ಪುತ್ತೂರು: ತಾಲೂಕು ಯುವ ಒಕ್ಕಲಿಗ ಗೌಡ ಸೇವಾ ಸಂಘದ ಗೌರವಾಧ್ಯಕ್ಷರಾಗಿ ರಾಧಾಕೃಷ್ಣ ಗೌಡ ನಂದಿಲ, ಅಧ್ಯಕ್ಷರಾಗಿ ಅಮರನಾಥ ಗೌಡ ಬಪ್ಪಳಿಗೆ, ಪ್ರಧಾನ ಕಾರ್ಯದರ್ಶಿಯಾಗಿ ಆನಂದ ಗೌಡ ತೆಂಕಿಲ, ಉಪಾಧ್ಯಕ್ಷರಾಗಿ ಯತೀಂದ್ರ ಕೊಚ್ಚಿ, ಬಾಲಚಂದ್ರ ಬೆಳ್ಳಿಪ್ಪಾಡಿ, ಕೋಶಾಧಿಕಾರಿಯಾಗಿ ಪ್ರಶಾಂತ್ ಕೆಮ್ಮಾಯಿ ಆಯ್ಕೆಯಾಗಿದ್ದಾರೆ.
ಸಂಘಕ್ಕೆ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಒಕ್ಕಲಿಗ ಗೌಡ ಸಮುದಾಯ ಭವನದಲ್ಲಿ ಪ್ರಸ್ತುತ ಅಧ್ಯಕ್ಷ ನಾಗೇಶ್ ಕೆಡೆಂಜಿ ಅವರ ಅಧ್ಯಕ್ಷತೆಯಲ್ಲಿ, ಪ್ರಧಾನ ಕಾರ್ಯದರ್ಶಿ ಸುಬ್ರಾಯ ಗೌಡ ಪಾಲ್ತಾಡಿ, ನಿಕಟಪೂರ್ವ ಅಧ್ಯಕ್ಷ ಪ್ರವೀಣ್ ಕುಂಟ್ಯಾನ ಹಾಗೂ ಒಕ್ಕಲಿಗ ಗೌಡ ಸೇವಾ ಸಂಘದ ಪ್ರಧಾನ ಕಾರ್ಯದರ್ಶಿ ಸುಂದರ ಗೌಡ ನಡುಬೈಲು ಅವರ ಉಪಸ್ಥಿತಿಯಲ್ಲಿ ನಡೆಯಿತು.
ಕ್ರೀಡಾ ಕಾರ್ಯದರ್ಶಿಯಾಗಿ ಪವನ್ ದೊಡ್ಡಮನೆ ಪೆರ್ಲಂಪಾಡಿ, ಜೋತೆ ಕಾರ್ಯದರ್ಶಿಯಾಗಿ ಲೋಕೇಶ್ ಗೌಡ ಪುಳಿತ್ತಡಿ, ಕೇಶವ ಗೌಡ ಕನ್ನಾಯ, ಸಂಘಟನಾ ಕಾರ್ಯದರ್ಶಿ ಯಾಗಿ ಪೂವಪ್ಪ ಗೌಡ ದೇಂತಡ್ಕ ಪಡ್ನೂರು, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಶಿಕ್ಷಕ ವಿಶ್ವನಾಥ ಗೌಡ ಬೊಳ್ಳಾಡಿ ಕುಂಬ್ರ, ಕಾರ್ಯಕಾರಿ ಸಮಿತಿ ಸದಸ್ಯರರಾಗಿ ಬಾಲಕೃಷ್ಣ ಗೌಡ ಕೊಳ್ತಿಗೆ, ವಸಂತ ಗೌಡ ವೀರಮಂಗಲ, ಧೀರಜ್ ಕೊಡಿಪ್ಪಾಡಿ, ರವೀಂದ್ರ ಗೌಡ , ಹಿರೇಬಂಡಾಡಿ, ದೀಪಕ್ ಗೌಡ ಮುಂಡ್ಯ ನೆಟ್ಟನಿಗೆ, ಯುವರಾಜ್ ಪೆರಿಯತ್ತೋಡಿ, ಗೌರವ್ ಸಲಹೆಗಾರರಾಗಿ ಮಾದವ ಗೌಡ ಪೆರಿಯತ್ತೋಡಿ, ವಿಶ್ವನಾಥ ಗೌಡ ಬನ್ನೂರು, ಮುಕುಂದ ಬಜತ್ತೂರು ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ಸಭೆಯಲ್ಲಿ ಒಕ್ಕಲಿಗ ಗೌಡ ಸೇವಾ ಸಂಘದ ಹಿರಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು. ನೂತನ ಯುವ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಡಿ.24 ರಂದು ಒಕ್ಕಲಿಗ ಸಮುದಾಯದ ಭವನದಲ್ಲಿ ನಡೆಯಲಿದೆ ಎಂದು ಸಂಘದ ಪ್ರಕಟಣೆ ತಿಳಿಸಿದೆ.