ಕಡಬ ತಾಲೂಕು ಒಕ್ಕಲಿಗರ ಗೌಡ ಸೇವಾ ಸಂಘದ ಅಧ್ಯಕ್ಷ ಸುರೇಶ್ ಬೈಲು ನೇತೃತ್ವದಲ್ಲಿ ಸಾಕಾರಗೊಳ್ಳುತ್ತಿದೆ ಸಮುದಾಯ ಭವನ | ಒಕ್ಕಲಿಗ ಗೌಡ ಸಮುದಾಯದಿಂದ ಮೆಚ್ಚುಗೆ

ಕಡಬ: ಅತೀ ಹೆಚ್ಚು ಒಕ್ಕಲಿಗ ಗೌಡರ ಜನಸಂಖ್ಯೆ ಇರುವ ಕಡಬ ತಾಲೂಕಿನ ಒಕ್ಕಲಿಗ ಗೌಡ ಸಮುದಾಯ ಭವನ ನಿರ್ಮಾಣದ ಕನಸು ಇದೀಗ ಸಾಕಾರಗೊಳ್ಳುತ್ತಿದೆ. ಅದಕ್ಕೆ ಕಾರಣ ಅಧ್ಯಕ್ಷರಾದ ಸುರೇಶ್ ಗೌಡ ಬೈಲು ಅವರು. ಬಿಳಿನೆಲೆಯ ಬೈಲು ಶಿವರಾಮ ಗೌಡರ ಮಗನಾದ ಸುರೇಶ್‌ ಗೌಡರ ಚತುರತೆಗೆ ಇದೀಗ ಒಕ್ಕಲಿಗ ಗೌಡ ಸಮಾಜ ಮೆಚ್ಚುಗೆ ವ್ಯಕ್ತಪಡಿಸಿದೆ.

ಬಡತನದಲ್ಲಿ ಹುಟ್ಟಿ ಬೆಳೆದ ಸುರೇಶ್ ಗೌಡರು ಮಂಗಳೂರಿನಲ್ಲಿ ನೆಲೆಸಿ 30 ವರ್ಷ ಸಂದಿದೆ. ಕ್ಲಾಸ್ 1 ವಿದ್ಯುತ್‌ ಗುತ್ತಿಗೆದಾರರಾದ ಸುರೇಶ್ ಗೌಡರ ಸಂಘಟನಾ ಚತುರತೆ ಹೊರ ಬಂದದ್ದು ಸ್ವಾತಂತ್ರ್ಯ ಯೋಧ ರಾಮಯ್ಯ ಗೌಡರ ಪ್ರತಿಮೆ ಪ್ರತಿಷ್ಠಾಪನೆ ಸಂದರ್ಭ. ಪ್ರತಿಮೆ ರೂವಾರಿ ಜಿಲ್ಲೆಯ ಯುವ ಮುಖಂಡ ಕಿರಣ್ ಬುಡ್ಡೆಗುತ್ತುರವರ ಪ್ರೇರಣೆಯಿಂದ ಮಂಗಳೂರಿನಲ್ಲಿ ಸಂಘಟನೆಯ ಕೆಲಸ ಮಾಡಿದ ಸುರೇಶ್ ಗೌಡರು ನಂತರ ಜವಾಬ್ದಾರಿ ವಹಿಸಿಕೊಂಡದ್ದೇ ಕಡಬದ ಒಕ್ಕಲಿಗ ಗೌಡ ಸಮುದಾಯದ ಅಧ್ಯಕ್ಷರಾಗಿ ಕಳೆದ 30 ವರ್ಷಗಳಿಂದ ಮಂಗಳೂರಿನಲ್ಲಿ ನೆಲೆಸಿರುವ ಸುರೇಶ್ ಗೌಡರು ಕ್ಲಾಸ್‌ 1 ವಿದ್ಯುತ್ ಗುತ್ತಿಗೆದಾರರಾಗಿ, ಮಂಗಳೂರಿನ ಕೊಟ್ಟಾರದಲ್ಲಿ ರಿಯಲ್ ಎಸ್ಟೇಟ್ ವ್ಯವಹಾರದ ‘ವಿ’ ಗ್ರೂಪ್ಸ್ ಹಾಗೂ ಕಡಬದಲ್ಲಿ ಶ್ರೀಕೃಷ್ಣ ಸಿಮೆಂಟ್ ಪ್ರೊಡಕ್ಟ್ ಕಂಪನಿ ಹೊಂದಿದ್ದಾರೆ. ಕೆಲ ತಿಂಗಳಲ್ಲಿ ಕಡಬದಲ್ಲಿ ತಂಡ ಕಟ್ಟಿ ಸ್ವಂತ ಖರ್ಚಿನಲ್ಲಿ ರಾತ್ರಿ ಹಗಲು ದುಡಿದು ತಲಾ 1 ಲಕ್ಷ ರೂಪಾಯಿ ಧನಸಹಾಯ ನೀಡಿದ 350 ಜನ ಸ್ಥಾಪಕ ಸದಸ್ಯರಾಗಿಸಿದರು. 4 ತಿಂಗಳಲ್ಲಿ 1250 ಮನೆಗಳನ್ನು ತನ್ನ ಸಮಿತಿಯವರೊಂದಿಗೆ ಸೇರಿ ಭೇಟಿಯಾಗಿದ್ದಾರೆ.

ಸಮುದಾಯ ಭವನ ಹೇಗಿರಲಿದೆ.:































 
 

ಸಮುದಾಯ ಭವನದಲ್ಲಿ ವಸತಿ ನಿಲಯ, ವಾಣಿಜ್ಯ ಸಂಕೀರ್ಣ ಇರಲಿದೆ. ಇದರಲ್ಲಿ 3 ಸಮುದಾಯ ಭವನ ಇರಲಿದ್ದು ಒಂದರಲ್ಲಿ 1500, ಮತ್ತೊಂದರಲ್ಲಿ 1000, ಮೂರನೇದಯಲ್ಲಿ 700 ಜನ ಕುಳಿತುಕೊಳ್ಳುವ ವ್ಯವಸ್ಥೆ ಇದೆ. ಭವನಕ್ಕೆ ಜಾಗ ಖರೀದಿಗೆ 1.75 ಕೋಟಿ ರೂಪಾಯಿ ಉದ್ಯಮಿ ಎಸ್.ಆರ್.ಕೆ ಲ್ಯಾಡರ್ಸ್ ನ ಕೇಶವ ಗೌಡ ಅಮೈ ಜೊತೆ ಸೇರಿ ಖರೀದಿಸಿದ್ದರು. ಇದೀಗ 15 ಕೋಟಿ ವೆಚ್ಚದಲ್ಲಿ ಸುಸಜ್ಜಿತ ಸಮೂದಾಯ ಭವನ ನಿರ್ಮಾಣವಾಗಲಿದೆ.

ನಾಳೆ ನಡೆಯಲಿರುವ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಶ್ರೀ ಆದಿಚುಂಚನಗಿರಿ ಪೀಠಾಧಿಪತಿ ಶ್ರೀ ನಿರ್ಮಲಾನಂದ ಸ್ವಾಮಿಜೀ, ಮಂಗಳೂರು ಶಾಖಾ ಮಠದ ಶ್ರೀ ಡಾ.ಧರ್ಮಪಾಲನಾಥ ಸ್ವಾಮಿಜೀ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾ‌ರ್, ಡಿವಿ ಸದಾನಂದ ಗೌಡ, ಎಚ್.ಡಿ.ಕುಮಾರಸ್ವಾಮಿ, ಶೋಭಾ ಕರಂದ್ಲಾಜೆ, ಅಶ್ವತ್ಥ ನಾರಾಯಣ, ಆ‌ರ್.ಅಶೋಕ್‌ ಸಹಿತ ಹಲವು ಗಣ್ಯರ ಉಪಸ್ಥಿತಿಯಲ್ಲಿ ಶಿಲಾನ್ಯಾಸ ನೆರವೇರಲಿದೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top