ಡಿ.29-30: ಕಾವು ಬುಶ್ರಾ ವಿದ್ಯಾಸಂಸ್ಥೆಗಳ ಬೆಳ್ಳಿ ಹಬ್ಬ ಸಂಭ್ರಮ ‘ಬುವಿ ಉತ್ಸವ-2023’ | ನವೀಕೃತ ಸಭಾಂಗಣ ‘ಬುಶ್ರಾ ಅಡಿಟೋರಿಯಂ’ ಉದ್ಘಾಟನೆ

ಪುತ್ತೂರು: ಬೆಳ್ಳಿಹಬ್ಬದ ಹೊಸ್ತಿಲಲ್ಲಿರುವ ಪುತ್ತೂರಿನ ಗ್ರಾಮೀಣ ಪ್ರದೇಶದ ಕಾವು ಬುಶ್ರಾ ವಿದ್ಯಾಸಂಸ್ಥೆಯಲ್ಲಿ ಬೆಳ್ಳಿಹಬ್ಬ ಸಂಭ್ರಮ “ಬುವಿ ಉತ್ಸವ-2023” ಹಾಗೂ ನವೀಕೃತಗೊಂಡ ಸಭಾಂಗಣ “ಬುಶ್ರಾ ಅಡಿಟೋರಿಯಂ”ನ ಉದ್ಘಾಟನಾ ಸಮಾರಂಭ ಡಿ.29 ಹಾಗೂ 30 ರಂದು ವಿದ್ಯಾಸಂಸ್ಥೆಯ ಆವರಣದಲ್ಲಿ ನಡೆಯಲಿದೆ ಎಂದು ಸಂಸ್ಥೆಯ ಶೈಕ್ಷಣಿಕ ಸಲಗಹೆಗಾರರಾದ ಕೃಷ್ಣಪ್ರಸಾದ್ ತಿಳಿಸಿದ್ದಾರೆ.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಬೆಳಿಗ್ಗೆ 9.45 ಕ್ಕೆ ಧ್ವಜಾರೋಹಣವನ್ನು ಕಾವು ಬುಶ್ರಾ ಎಜುಕೇಶನಲ್ ಟ್ರಸ್ಟ್ ನ ಅಧ್ಯಕ್ಷ ಜ.ಅಬ್ದುಲ್ ಅಝೀಝ್‍ನೆರವೇರಿಸಲಿದ್ದು, ಶ್ರೀ ರಾಮಕೃಷ್ಣ ಪ್ರೌಢಶಾಲಾ ದೈಹಿಕ ಶಿಕ್ಷಣ ಶಿಕ್ಷಕಿ ಸುನೀತಾ ಎಂ., ಪಾಪೆಮಜಲು ಸರಕಾರಿ ಶಾಲಾ ಸಹಶಿಕ್ಷಕಿ ಮೇಬಲ್ ಡಿ’ಸೋಜಾ, ಬುಶ್ರಾ ಎಜುಕೇಶನಲ್ ಟ್ರಸ್ಟ್ ಸದಸ್ಯೆ ಆಯಿಷತ್ ಶಮೀಮಾ ಉಪಸ್ಥಿತರಿರುವರು. ಡಿ.29 ರಂದು ಬೆಳಿಗ್ಗೆ 10 ಗಂಟೆಗೆ ನಡೆಯುವ ಸಭಾ ಕಾರ್ಯಕ್ರಮವನ್ನು ಕಾವು ಬುಶ್ರಾ ಎಜುಕೇಶನಲ್ ಟ್ರಸ್ಟ್ ನ ಅಧ್ಯಕ್ಷ ಜ.ಅಬ್ದುಲ್ ಅಝೀಝ್‍ಉದ್ಘಾಟಿಸಿ ಸಮಾರಂಭದ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಸುದಾನ ವಸತಿಯುತ ಶಾಲಾ ಸಂಚಾಲಕ ರೆ.ವಿಜಯ ಹಾರ್ವಿನ್, ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ಸ್ಥಾಪಕಾಧ್ಯಕ್ಷ ಅರುಣ್ ಕುಮಾರ್ ಪುತ್ತಿಲ, ಕಾವು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ನನ್ಯ ಅಚ್ಯುತ ಮೂಡೆತ್ತಾಯ, ಸಂಸ್ಥೆಯ ಶಿಕ್ಷಕ-ರಕ್ಷಕ ಸಂಘದ ಮಾಜಿ ಅಧ್ಯಕ್ಷ ಐ.ಸಿ.ಕೈಲಾಸ್‍ಪಾಲ್ಗೊಳ್ಳಲಿದ್ದಾರೆ. ಸಾಕ್ಷ್ಯಚಿತ್ರ ಬಿಡುಗಡೆಯನ್ನು ಸುಳ್ಯ ಕೆವಿಜಿ ಆಯುರ್ವೇದ ಕಾಲೇಜು ಪ್ರಾಂಶುಪಾಲ ಡಾ.ಲೀಲಾಧರ ಡಿ.ವಿ., ಅರಿಯಡ್ಕ ಗ್ರಾಪಂ ಸದಸ್ಯ ಸಂತೋಷ್ ಮಣಿಯಾಣಿ ಕುತ್ಯಾಡಿ, ಬುಶ್ರಾ ಎಜುಕೇಶನ್ ಟ್ರಸ್ಟ್ ಸದಸ್ಯರಾದ ಜ.ಜಬ್ಬಾರ್, ನೂರುದ್ದೀನ್ ಬಿ.ಎ., ಕುಂಬ್ರ ಕೆಐಸಿ ಸಂಘಟನಾ ಕಾರ್ಯದರ್ಶಿ ಅನೀಸ್‍ಕೌಸರಿ ನೆರವೇರಿಸುವರು. ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರದ ಸಾಧಕರಾದ ಚಿತ್ತರಂಜನ್ ಬೋಳಾರ (ಸಹಕಾರ), ಸಾಯಿಶ್ರುತಿ ಪಿಲಿಕಜೆ (ಕಲಾ), ಉಮೇಶ್ ಮಣಿಕ್ಕಾರ (ಶಿಕ್ಷಣ), ಅಜಿತ್ ಗೌಡ ಐವರ್ನಾಡು (ಜಾನಪದ), ಡಾ.ಆಯಿಷತ್ ಮುನೀರಾ (ವೈದ್ಯಕೀಯ) ಹಾಗೂ ಮೀಫ್‍ಸಂಸ್ಥೆ (ಶೈಕ್ಷಣಿಕ) ಸನ್ಮಾನಿಸಲಾಗುವುದು ಎಂದು ತಿಳಿಸಿದರು.

ಡಿ.30 ರಂದು ಸಂಜೆ 5 ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಬಳಿಕ 6.30 ಕ್ಕೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ಆಶೀರ್ವಚನ ನೀಡಲಿದ್ದು, ವಿಧಾನಸಭೆ ಸಭಾಧ್ಯಕ್ಷ ಯು.ಟಿ.ಖಾದರ್ ಉದ್ಘಾಟಿಸುವರು. ಸಂತ ಫಿಲೋಮಿನಾ ಕಾಲೇಜು ಪ್ರಾಂಶುಪಾಲ ರೆ.ಫಾ.ಆಂಟನಿ ಪ್ರಕಾಶ್ ಮೊಂತೆರೊ, ಮಾಡನ್ನೂರು ನೂರುಲ್ ಹುದಾ ಪ್ರಾಂಶುಪಾಲ, ನ್ಯಾಯವಾದಿ ಹನೀಫ್‍ಹುದವಿ ದೇಲಂಪಾಡಿ ದಿವ್ಯ ಸಂದೇಶ ನೀಡುವರು. ಕಾವು ಬುಶ್ರಾ ಎಜುಕೇಶನಲ್ ಟ್ರಸ್ಟ್ ನ ಅಧ್ಯಕ್ಷ ಜ.ಅಬ್ದುಲ್ ಅಝೀಝ್‍ ಅಧ್ಯಕ್ಷತೆ ವಹಿಸುವರು. ಸಂಸದ ನಳಿನ್ ಕುಮಾರ್ ಕಟೀಲ್ ಸ್ಮರಣ ಸಂಚಿಕೆ ಬಿಡುಗಡೆ ಮಾಡುವರು. ಮುಖ್ಯ ಅತಿಥಿಗಳಾಗಿ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ, ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ, ಶಿಕ್ಷಣಾಧಿಕಾರಿ ಲೋಕೇಶ್‍ಎಸ್‍.ಆರ್‍., ರಾಮಕೃಷ್ಣ ಪ್ರೌಢಶಾಲಾ ಸಂಚಾಲಕ ಹೇಮನಾಥ ಶೆಟ್ಟಿ ಕಾವು, ಬುಶ್ರಾ ಸಂಸ್ಥೆಯ ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷೆ ಹೀರಾ ಅಬ್ದುಲ್ ಖಾದರ್ ಹಾಜಿ, ಬುಶ್ರಾ ಎಜುಕೇಶನಲ್ ಟ್ರಸ್ಟ್ ಸದಸ್ಯ ಖಲಂದರ್ ಶಾಫಿ, ಡಿಗ್ನಿಟಿ ಗ್ರೂಪ್ ನಿರ್ದೇಶಕ ಜ.ಬಾತಿಷ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರದ ಸಾಧಕರಾದ ಪದ್ಮಶ್ರೀ ಹರೇಕಳ ಹಾಜಬ್ಬ (ಶಿಕ್ಷಣ), ಪದ್ಮಶ್ರೀ ಗಿರೀಶ್‍ಭಾರಧ್ವಜ್ (ತಂತ್ರಜ್ಞಾನ), ಪದ್ಮಶ್ರೀ ಮಹಾಲಿಂಗ ನಾಯ್ಕ (ಸುರಂಗ ತಜ್ಷ ಕೃಷಿ), ಕ್ಯಾ.ಧನಂಜಯ ನಾಯ್ತೊಟ್ಟು (ನಿವೃತ್ತ ಯೋಧ), ಡಾ.ಆರ್‍.ಕೆ.ನಾಯರ್ (ಪರಿಸರ), ಡಾ.ಯು.ಪಿ.ಶಿವಾನಂದ (ಪತ್ರಿಕೋದ್ಯಮ), ಜೀವನ್‍ರಾಂ ಸುಳ್ಯ (ರಂಗಭೂಮಿ), ದೀಕ್ಷಿತ್ ಬದಿಕಾನ (ಯುವ ಉದ್ಯಮಿ) ಹಾಗೂ ಕಡಮಜಲು ಸುಭಾಷ್ ರೈ (ಕೃಷಿ) ಅವರನ್ನು ಸನ್ಮಾನಿಸಲಾಗುವುದು ಎಂದು ತಿಳಿಸಿದರು.































 
 

ಪತ್ರಿಕಾಗೋಷ್ಠಿಯಲ್ಲಿ ಬುಶ್ರಾ ವಿದ್ಯಾಸಂಸ್ಥೆಯ ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ಅಬ್ದುಲ್ ಖಾದರ್ ಹಾಜಿ, ಮುಖ್ಯ ಶಿಕ್ಷಕಿ ದೀಪಿಕಾ ಚಾಕೋಟೆ, ಬುಶ್ರಾ ಎಜುಕೇಶನಲ್ ಟ್ರಸ್ಟ್ ನಿರ್ದೇಶಕ ಬದ್ರುದ್ದೀನ್ ಬಿ.ಎ., ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಯಶ್ವಿತ್ ಕಾಳಮ್ಮನೆ, ಹಿರಿಯ ಶಿಕ್ಷಕಿ ಹೇಮಲತಾ ಕಜೆ ಉಪಸ್ಥಿತರಿದ್ದರು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top