ಬೆಂಗಳೂರು: ಸ್ನಾನ ಮಾಡಲು ಬಾತ್ ರೂಮ್ ಹೋಗಿದ್ದ ಯುವತಿಯೋರ್ವಳು ಗ್ಯಾಸ್ ಸೋರಿಕೆಯಿಂದ ಮೃತಪಟ್ಟ ಘಟನೆ ಬೆಂಗಳೂರಿನ ಕಾಮಾಕ್ಷಿಪಾಳ್ಯದ ಮೀನಾಕ್ಷಿನಗರದಲ್ಲಿ ನಡೆದಿದೆ.
ರಾಜೇಶ್ವರಿ (23) ಮೃತ ದುರ್ದೈವಿ.
ಖಾಸಗಿ ಕಂಪೆನಿಯೊಂದರಲ್ಲಿ ಕೆಲಸ ಮಾಡಿತ್ತಿದ್ದ ರಾಜೇಶ್ವರಿ ಅಣ್ಣನ ಮದುವೆ ಪ್ರಯುಕ್ತ ರಜೆ ಹಾಕಿದ್ದಳು. ಬೆಳಗ್ಗೆ ಸ್ನಾನ ಮಾಡಲು ಬಾತ್ ರೂಮ್ ಗೆ ಹೋಗಿದ್ದು, ಗ್ಯಾಸ್ ಗೀಸರ್ ಸೋರಿಕೆಯಾದಾಗ ವಿಷಾನಿಲದಿಂದ ಪ್ರಜ್ಞೆ ತಪ್ಪಿ ಬಿದ್ದಿದ್ದಾಳೆ. ಎಷ್ಟು ಹೊತ್ತಾದರೂ ಹೊರಬಾರದಾಗ ಮನೆಯವರು ಬಾಗಿಲು ಬಡಿದಿದ್ದಾರೆ. ಬಳಿಕ ಬಾಗಿಲು ಒಡೆದು ಒಳಗೆ ಹೋದಾಗ ಪ್ರಜ್ಞೆ ತಪ್ಪಿರುವುದು ಗಮನಕ್ಕೆ ಬಂದಿದೆ. ತಕ್ಷಣ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದರೂ ಅದಾಗಲೇ ರಾಜೇಶ್ವರಿ ಮೃತಪಟ್ಟಿದ್ದರು ಎನ್ನಲಾಗಿದೆ.