ಪುತ್ತೂರು: ತಾಲೂಕಿನ ಬಲ್ನಾಡು ವಲಯದ ಕುಂಜೂರು ಪಂಜ ಕಾರ್ಯ ಕ್ಷೇತ್ರದಲ್ಲಿ ಭಾಗ್ಯ ಜ್ಯೋತಿ ಜ್ಞಾನವಿಕಾಸ ಕೇಂದ್ರದಲ್ಲಿ ವಾರ್ಷಿಕೋತ್ಸವ ಕಾರ್ಯಕ್ರಮ ನಡೆಯಿತು.
ವಿಜಯ ಕರ್ನಾಟಕ ಪತ್ರಿಕೆಯ ಜಿಲ್ಲಾ ವರದಿಗಾರ ಸುಧಾಕರ್ ಸುವರ್ಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪ್ರಸ್ತುತ ಮಹಿಳೆಯರು ಜ್ಞಾನವಿಕಾಸ ಕಾರ್ಯಕ್ರಮದಿಂದ ವಿವಿಧ ಮಾಹಿತಿಗಳನ್ನು ಪಡೆದುಕೊಂಡು ಆರ್ಥಿಕವಾಗಿ ಬಲಶಾಲಿಯಾಗುವ ಮೂಲಕ ಸಮಾಜದ ಮುಖ್ಯ ವಾಹಿನಿಗೆ ಬಂದಿದ್ದಾರೆ. ಈ ಮೂಲಕ ಮನಸ್ಸಿದ್ದರೆ ಯಾವುದೇ ಕೆಲಸ ಮಾಡಬಹುದು ಎಂದು ತೋರಿಸಿಕೊಟ್ಟಿದ್ದಾರೆ ಎಂದರು.
ತಾಲೂಕು ಯೋಜಾಧಿಕಾರಿ ಶಶಿಧರ್ ಜ್ಞಾನ ವಿಕಾಸ ಕಾರ್ಯಕ್ರಮದಲ್ಲಿ ಹಲವಾರು ಮಾಹಿತಿ ಕಾರ್ಯಕ್ರಮಗಳನ್ನು ಮಹಿಳೆಯರಿಗೆ ನೀಡುತ್ತಿದ್ದು ಎಲ್ಲಾ ವಿಚಾರದಲ್ಲೂ ಮಹಿಳೆಯರು ಸಬಲೆಯರು ಎನ್ನುವುದನ್ನು ತೋರಿಸಿಕೊಟ್ಟಿದೆ. ಜಾನವಿಕಾಸ ಕಾರ್ಯಕ್ರಮಗಳು ಇನ್ನು ಉತ್ತಮವಾಗಿ ನಡೆಯಲಿ ಎಂದು ಶುಭ ಹಾರೈಸಿದರು.
ಕೇಂದ್ರದ ಸದಸ್ಯೆ ಉಮಾವತಿ ಅಧ್ಯಕ್ಷತೆ ವಹಿಸಿದ್ದರು. ತರಬೇತಿ ಸಮನ್ವಯಾಧಿಕಾರಿ ಲಲಿತ, ಕೇಂದ್ರದ ಸಂಯೋಜಕಿ ವಿದ್ಯಾಲಕ್ಷ್ಮಿ,ಕೇಂದ್ರದ ಸದಸ್ಯರು ಸ್ಥಳೀಯರು ಉಪಸ್ಥಿತರಿದ್ದರು. ವೀಣಾ ಪ್ರಾರ್ಥಿಸಿದರು. ಸೇವಾಪ್ರತಿನಿಧಿ ಆಶಾಲತಾ ಸ್ವಾಗತಿಸಿದರು, ವಿನೋದ ಜ್ಞಾನವಿಕಾಸ ಕೇಂದ್ರದ ಸಾಧನಾ ವರದಿಯನ್ನು ಸಭೆಯ ಮುಂದಿಟ್ಟರು. ತಾಲೂಕು ಸಮನ್ವಯಾಧಿಕಾರಿ ಕಾವ್ಯಶ್ರೀ ನಿರೂಪಿಸಿದರು ಸ್ವಾತಿ ವಂದಿಸಿದರು. ವಾರ್ಷಿಕೋತ್ಸವದ ಅಂಗವಾಗಿ ಸದಸ್ಯರಿಗೆ ವಿವಿಧ ಆಟೋಟ ಸ್ಪರ್ಧೆಗಳನ್ನು ಹಮ್ಮಿಕೊಂಡಿದ್ದು ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಕೇಂದ್ರದ ಸದಸ್ಯರು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಪ್ರದರ್ಶಿಸಿದರು.