ಪುತ್ತೂರು: ರಾಜ್ಯದ ಕಾಂಗ್ರೆಸ್ ಸರಕಾರದ 5 ಗ್ಯಾರಂಟಿ ಯೋಜನೆಯಿಂದ ರಾಜ್ಯದ ಪ್ರತೀ ಮನೆಯೂ ಬೆಳಗಿದೆ, ಮನೆ ಬೆಳಗಿಸಿದ ಸರಕಾರ ಮನೆಗೆ ಹೋಗುವ ದಾರಿಗೂ ಕಾಂಕ್ರೀಟ್ ಸೌಲಭ್ಯಕ್ಕೆ ಅನುದಾನ ನೀಡಿ ಮನೆಯ ದಾರಿಯನ್ನೂ ಬೆಳಗಿಸುವ ಕಾರ್ಯ ಮಾಡುತ್ತಿದೆ ಎಂದು ಪುತ್ತೂರು ಶಾಸಕ ಅಶೋಕ್ ರೈ ಹೇಳಿದರು.
ಅವರು ಪಾಣಾಜೆ ಗ್ರಾಮದ ವಿವಿಧ ಕಡೆಗಳಲ್ಲಿ ರೂ 1.27 ಕೋಟಿ ರೂ ಅನುದಾನದಲ್ಲಿ ರಸ್ತೆ ಕಾಂಕ್ರಿಟೀಕರಣಕ್ಕೆ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು.
ಪಾಣಾಜೆ ಗ್ರಾಮದಲ್ಲಿ ಈ ಹಿಂದೆ ಅಭಿವೃದ್ದಿ ಕಾರ್ಯಗಳು ನಡೆದಿಲ್ಲ. ಗ್ರಾಮೀಣ ರಸ್ತೆಗಳು ಸಂಪೂರ್ಣ ಹದಗಡಟ್ಟಿತ್ತು ಇದನ್ನು ಮನಗಂಡು ಅತ್ಯಂತ ಗೆಚ್ಚು ಅನುದಾನವನ್ನು ನೀಡಲಾಗಿದೆ. ಅಗತ್ಯ ಇರುವ ಕಡೆಗಳಿಗೆ ಹೆಚ್ಚಿನ ಅನುದಾನವನ್ನು ನೀಡಲಾಗಿದೆ ಎಂದು ಹೇಳಿದರು.
ಗ್ರಾಪಂ ಅಧ್ಯಕ್ಷೆ ಮೈಮೂನತುಲ್ ಮೆಹ್ರಾ, ಪಾಣಾಜೆ ರಣಮಂಗಳ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತ ಮೊಕ್ತೇಸರ ಶ್ರೀ ಕೃಷ್ಣ ಬೊಳಿಲ್ಲಾಯ ಕಡಮಾಜೆ, ಉಪಾಧ್ಯಕ್ಷೆ ಜಯಶ್ರೀ ,ಗ್ರಾಪಂ ಸದಸ್ಯ ನಾರಾಯಣ ನಾಯ್ಕ ಅಪಿನಿಮೂಲೆ, ಕೃಷ್ಣಪ್ಪ ಪೂಜಾರಿ ಬೊಳ್ಳಿಂಬಲ, ವಿಮಲ ಮಾಲಿಂಗ ನಾಯ್ಕ, ವಲಯಾಧ್ಯಕ್ಷ ಉಮ್ಮರ್ ಜನಪ್ರಿಯ, ಬಾಬು ರೈ ಕೋಟೆ, ಬಿಜೆಪಿ ಶಕ್ತಿಕೇಂದ್ರದ ಸದಾಶಿವ ರೈ ಸೂರಂಬೈಲು, ಲಕ್ಣ್ಮೀ ನಾರಾಯಣ ರೈ ಕೆದಂಬಾಡಿ, ಜಗನ್ಮೋಹನ್ ರೈ,ಅಬೂಬಕ್ಕರ್ ಆರ್ಲಪದವು, ವಿಶ್ವನಾಥ ರೈ, ಅದ್ರು ಆರ್ಲಪದವು, ಖಾಲಿದ್ ಬೊಳ್ಳಿಂಬಲ, ಅಲಿಕುಂಞಿ ಆರ್ಲಪದವು, ಎ ಕೆ ಆರ್ಲಪದವು, ಸೀತಾ ಉದಯಶಂಕರ ಭಟ್,ಕುಂಞಿ ಮಣಿಯಾಣಿ, ಉಪೇಂದ್ರ ಬಲ್ಯಾಯ, ನಾರಾಯಣ ನಾಯ್ಕ ಹಾರಿಸ್ ಆರ್ಲಪದವು, ಅನಂತ ರಾಮ,ಮಹಾಲಿಂಗ ಮಣಿಯಾಣಿ, ರತ್ನಾವತಿ, ತಮ್ಮಣ್ಣ ನಾಯ್ಕ,ನಾರಾಯಣ ಪೂಜಾರಿ ನಡುಕಟ್ಟ,ಮತ್ತಿತರರು ಉಪಸ್ಥಿತರಿದ್ದರು. ಯುವ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀಪ್ರಸಾದ್ ಪಾಣಾಜೆ ಸ್ವಾಗತಿಸಿ, ವಂದಿಸಿದರು