ಪುತ್ತೂರು: ಇಲ್ಲಿನ ತಾಲೂಕು ಸರಕಾರಿ ಆಸ್ಪತ್ರೆಯಲ್ಲಿ ತಡರಾತ್ರಿ ಬೆಂಕಿ ಅವಘಡ ಸಂಭವಿಸಿದೆ.
ಆಸ್ಪತ್ರೆಯ ತೀವ್ರ ನಿಗಾ ವಿಭಾಗದಲ್ಲಿ ಘಟನೆ ಸಂಭವಿಸಿದ್ದು ಅಗ್ನಿಶಾಮಕ ದಳದವರು ಬಂದು ಬೆಂಕಿ ನಂದಿಸಿದ್ದಾರೆ. ದುರ್ಘಟನೆಯಲ್ಲಿ ಹವಾನಿಯಂತ್ರಿತ ಘಟಕ ಮತ್ತು ಅದರ ಪಕ್ಕದಲ್ಲಿದ್ದ ಇತರ ಕೆಲವೊಂದು ಯಂತ್ರಗಳಿಗೆ ಹಾನಿಯಾಗಿದೆ.
ಹವಾನಿಯಂತ್ರಿತ ಘಟಕದ ಚಿಪ್ಪು ಒಡೆದು ಈ ಘಟನೆ ಸಂಭವಿಸಿದೆ ಎಂದು ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ಆಶಾ ಪುತ್ತೂರಾಯ ತಿಳಿಸಿದ್ದಾರೆ. ಐಸಿಯೂ ನಲ್ಲಿದ್ದ ರೋಗಿಗಳನ್ನು ತಕ್ಷಣ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ಉಳಿದಂತೆ ಏನೂ ಅಪಾಯ ಆಗಿಲ್ಲ ಎಂದವರು ತಿಳಿಸಿದ್ದಾರೆ. ವಿಷಯ ತಿಳಿದ ಶಾಸಕ ಅಶೋಕ್ ರೈ ಅವರು ಧಾವಿಸಿ ಬಂದಿದ್ದಾರೆ. ಸ್ಥಳೀಯ ವಿಹಿಂಪ ಕಚೇರಿಯಲ್ಲಿ ತಂಗಿದ್ದ ದತ್ತ ಮಾಲಾಧಾರಿಗಳು ಹಾಗೂ ಇತರ ಸಾರ್ವಜನಿಕರು ರಕ್ಷಣಾ ಕಾರ್ಯಾಚರಣೆಯಲ್ಲಿ ಸಹಕರಿಸಿದರು.