ಪೆರ್ನಾಜೆ: ಪುತ್ತೂರು ಸುಳ್ಯ ಕೇರಳ ಗಡಿಭಾಗ ಆನೆಗುಂಡಿ ರಕ್ಷಿತಾರಣ್ಯದಿಂದ ಒಂಟಿ ಸಲಗವು ಡಿ 20ರಂದು ಮುಂಜಾನೆ ತೋಟಗಳಿಗೆ ದಾಳಿ ಮಾಡಿದೆ.

ಪೆರ್ನಾಜೆ ನಿವಾಸಿ ಕುಮಾರ್ ಪೆರ್ನಾಜೆ ಅವರ ತೆಂಗಿನ ಮರ, ಎರಡು ಅಡಿಕೆ ಮರ, ಮೂರು ಬಾಳೆಗಿಡ, ಹಲಸು ಮರವನ್ನು ಚೂರು ಚೂರು ಮಾಡಿದೆ. ಸಮೀಪದ ರಾಘವೇಂದ್ರ ಭಟ್ ಅವರ ತೋಟಕ್ಕೂ ನುಗ್ಗಿ ಮೂರು ಬಾಳೆ ಗಿಡಗಳನ್ನು ನಾಶ ಮಾಡಿದೆ

ಈಗಾಗಲೇ ಮಂಡೆಕೋಲು ಮೂರೂರು ಬೆಳ್ಳಿಪ್ಪಾಡಿ ಹಾಗೂ ಪಂಜಿಕಲ್ಲು ಪರಿಸರದಲ್ಲಿ ಕೃಷಿಕರ ತೋಟಗಳಿಗೆ ದಾಳಿ ನಡೆಸಿ ಒಂಟಿ ಸಲಗ ಒಂದು ಗುಂಪಿನಿಂದ ಬೇರ್ಪಟ್ಟು ಕನಕಮಜಲು ಮುಗೇರಿನಿಂದ ಪೆರ್ನಾಜೆಗೆ ಬಂದು ನೂಜಿಬೈಲು ತನಕ ಹಾನಿಗೊಳಿಸಿದ ಕುರಿತು ವರದಿಯಾಗಿದೆ.