ವಿದ್ಯೆಯಿಂದ ಸಮಾಜ ಕಟ್ಟುವ ಛಲ, ಧೈರ್ಯ ಸಹಜವಾಗಿ ಬರುತ್ತದೆ | ಕಡಬ ತಾಲೂಕು ಒಕ್ಕಲಿಗ ಗೌಡ ಸೇವಾ ಸಂಘದ ಪದಗ್ರಹಣ, ನೂತನ ಸಮುದಾಯ ಭವನದ ಶಿಲಾನ್ಯಾಸ ಹಾಗೂ ಒಕ್ಕಲಿಗ ಸ್ಪಂದನಾ ಸಮುದಾಯ ಸಹಕಾರ ಸಂಘದ ಉದ್ಘಾಟನಾ ಸಮಾರಂಭದಲ್ಲಿ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ

ಕಡಬ: ಸಮಾಜ ಕಟ್ಟುವ ನಿಟ್ಟಿನಲ್ಲಿ ಒಕ್ಕಲಿಗ ಸಮುದಾಯದವರು ತಮ್ಮ ಮಕ್ಕಳಿಗೆ ಒಳ್ಳೆಯ ವಿದ್ಯೆ ನೀಡಿ. ಆಗ ಹೂವಿಗೆ ಹೇಗೆ ಸಹಜವಾಗಿ ಪರಿಮಳೆ ಬರುತ್ತದೋ ಹಾಗೆಯೇ ಸಮಾಜ ಕಟ್ಟುವ ಛಲ, ಧೈರ್ಯ ಸಹಜವಾಗಿ ಬರುತ್ತದೆ ಎಂದು ಶ್ರೀ ಆದಿಚುಂಚನಗಿರಿ ಮಠದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ನುಡಿದರು.

ಅವರು ಮಂಗಳವಾರ ಕಡಬ ತಾಲೂಕು ಗೌಡ ಸೇವಾ ಸಂಘದ ನೂತನ ಪದಾಧಿಕಾರಿಗಳ ಪದಗ್ರಹಣ, ನೂತನ ಸಮುದಾಯ ಭವನದ ಶಿಲಾನ್ಯಾಸ ಹಾಗೂ ಒಕ್ಕಲಿಗ ಸ್ಪಂದನಾ ಸಮುದಾಯ ಸಹಕಾರ ಸಂಘದ ಉದ್ಘಾಟನಾ ಸಮಾರಂಭದಲ್ಲಿ ಶಿಲಾನ್ಯಾಸ ನೆರವೇರಿಸಿ ಆಶೀರ್ವಚನ ನೀಡಿದರು.

ಇಂದು ಒಕ್ಕಲಿಗ ಸಂಘದ ಕಡಬದಲ್ಲಿ ಅಸ್ಥಿತ್ವಕ್ಕೆ ಬಂದಿದ್ದು, 15 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಸಮುದಾಯ ಭವನದ ನಿರ್ಮಾಣದಲ್ಲಿ ಎಲ್ಲರೂ ಒಟ್ಟಾಗಿ ಸಹಕರಿಸಬೇಕಾದ ಅಗತ್ಯವಿದೆ ಎಂದ ಅವರು, ತಾಲೂಕು ಅಧ್ಯಕ್ಷ ಸುರೇಶ್ ಬೈಲು ಅವರಿಗೆ ಸಮುದಾಯವನ್ನು ಮುನ್ನಡೆಸುವ ಯೋಗ್ಯತೆ ಇದ್ದರಿಂದ ಇಷ್ಟೆಲ್ಲಾ ಜಜಸಮೂಹ ಸೇರಲು ಸಾಧ್ಯ. ಮುಂದಿನ ಒಂದು ವರ್ಷದಲ್ಲಿ ಅಧ್ಯಕ್ಷರ ತಂಡದಿಂದ ಅವಿರತ ಶ್ರಮದಿಂದ ನಿರ್ಮಾಣವಾಗಲಿರುವ ಸಮುದಾಯ ಭವನ ಸಮುದಾಯದ ಅಸ್ಮಿತೆಯ ಭಾಗವಾಗಿ ಹೊರಹೊಮ್ಮಲಿದೆ ಎಂದ ಸ್ವಾಮೀಜಿಯವರು, ಒಕ್ಕಲಿಗರ ಏಳಿಗೆಗಾಗಿ ನಮ್ಮ ಮಠದಿಂದ ಯಾವುದೇ ಸಹಕಾರ ನೀಡುವಲ್ಲಿ ನಾವು ಬದ್ಧರಿದ್ದೇವೆ ಎಂದು ನುಡಿದರು.



































 
 

ಶ್ರೀ ಆದಿಚುಂಚನಗಿರಿ ಮಂಗಳೂರು ಶಾಖಾ ಮಠದ ಶ್ರೀ ಡಾ.ಧರ್ಮಪಾಲನಾಥ ಸ್ವಾಮೀಜಿ ಆಶೀರ್ವಚನ ನೀಡಿ, ಇಂದಿನ ಕಾರ್ಯಕ್ರಮದಿಂದ ಸುವರ್ಣಾಕ್ಷರ ಗಳಿಗೆ ಒದಗಿ ಬಂದಿದೆ. ಮಠದ ಮಹಾಸ್ವಾಮಿ ಬಾಲಗಂಗಾಧರನಾಥ ಸ್ವಾಮೀಜಿಯವರು ಹೊಸ ಚಿಂತನೆ, ಹೊಸ ಆವಿಷ್ಕಾರಗಳನ್ನು ಮಾಡುವ ನಿಟ್ಟಿನಲ್ಲಿ ಧರ್ಮ ಜಾಗೃತಿ ಮಾಡಿಕೊಂಡು ಬಂದಿದ್ದಾರೆ. ಈ ನಿಟ್ಟಿನಲ್ಲಿ ಸಮಾಜವನ್ನು ಉಳಿಸಿಕೊಳ್ಳುವ, ಬೆಳೆಸುವ ಪ್ರಯತ್ನ ನಿರಂತರ ಸಾಗಬೇಕಾಗಿದೆ. ನಮ್ಮ ಸ್ವಾಭಿಮಾನಕ್ಕೆ ಧಕ್ಕೆ ಬಂದಲ್ಲಿ ಯಾವುದೇ ಹೋರಾಟಕ್ಕೂ ಸಿದ್ಧರಿಬೇಕು ನಮ್ಮ ಸಮುದಾಯ ಎಂದ ಅವರು, ಗ್ರಾಮೀಣ ಪ್ರದೇಶದಲ್ಲಿ ಇಂತಹಾ ಅದ್ಭುತ ಕಾರ್ಯಕ್ರಮವನ್ನು ಹಿಂದೆಂದೂ ನೋಡಿಲ್ಲ. ಇದೀಗ ಸಂಘದ ಅಧ್ಯಕ್ಷ ಸುರೇಶ್ ಗೌಡ ಬೈಲು ಅವರು ಎಲ್ಲರೂ ಮೆಚ್ಚುವ ಕೆಲಸವನ್ನು ಮಾಡಿದ್ದಾರೆ ಎಂದು ನುಡಿದರು.

ವಾಣಿಜ್ಯ ಸಂಕೀರ್ಣಕ್ಕೆ ಶಿಲಾನ್ಯಾಸ ನೆರವೇರಿಸಿದ ಮಾಜಿ ಮುಖ್ಯಮಂತ್ರಿ, ಮಾಜಿ ಸಚಿವ ಡಿ.ವಿ.ಸದಾನಂದ ಗೌಡ ಮಾತನಾಡಿ, ದ.ಕ.ಜಿಲ್ಲೆ ಬಹುತೇಕ ಒಕ್ಕಲಿಗರಿರುವ ನಾಡು. ಆದರೂ ಸಮಾಜದಲ್ಲಿ ಪ್ರಾತಿನಿಧ್ಯದ ಕೊರತೆ ಕಂಡು ಬರುತ್ತಿದೆ.  ಈ ನಿಟ್ಟಿನಲ್ಲಿ ಪ್ರಾತಿನಿಧ್ಯ ಕಲ್ಪಿಸುವ ಕೆಲಸವನ್ನು ಎಲ್ಲರೂ ಒಟ್ಟಾಗಿ ಮಾಡಬೇಕಾದ ಅಗತ್ಯವಿದೆ. ಜಿಲ್ಲೆಯಲ್ಲಿ ಪ್ರಾತಿನಿಧ್ಯದ ಕೊರತೆ ತುಂಬಲು ಸುರೇಶ್ ಬೈಲು ಹಾಗೂ ಅವರ ತಂಡ ಸಜ್ಜಾಗಿದೆ ಎಂದ ಅವರು, ಇದೀಗ ನಿರ್ಮಾಣಗೊಳ್ಳಲಿರುವ ಸಮುದಾಯ ಭವನ ಎಲ್ಲಾ ಸಮಾಜಕ್ಕೆ ಕೊಡುವ ಕೊಡುಗೆಯಾಗಿದೆ ಎಂದರು.

ಮುಖ್ಯ ಅತಿಥಿಯಾಗಿ ಎಂಎಲ್‍ಸಿ ಭೋಜೇ ಗೌಡ ಮಾತನಾಡಿ, ಸಾಮರಸ್ಯದ ಬದುಕು ಕೊಡುವುದರ ಜತೆಗೆ ಅನ್ನ. ಅಕ್ಷರ, ಆರೋಗ್ಯ ನೀಡಿದ ನೇತಾರಿದ್ದರೆ ಅದು ಬಾಲಗಂಗಾಧರನಾಥ ಸ್ವಾಮೀ, ಕೊಟ್ಯಾಂತರ ಭಕ್ತರ ಬಾಳಿಗೆ ಬೆಳಕಾಗಿದ್ದಾರೆ. ಸ್ವಾತಂತ್ರ್ಯದ ಕಿಚ್ಚನ್ನು ಆರಂಭಿಸಿದ್ದರೆ ಅದು ನಮ್ಮ ಸಮಾಜದ ಕೆದಂಬಾಡಿ ರಾಮಯ್ಯ ಗೌಡರು. ಜನಪದ ಸಾಹಿತಿಗಳಿಗೆ ಗೌರವ ಕೊಡುವ ಜತೆಗೆ ಸರಕಾರದ ಮಾಡದ ಕೆಲಸವನ್ನು ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಮಾಡಿದ್ದಾರೆ. ಒಕ್ಕಲಿಗರು ಕೃಷಿ ಬದುಕಿನಿಂದ ಬಂದವರು. ಈ ನಿಟ್ಟಿನಲ್ಲಿ ಮಕ್ಕಳಿಗೆ ಕೃಷಿ ಬದುಕು ಕಲ್ಪಿಸಬೇಕಾದ ಅಗತ್ಯವಿದೆ ಎಂದ ಅವರು, ಅಂತರಾಷ್ಟ್ರೀಯ ಮಟ್ಟಕ್ಕೆ ನಮ್ಮ ಸಮಾಜವನ್ನು ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಕೊಂಡೊಯ್ದಿದ್ದಾರೆ. ಸ್ವಾಮೀಜಿ ಕಟ್ಟಕಡೆಯ ವ್ಯಕ್ತಿಗೂ ಬೆಳಕು ನೀಡುವ ಸಮಾಜ ಇದ್ದರೆ ಅದು ಬಾಲಗಂಗಾಧರನಾಥ ಸ್ವಾಮೀಜಿಯವರ ಮೂಲಕ ನೀಡಿದ ನಮ್ಮ ಸಮಾಜವಾಗಿದೆ ಎಂದರು.

ಸಂಘದ ಸದಸ್ಯರಿಗೆ ಗೌರವಾರ್ಪಣೆ ನೆರವೇರಿಸಿ ಮಾಜಿ ಉಪಮುಖ್ಯಮಂತ್ರಿ ಅಶ್ವತ್ಥನಾರಾಯಣ ಮಾತನಾಡಿ, ಕಾರ್ಯಕ್ರಮವನ್ನು ಎಲ್ಲರೂ ಒಗ್ಗಟ್ಟಿನಿಂದ ಅದ್ಭುತವಾಗಿ ಏರ್ಪಡಿಸಿದ್ದಾರೆ. ಸಮುದಾಯದಲ್ಲಿರುವ ಶಕ್ತಿ, ಉತ್ಸಾಹ ಇಡೀ ನಾಡಿಗೆ ಪ್ರೇರೇಪಣೆಯಾಗಿದೆ. ಈ ನಿಟ್ಟಿನಲ್ಲಿ ನನ್ನ ಕೊಡುಗೆ ಸಹ ಇದೆ ಎಂಬ ಭಾವನೆ ಎಲ್ಲರಲ್ಲೂ ಬರಬೇಕು. ಆಗ ಮಾತ್ರ ಸಾಧಿಸಲು ಸಾಧ್ಯ. ಸಾಧನೆ ಮಾಡುವ ಛಲ ಎಲ್ಲರೂ ಬೆಳೆಸಿಕೊಳ್ಳಬೇಕು ಎಂದರು.

ಮುಖ್ಯ ಅತಿಥಿಯಾಗಿ ಮಾಜಿ ಶಾಸಕ ಸಂಜೀವ ಮಠಂದೂರು ಮಾತನಾಡಿ, ಹೊಸಮಠದಲ್ಲಿ ಆದಿ ಚುಂಚನಗಿರಿ ಮಠದ ದಿವ್ಯತೆ, ಭವ್ಯತೆಯನ್ನು ಕಾಣುವ ಸಂದರ್ಭವನ್ನು ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಯವರು ನೀಡಿದ್ದಾರೆ. ಈ ಕಡಬ ತಾಲೂಕು ಸಮುದಾಯದ ಎಲ್ಲಾ ಬಂಧುಗಳು ಸ್ವಾಭಿಮಾನದ ಬದುಕನ್ನು ಕಟ್ಟುವ ಮೂಲಕ ಎಚ್ಚೆತ್ತ ಸಮಾಜವಾಗಿದೆ. ಇಲ್ಲಿಂದ ಇನ್ನೊಂದು ಚರಿತ್ರೆ ನಿರ್ಮಾಣವಾಗಬೇಕು. ಅದಕ್ಕೆ ಅಧ್ಯಕ್ಷ ಸುರೇಶ್ ಬೈಲು ಅವರ ನೇತೃತ್ವ ಇದೆ, ಿದಕ್ಕೆ ಡಿ.ವಿ.ಸದಾನಂದರು ಧೈರ್ಯ ತುಂಬಿದ್ದಾರೆ ಎಂದ ಅವರು, ಸಮುದಾಯ ಭವನ ಪರಿವರ್ತನೆ ಸಾನಿಧ್ಯವಾಗಬೇಕು,. ಮತ್ತೊಮ್ಮೆ ಈ ಸಮಾಜದಲ್ಲಿಯ ಯುವಕ ಯುವತಿಯರು ತಲೆ ಎತ್ತಿನಿಲ್ಲಬೇಕು, ಸ್ವಾಭಿಮಾನ ಸಮಾಜ ಆಗಬೇಕು ಎಂದು ಈ ಕಾರ್ಯಕ್ರಮದಿಮದ ತೋರಿಸಿಕೊಟ್ಟಿದ್ದಾರೆ. ಕಡಬ ತಾಲೂಕಿನ ಅಭಿವೃದ್ಧಿ, ಶೈಕ್ಷಣಿಕ ಕ್ರಾಂತಿಯಲ್ಲಿ ನಾವು ಮುಂಚೂಣಿಯಲ್ಲಿರುತ್ತೇವೆ ಎಂಬುದನ್ನು ತೋರಿಸಿಕೊಡಬೇಕು ಎಂದರು.  

ಕಡಬ ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ಸುರೇಶ್ ಗೌಡ ಬೈಲು ಪ್ರಾಸ್ತಾವಿಕವಾಗಿ ಮಾತನಾಡಿ, ನಮ್ಮ ಸಂಘದಿಂದ ಎಲ್ಲರಿಗೂ ಏನಾದರೂ ಸಿಗಬೇಕು ಎಂಬ ನಿಟ್ಟಿನಲ್ಲಿ ಆರೋಗ್ಯ ವಿಮೆ, ತರಬೇತಿ ನೀಡುವುದು ಮುಂತಾದ ಎಲ್ಲಾ ಜವಾಬ್ದಾರಿಗಳನ್ನು 400 ಜನರೊಂದಿಗೆ ಹಂಚಿಕೊಳ್ಳುತ್ತೇನೆ. ಕಾರ್ಯಕ್ರಮಕ್ಕೆ ನಿರೀಕ್ಷೆಗಿಂತಲೂ ಹಸಿರುವಾಣಿ ಬಂದಿದೆ. ಎಲ್ಲರಲ್ಲೂ ಸರ್ವ ರೀತಿಯ ಸಹಕಾರ ಕೇಳಿದರು. ಮುಂದಿನ ದಿನಗಳಲ್ಲಿ ಉತ್ತಮ ಸಂಘಟನೆ ಮಾಡುತ್ತೇವೆ ಎಂದು ಹೇಳಿದರು.

ಉಚಿತ ಆಟೋ ಸೇವೆ:

ಕಾರ್ಯಕ್ರಮಕ್ಕೆ ಆಗಮಿಸುವವರ ಅನುಕೂಲತೆಗಾಗಿ ಕಡಬದಲ್ಲಿ 11 ಅಟೋ ರಿಕ್ಷಾಗಳು ಸುಮಾರು 3 ಕಿ.ಮೀ. ದೂರ ತನಕ ಪ್ರಯಾಣಿಕರನ್ನು ಉಚಿತವಾಗಿ ಕರೆದೊಯ್ಯುವ ಮೂಲಕ ತಮ್ಮ ಸೇವಾ ಭಾವನೆಯನ್ನು ತಳೆದಿರುವುದು ವಿಶೇಷತೆಯಾಗಿತ್ತು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top