ ಸುದಾನ ವಸತಿಯುತ ಶಾಲೆ ಉತ್ತರ ಭಾಗದಲ್ಲಿ ತೆರೆಯಲಾಗಿರುವ ಮತಗಟ್ಟೆಯಲ್ಲಿ ಮತದಾನ ನಡೆಯುತ್ತಿದೆ. ಇಲ್ಲಿ 634 ಪುರುಷರು, 670 ಮಹಿಳೆಯರು ಸೇರಿ ಒಟ್ಟು 1304 ಮತದಾರರು ಮತ ಚಲಾಯಿಸಲಿದ್ದಾರೆ. ವಾರ್ಡ್-11 ಮತದಾನ ಪ್ರಕ್ರಿಯೆಗಳು ಕೊಂಬೆಟ್ಟು ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆಯುತ್ತಿದ್ದು ಭಾಗ ಸಂಖ್ಯೆ-13 ಹಾಗೂ ಭಾಗ ಸಂಖ್ಯೆ-14 ಎರಡು ಮತಗಟ್ಟೆಗಳಲ್ಲಿ ನಡೆಯುತ್ತಿದೆ.ಭಾಗ ಸಂಖ್ಯೆ 13ರಲ್ಲಿ 261 ಪುರುಷರು, 243 ಮಹಿಳೆಯರು ಸೇರಿದಂತೆ ಒಟ್ಟು 504 ಮತದಾರರು, ಭಾಗ ಸಂಖ್ಯೆ 14ರಲ್ಲಿ 565 ಪುರುಷರು, 625 ಮಹಿಳೆಯರು ಸೇರಿ ಒಟ್ಟು 1230 ಮತದಾರರು ಮತ ಚಲಾಯಿಸಲಿದ್ದಾರೆ. ಮತದಾನ ಪ್ರಕ್ರಿಯೆಯು ಬೆಳಿಗ್ಗೆ 7 ಗಂಟೆಯಿಂದ ಪ್ರಾರಂಭಗೊಂಡಿದ್ದು ಸಂಜೆ 5 ಗಂಟೆಯ ತನಕ ನಡೆಯಲಿದೆ.

ಉಪ ಚುನಾವಣೆ ಹಿನ್ನಲೆಯಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹಿತದೃಷ್ಠಿಯಿಂದ ಡಿ.26 ಬೆಳಿಗ್ಗೆಯಿಂದ ಡಿ.27ರ ಸಂಜೆಯ ತನಕ ಚುನಾವಣೆ ನಡೆಯಲಿರುವ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿರುವ ಎಲ್ಲಾ ಮದ್ಯದಂಗಡಿಗಳನ್ನು ಹಾಗೂ ಮದ್ಯ ಮಾರಾಟ ಮತ್ತು ಡಿ.27ರಂದು ಜಾತ್ರೆ, ಸಂತೆ, ಉತ್ಸವ ಹಾಗೂ ಮೇಳವನ್ನು ನಿಷೇಧಿಸಿ ದ,ಕ ಜಿಲ್ಲಾಧಿಕಾರಿ ಮುಲೈ ಮುಹಿಲನ್ ಆದೇಶಿಸಿದ್ದಾರೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top