ಹಿಂಜಾವೇ ಕಾರ್ಯಕರ್ತ ಪ್ರವೀಶ್ ಗಡಿಪಾರು | ಆದೇಶ ಹಿಂಪಡೆಯಲು ಪುತ್ತಿಲ ಪರಿವಾರದಿಂದ ಎಸಿಗೆ ಮನವಿ | ಕಾರ್ಯಕರ್ತನಿಗೆ ಸುಳ್ಳು ಪ್ರಕರಣದಲ್ಲಿ ಅನ್ಯಾಯವಾದರೆ ಬಿಡುವ ಪ್ರಶ್ನೆಯೇ ಇಲ್ಲ

ಪುತ್ತೂರು : ಹಲವು ಪ್ರಕರಣಗಳಲ್ಲಿ ಇದ್ದಾರೆಂದು ಬಿಂಬಿಸಿ ಈಶ್ವರಮಂಗಲದ ಹಿಂದೂ ಸಂಘಟನೆಯ ಕಾರ್ಯಕರ್ತ ಪ್ರವೀಶ್ ನಾಯರ್ ನ ಗಡಿಪಾರು ಆದೇಶವನ್ನು ತಡೆ ಹಿಡಿಯಬೇಕೆಂದು ಪುತ್ತಿಲ ಪರಿವಾರ ಎಸಿಗೆ ಮನವಿ ಮಾಡಿದೆ.

ಪುತ್ತೂರಿನ ಸಹಾಯಕ ಆಯುಕ್ತ ಗಿರೀಶ್ ನಂದನ್ ಅವರಿಗೆ ಪುತ್ತಿಲ ಪರಿವಾರದ ಪ್ರಮುಖರು ಮನವಿ ಸಲ್ಲಿಸಿ ಪ್ರವೀಶ್ ನಾಯರ್ ರವರ ಗಡಿಪಾರು ಆದೇಶ ಹಿಂಪಡೆಯಬೇಕು ಎಂದು ಮನವಿ ಮಾಡಿದೆ.

ಇಲಾಖಾ ಆದೇಶದಂತೆ  ಹಿಂದೂ ಕಾರ್ಯಕರ್ತ ಪ್ರವೀಶ್ ನಾಯರ್ ಕುಂಟಾಪು ಇವರಿಗೆ ವಿನಾಕಾರಣ ಬೀದರ್‌ಗೆ ಗಡಿಪಾರಿಗೆ ಆದೇಶ ನೀಡಿರುತ್ತೀರಿ.  ಪ್ರವೀಶ್ ನಾಯರ್ ಅವರ ವಿರುದ್ಧ ಯಾವುದೇ ಪ್ರಕರಣಗಳು ಬಾಕಿ ಇರುವುದಿಲ್ಲ. ಹಿಂದೆ ಇದ್ದ ಪ್ರಕರಣಗಳು ಕೂಡ ಪುತ್ತೂರು ನ್ಯಾಯಾಲಯದಲ್ಲಿ ಮುಕ್ತಾಯಗೊಂಡಿರುತ್ತದೆ. ಅದಲ್ಲದೆ ಪ್ರವೀಶ್ ನಾಯರ್ ಇವರಿಗೆ ಉಪ್ಪಿನಂಗಡಿ ಪೋಲಿಸ್ ಠಾಣಾ ಅ ಕ್ರ ಅ.ಕ್ರ:12/2023 ಕಲಂ 365 ರಲ್ಲಿ ಎಫ್.ಐ.ಆರ್ ನಲ್ಲಿ ಪ್ರವೀಶ್ ನಾಯರ್ ಅವರ ಹೆಸರು ಇರುವುದಿಲ್ಲ. ವಿನಾಕಾರಣ ಚಾರ್ಜ್ ಶೀಟ್‌ನಲ್ಲಿ ಆತನನ್ನು ಸೇರ್ಪಡಿಸಿ ಆ ಕೇಸಿನಲ್ಲಿ ಸಿಲುಕಿಸುವ ಪ್ರಯತ್ನವನ್ನು ಪೋಲೀಸ್ ಅಧಿಕಾರಿಗಳು ಮಾಡಿರುತ್ತಾರೆ.































 
 

ಕ್ಷುಲ್ಲಕ ಕಾರಣವನ್ನು ಇಟ್ಟುಕೊಂಡು ಹಿಂದೂ ಕಾರ್ಯಕರ್ತರ ಮೇಲೆ ವಿನಾಕಾರಣ ಗಡಿಪಾರು ಮಾಡುವ ಆದೇಶವನ್ನು ಮಾನ್ಯ ಸಹಾಯಕ ಆಯಕ್ತರು ರದ್ದು ಪಡಿಸಬೇಕು. ಇಲ್ಲವಾದಲ್ಲಿ ಪುತ್ತಿಲ ಪರಿವಾರದ ವತಿಯಿಂದ ಹೋರಾಟ ನಡೆಸಬೇಕಾದಿತು ಎಂದು ಮನವಿ ಸಲ್ಲಿಸಲಾಗಿದೆ.

ಈ ಸಂದರ್ಭದಲ್ಲಿ ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ,  ಪ್ರಮುಖರಾದ ಶಿವಾನಂದ್ ವಿಟ್ಲ, ಚಂದ್ರಹಾಸ್ ಈಶ್ವರಮಂಗಲ, ಶ್ರೀಕಾಂತ್ ಹಿಂದಾರ್,  ನವೀನ್, ರವಿ ಉಪಸ್ಥಿತರಿದ್ದರು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top