ಭಾರತೀಯ ಕುಸ್ತಿ ಸಂಘದ ಜಂಟಿ ಕಾರ್ಯದರ್ಶಿಯಾಗಿ ಬೆಳ್ಳಿಪ್ಪಾಡಿ ಗುಣರಂಜನ್ ಶೆಟ್ಟಿ ಆಯ್ಕೆ | ಇತಿಹಾಸದಲ್ಲೇ ಪ್ರಥಮ ಬಾರಿಗೆ ಕರ್ನಾಟಕದಿಂದ ಆಯ್ಕೆ

ಭಾರತೀಯ ಕುಸ್ತಿ ಸಂಘದ ಜಂಟಿ ಕಾರ್ಯದರ್ಶಿಯಾಗಿ ಕರ್ನಾಟಕ ರಾಜ್ಯ ಕುಸ್ತಿ ಸಂಘದ ಅಧ್ಯಕ್ಷರಾದ  ಬಿ.ಗುಣರಂಜನ್ ಶೆಟ್ಟಿ ಆಯ್ಕೆಯಾಗಿದ್ದಾರೆ.

ದೆಹಲಿಯಲ್ಲಿ ನಡೆದ ಭಾರತೀಯ ಕುಸ್ತಿ ಸಂಘದ ಚುನಾವಣೆಯಲ್ಲಿ ಇತಿಹಾಸದಲ್ಲೇ ಮೊದಲ ಬಾರಿಗೆ ಕರ್ನಾಟಕದಿಂದ ಭಾರತೀಯ ಕುಸ್ತಿ ಸಂಘದ ಜಂಟಿ ಕಾರ್ಯದರ್ಶಿಗಳಾಗಿ  ಕರ್ನಾಟಕ ರಾಜ್ಯ ಕುಸ್ತಿ ಸಂಘದ ಅಧ್ಯಕ್ಷರಾದ ಬಿ.ಗುಣರಂಜನ್ ಶೆಟ್ಟಿಯವರು ಆಯ್ಕೆಯಾಗಿದ್ದಾರೆ.

ಪದಾಧಿಕಾರಿಗಳ ಪಟ್ಟಿ































 
 

ಅಧ್ಯಕ್ಷರಾಗಿ ಸಂಜಯ್‌ ಕುಮಾರ್‌ ಸಿಂಗ್‌, ಹಿರಿಯ ಉಪಾಧ್ಯಕ್ಷರಾಗಿ ದೇವೇಂದರ್‌,    ಉಪಾಧ್ಯಕ್ಷರಾಗಿ ಅಸಿತ್‌ ಕುಮಾರ್‌ ಸಹ, ಜಯಪ್ರಕಾಶ್‌, ಕಾರ್‍ತರ್‌ ಸಿಂಗ್‌, ಎನ್‌.ಫೋನಿ, ಪ್ರಧಾನ ಕಾರ್ಯದರ್ಶಿಯಾಗಿ ಪ್ರೇಮ್‌ ಚಂದ್‌ ಲೊಚಬ್‌, ಕೋಶಾಧಿಕಾರಿಯಾಗಿ ಸತ್ಯಪಾಲ್‌ ಸಿಂಗ್‌ ದೇಶ್‌ವಾಲ್‌, ಜಂಟಿ ಕಾರ್ಯದರ್ಶಿ ಬೆಳ್ಳಿಪ್ಪಾಡಿ ಗುಣರಂಜನ್‌ ಶೆಟ್ಟಿ, ಆರ್‌.ಕೆ.ಪುರುಶೋತ್ತಮ್‌, ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಎಮ್‌.ಲೋಗನಾಥನ್‌, ನೈವಿಕೌಲಿ ಖಾತ್ಸು, ಪ್ರಶಾಂತ್‌ ರೈ, ರಜನೀಶ್‌ ಕುಮಾರ್‌, ಉಮ್ಮೆದ್‌ ಸಿಂಗ್.

ದಕ್ಷಿಣಕನ್ನಡ ಜಿಲ್ಲೆಯ ನಡುಮೊಗರುಗುತ್ತು ವಿಠಲ ಶೆಟ್ಟಿ ಮತ್ತು ಬೆಳ್ಳಿಪ್ಪಾಡಿ ಉರಮಾಲು ಗುತ್ತು ಪ್ರಫುಲ್ಲ ವಿ.ಶೆಟ್ಟಿ ದಂಪತಿ ಸುಪುತ್ರ ಹಾಗೂ ಡಾ.ಸಾಯಿ ರಮೇಶ್‌ ಶೆಟ್ಟಿ ಮತ್ತು ದಕ್ಷಿಣ ಭಾರತದ ಖ್ಯಾತ ನಟಿ ಅನುಷ್ಕಾ ಶೆಟ್ಟಿ ಯವರ ಸಹೋದರ ಬಿ.ಗುಣರಂಜನ್ ಶೆಟ್ಟಿ  ಮೂಲತಃ ಪುತ್ತೂರಿನ ಬೆಳ್ಳಿಪ್ಪಾಡಿ ಮನೆತನದಲ್ಲಿ ಜನಿಸಿ,  ಉರಮಾಲು ಗುತ್ತು ನಿವಾಸಿಯಾಗಿರುವ ಅವರು ಪ್ರಸ್ತುತ ಬೆಂಗಳೂರಿನಲ್ಲಿ ವಾಸವಿರುತ್ತಾರೆ. ತಮ್ಮ ವಿದ್ಯಾಭ್ಯಾಸವನ್ನು ಬೆಂಗಳೂರಿನಲ್ಲಿ ಮಾಡಿರುವ ಬಿ. ಗುಣರಂಜನ್‌ ಶೆಟ್ಟಿಯವರು  ಬೆಂಗಳೂರಿನಲ್ಲಿ ಉದ್ಯಮಿಯಾಗಿದ್ದಾರೆ. ಶ್ರೀ ಮಹಾಲಿಂಗೇಶ್ವರ ಸೇವಾ ಟ್ರಸ್ಟ್‌ ಬೆಂಗಳೂರು, ಐ ಕ್ಯಾರ್‌ ಬ್ರಿಗೇಡ್‌,  ಐ ಕ್ಯಾರ್‌ ಫೌಂಡೇಶನ್‌, ಜಯಕರ್ನಾಟಕ ಜನಪರ ವೇದಿಕೆಯ ಸಂಸ್ಥಾಪಕರು ಹಾಗೂ ಬೆಂಗಳೂರು ಕಂಬಳ ಸಮಿತಿಯ ಉಪಾಧ್ಯಕ್ಷರೂ ಆಗಿರುತ್ತಾರೆ. ಪರಿಸರವಾದಿಗಳು ಆಗಿರುವ ಇವರು ಬೆಂಗಳೂರು ಮತ್ತು ರಾಜ್ಯದಲ್ಲಿ ಅನೇಕ ಗಿಡ ನೆಡುವ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರು. ಬೆಂಗಳೂರಿನಲ್ಲಿ ಮರಗಳಿಂದ ಕಬ್ಬಿಣದ ರಾಡ್‌ ಮತ್ತು ಮೊಳೆ  ತೆಗೆಯುವ  ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಪರಿಸರ ಪ್ರೇಮಿಗಳಿಗೆ ಹತ್ತಿರವಾಗಿದ್ದರು. ಇತ್ತೀಚೆಗೆ ನಡೆದ ದೇಶದಲ್ಲೇ ಪ್ರಖ್ಯಾತಿ ಪಡೆದ ಬೆಂಗಳೂರು ಕಂಬಳದ ಆಯೋಜನೆಯ ಪ್ರಮುಖ ಜವಾಬ್ದಾರಿಯನ್ನು ವಹಿಸಿಕೊಂಡು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮತ್ತು ಕರಾವಳಿ ಹಾಗೂ ಬೆಂಗಳೂರಿನ ಜನರ ಪ್ರಶಂಸೆಗೆ ಒಳಗಾಗಿದ್ದಾರೆ.

ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ಪರಮ ಭಕ್ತರಾಗಿರುವ ಅವರು ಬೆಂಗಳೂರಿನ ತಿಪ್ಪಸಂದ್ರದಲ್ಲಿ ಮಹಾಶಿವರಾತ್ರಿಯ ಧಾರ್ಮಿಕ ಕಾರ್ಯಕ್ರಮವನ್ನು ಬಹಳ ವಿಜ್ರಂಭಣೆಯಿಂದ ಮತ್ತು ಸಾವಿರಾರು ಭಕ್ತರಿಗೆ ಅನ್ನದಾನ ಕಾರ್ಯಕ್ರಮದ ನೇತೃತ್ವವನ್ನು ವಹಿಸಿಕೊಂಡು ಬಂದಿದ್ದಾರೆ. ಅಪಾರ ಅಭಿಮಾನಿಗಳನ್ನು ಹೊಂದಿರುವ ಗುಣರಂಜನ್‌ ಶೆಟ್ಟಿಯವರನ್ನು  ಅಭಿಮಾನದಿಂದ ಪ್ರೀತಿಯ ಗುಣಣ್ಣ ಎಂದು ಕರೆಯುತ್ತಾರೆ.

ಪ್ರಸ್ತುತ ಕರ್ನಾಟಕ ಕುಸ್ತಿ ಸಂಘದ ಅಧ್ಯಕ್ಷರು ಆಗಿರುವ ಗುಣರಂಜನ್‌ ಶೆಟ್ಟಿಯವರು ಇದೀಗ ಭಾರತೀಯ ಕುಸ್ತಿ ಸಂಘದ ಜಂಟಿ ಕಾರ್ಯದರ್ಶಿಗಳಾಗಿ ಆಯ್ಕೆಯಾಗಿರುವುದು ಇತಿಹಾಸದಲ್ಲೇ ಪ್ರಥಮ ಬಾರಿಗೆ ಕರ್ನಾಟಕದಿಂದ ಆಯ್ಕೆಯಾಗಿರುವುದು ಕರ್ನಾಟಕದ ಜನತೆ ಹೆಮ್ಮೆಪಡುವಂತಾಗಿದೆ.

ಕರ್ನಾಟಕ ಕುಸ್ತಿ ಸಂಘದ ಅಧ್ಯಕ್ಷರಾದ ಇವರ ಅವಧಿಯಲ್ಲಿ ಅನೇಕ ಟೂರ್ನಮೆಂಟ್‌ಗಳು ನಡೆದಿದ್ದು, ಅನೇಕ ಕುಸ್ತಿಪಟುಗಳು ಬಹುಮಾನಗಳನ್ನು ಪಡೆದಿರುತ್ತಾರೆ. ಇವರು ಬಂದ ನಂತರ ಕರ್ನಾಟಕ ಕುಸ್ತಿ ಪಟುಗಳಿಗೆ ಆನೆ ಬಲ ಬಂದಂತಾಗಿದೆ ಎಂದು ಇತ್ತೀಚೆಗೆ ವರದಿಯಾಗಿತ್ತು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top