ಅಯೋಧ್ಯೆಯ ರಾಮಮಂದಿರ ಉದ್ಘಾಟನೆಗೆ ದಿನಗಣನೆ ಆರಂಭವಾಗಿದ್ದು, ಸಕಲ ಸಿದ್ದತೆಗಳು ಭರದಿಂದ ಸಾಗುತ್ತಿದೆ. ಈ ನಡುವೆ ಭಕ್ತರಿಂದ ರಾಮಮಂದಿರಕ್ಕೆ ವಿಶೇಷ ಇದು ಗುಜರಾತ್‌ನ ವಡೋದರದಲ್ಲಿ ಅಯೋಧ್ಯೆಯ ರಾಮ ಮಂದಿರಕ್ಕಾಗಿ ವಿಶೇಷವಾದ ಅಗರಬತ್ತಿ ತಯಾರಿಸಲಾಗುತ್ತಿದೆ.
ಅಗರಬತ್ತಿಯನ್ನು ರಾಮಮಂದಿರದ ಪ್ರತಿಷ್ಠಾಪನೆಗೂ ಮೊದಲೇ ಅಯೋಧ್ಯೆಗೆ ಕಳುಹಿಸಲಾಗುತ್ತದೆ. ಉಡುಗೊರೆಗಳನ್ನು ಕೊಡೋದಕ್ಕೆ ಬೃಹತ್ ಗಾತ್ರದ ಅಗರಬತ್ತಿಯನ್ನು ತಯಾರಿಸಲಾಗುತ್ತಿದೆ.
ಈ ಅಗರಬತ್ತಿ 108 ಅಡಿ ಉದ್ದವಿದ್ದು, ಸುಮಾರು 3,428 ಕಿಲೋ ತೂಕವಿದೆ. ಇದನ್ನು 10ಕ್ಕೂ ಹೆಚ್ಚು ಕಬ್ಬಿಣದ ಟ್ರೈಪಾಡ್ ಸ್ಟ್ಯಾಂಡ್ ಅಳವಡಿಸಿ ತಯಾರಿಸಲಾಗುತ್ತಿದೆ. ಅವುಗಳ ಮೇಲೆ ಅಗರಬತ್ತಿಯನ್ನು ತಯಾರಿಸಲಾಗುತ್ತಿದೆ.